Advertisement

ಶಿಕ್ಷಣದಲ್ಲಿ ಸಂಶೋಧನೆಗೆ ಆದ್ಯತೆ ಅಗತ್ಯ: ಪ್ರೊ|ಸಿ.ಎನ್‌.ಆರ್‌. ರಾವ್

03:45 AM Feb 12, 2017 | Team Udayavani |

ಉಳ್ಳಾಲ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿಜ್ಞಾನ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಿದ್ದು, ಸಂಶೋಧನೆಗೆ ಹೆಚ್ಚು ಆದ್ಯತೆ ನೀಡುವುದರೊಂದಿಗೆ ಭವಿಷ್ಯದ ಶ್ರೇಷ್ಠ ವಿಜ್ಞಾನಿಗಳನ್ನು ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ಬೆಂಗಳೂರಿನ ಜವಾಹರ್‌ ಲಾಲ್‌ ನೆಹರೂ ಅಡ್ವಾನ್ಸ್‌ಡ್‌ ಸೈಂಟಿಫಿಕ್‌ ಸಂಶೋಧನಾ ಕೇಂದ್ರದ ಗೌರವ ಅಧ್ಯಕ್ಷ ಹಾಗೂ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ| ಸಿ.ಎನ್‌.ಆರ್‌. ರಾವ್‌ ಅಭಿಪ್ರಾಯ ಪಟ್ಟರು.

Advertisement

ಅವರು ಶನಿವಾರ ದೇರಳಕಟ್ಟೆಯಲ್ಲಿರುವ ಯೇನಪೊಯ ವಿಶ್ವವಿದ್ಯಾನಿಲಯದಲ್ಲಿ ಯೇನಪೊಯ ಪ್ರತಿಷ್ಠಾನದ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಯೇನಪೊಯ ನಾರ್ಕೋಟಿಕ್ಸ್‌ ಎಜುಕೇಶನ್‌ ಫೌಂಡೇಶನ್‌ ಉದ್ಘಾಟಿಸಿ ಪ್ರಥಮ ವಿಶೇಷ ಉಪನ್ಯಾಸ ನೀಡಿದರು. 

ಯೇನಪೊಯ ವಿಶ್ವಧಿವಿದ್ಯಾನಿಲಯ ಕಳೆದ ಶೈಕ್ಷಣಿಕ ವರ್ಷಧಿದ ಘಟಿಕೋತ್ಸವದಲ್ಲಿ ಪ್ರೊ| ಸಿಎನ್‌ಆರ್‌ ರಾವ್‌ ಅವರಿಗೆ ವೈಜ್ಞಾನಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಘೋಷಿಸಿದ್ದ ಗೌರವ ಡಾಕ್ಟರೇಟ್‌ ಪದವಿಯನ್ನು ವಿಶ್ವವಿದ್ಯಾನಿಲಯದ ಕುಲಪತಿ ವೈ. ಅಬ್ದುಲ್ಲ ಕುಂಞಿ ಪ್ರದಾನ ಮಾಡಿದರು.
ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಕಠಿನವಾಗಿದ್ದು, ಇದಕ್ಕೆ ಉನ್ನತ ದರ್ಜೆಯ ಶಿಕ್ಷಣದೊಂದಿಗೆ ಉತ್ತಮ ಸಂಧಿಶೋಧಿಧಕರ ಮಾರ್ಗದರ್ಶನ ಅತೀ ಮುಖ್ಯ. ಭಾರತದಲ್ಲಿ ಉನ್ನತ
ಶಿಕ್ಷಣ ಸಂಸ್ಥೆಗಳಿದ್ದರೂ ವಿದೇಶಧಿದಲ್ಲಿ ದೊರೆಯುವ ಶಿಕ್ಷಣ ಕ್ರಮ ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದೇಶದಲ್ಲಿ ಸಿಗುವಂತಹ ಪ್ರಥಮ ದರ್ಜೆಯ ಶಿಕ್ಷಣ ಕ್ರಮವನ್ನು ಭಾರತದಲ್ಲಿರುವ ಯುವ ಸಂಶೋಧಕರಿಗೆ ನೀಡಿದಲ್ಲಿ ಉನ್ನತ ಮಟ್ಟದ ವಿಜ್ಞಾನಿಗಳು ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಮುಖ್ಯ ಅತಿಥಿಯಾಗಿದ್ದ ಡಾ| ಇಂದುಮತಿ ರಾವ್‌ ಅವರನ್ನು ಯೇನಪೊಯ ವಿವಿ ವತಿಯಿಂದ ನಸ್ರಿàನಾ ಅಬ್ದುಲ್ಲ ಸಮ್ಮಾನಿಸಿದರು. ಯೇನಪೊಯ ವಿವಿ ಕುಲಪತಿ
ವೈ. ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಯೇನಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ. ಮಹಮ್ಮದ್‌ ಕುಂಞಿ ಉಪಸ್ಥಿತರಿದ್ದರು.
ಉಪ ಕುಲಪತಿ ಡಾ| ಎಂ. ವಿಜಯಕುಮಾರ್‌ ಸ್ವಾಗತಿಸಿದರು. ಕುಲಸಚಿವ ಡಾ| ಜಿ. ಶ್ರೀಕುಮಾರ್‌ ಮೆನನ್‌ ವಂದಿಸಿದರು. ಡಾ| ಮಲ್ಲಿಕಾ ಶೆಟ್ಟಿ ಮತ್ತು ಡಾ| ರಚೆಲ್ಲಾ ಟೆಲ್ಲಿಸ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next