Advertisement
ರಾಜ್ಯದ ರೈತರು ಸಂಕಷ್ಟದಲ್ಲಿ ಇದ್ದಾರೆ. ಸಾಲಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಕುಮಾರ ಸ್ವಾಮಿ ಬರುತ್ತಾರೆ ಎಂಬ ನಿರೀಕ್ಷೆ ಇದೆ.-ಕೃಷ್ಣ, ಚಿಕ್ಕಲ್ಲಸಂದ್ರದ ನಿವಾಸಿ.
-ಚಂದ್ರಶೇಖರ್,ಬಸವನಗುಡಿ. ಕುಮಾರಸ್ವಾಮಿ ಅವರು ಕೆಲಸ ಮಾಡುವಂತ ವ್ಯಕ್ತಿ. ಅವರ ಆಡಳಿತ ಅವಧಿಯಲ್ಲಿ ಇಡೀ ರಾಜ್ಯ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂಬ ನಿರೀಕ್ಷೆ ಇದೆ.
-ಸತೀಶ್, ರಾಮನಗರ.
Related Articles
-ಸುಲೋಚನಾ ಶೇಷಾದ್ರಿಪುರ ನಿವಾಸಿ.
Advertisement
ಕುಮಾರಣ್ಣ ಅವರು ಬಡವರ ಆಶಾಕಿರಣ ಎಂದು ಬಣ್ಣಿಸಿಕೊಂಡಿದ್ದಾರೆ. ಬಿಬಿಎಂಪಿ ಸೇರಿದಂತೆ ಹಲವು ಇಲಾಖೆಯಲ್ಲಿ ಹೊರ ಗುತ್ತಿಗೆಯಲ್ಲಿ ದುಡಿಯುತ್ತಿದ್ದಾರೆ. ಅವರ ನೆರವಿಗೆ ಬರುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ.-ವಿಜಯಮ್ಮ, ಮಲ್ಲೇಶ್ವರ ನಿವಾಸಿ. ನಾವು ಬಡವರು, ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಆದರೆ ನಮ್ಮ ಮಕ್ಕಳನ್ನು ಓದಿಸುವಂತಹ ಪರಿಸ್ಥಿತಿಯಲ್ಲಿ ನಾವು ಇಲ್ಲ. ಕುಮಾರ ಸ್ವಾಮಿ ಅವರು ಬಡ ಮಕ್ಕಳ ಓದಿನ ಸಹಾಯಕ್ಕೆ ಬರಲಿ.
-ನಾಗಮ್ಮ, ಸಂಪಿಗೆ ರಸ್ತೆ ನಿವಾಸಿ. ನಾನು ಸರ್ಕಾರಿ ಇಲಾಖೆಯೊಂದರಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇನೆ. ಆದರೆ ನನಗೂ ಸೇರಿದಂತೆ ಹಲವರಿಗೆ ಉದ್ಯೋಗ ಭದ್ರತೆಯ ಭಯ ಕಾಡುತ್ತಿದೆ. ಇದನ್ನು ಕುಮಾರಸ್ವಾಮಿ ಅವರು ಸಿಎಂ ಆದ ಮೇಲೆ ಸರಿಪಡಿಸುತ್ತಾರೆ ಎಂಬ ನಿರೀಕ್ಷೆಯಿದೆ.
-ಪದ್ಮಾವತಿ, ಶೇಷಾದ್ರಿ ಪುರದ ನಿವಾಸಿ. ಯುವಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ಭವಿಷ್ಯದ ಯೋಜನೆಗಳನ್ನು ರೂಪಿಸಬೇಕು. ಉದ್ಯೋಗಕ್ಕಾಗಿ ಅಲೆಯುವುದನ್ನು ತಪ್ಪಿಸಬೇಕು.
-ಸೈಫುದ್ದೀನ್, ಅತ್ತಿಬೆಲೆ ನಿವಾಸಿ. ಕುಮಾರಸ್ವಾಮಿ ಅವರ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವರು ಎಂಬ ನಂಬಿಕೆ ಇದೆ.
-ಅಭಿಷೇಕ, ಸೇವಾನಗರದ ನಿವಾಸಿ. ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗ್ಬೇಕು ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಅದು, ಈಗ ಮತ್ತೆ ಈಡೇರಿದೆ. ನಾಡಿನ ಒಳಿತಿಗಾಗಿ ಹೊಸ ಯೋಜನೆಗಳನ್ನು ತರುತ್ತಾರೆ ಎಂಬ ನಿರೀಕ್ಷೆ ಇದೆ.
-ಅವಿನಾಶ್.