Advertisement

Bengaluru: ತುಪ್ಪದ 5 ಸ್ಯಾಂಪಲ್‌ಗಳಲ್ಲಿ ಅಪಾಯದ ಅಂಶಗಳು ಪತ್ತೆ: ಸಚಿವ ಗುಂಡೂರಾವ್‌

12:41 PM Oct 26, 2024 | Team Udayavani |

ಬೆಂಗಳೂರು: ಇಲಾಖೆಯು ನಗರದ ವಿವಿಧ ಭಾಗಗಳಲ್ಲಿ ಸತತವಾಗಿ ಆಹಾರ ಉತ್ಪನ್ನಗಳ ಗುಣಮಟ್ಟದ ಪರೀಕ್ಷೆಯನ್ನು ನಡೆಸುತ್ತಾ ಬಂದಿದೆ. ಇತ್ತೀಚೆಗೆ ತೀವ್ರ ವಿವಾದಕ್ಕೀಡಾದ ತುಪ್ಪದ ಸ್ಯಾಂಪಲ್‌ಗ‌ಳನ್ನು ಕೂಡ ಪರೀಕ್ಷಿಸಲಾಗಿದೆ.

Advertisement

ಒಟ್ಟು 230 ಸ್ಯಾಂಪಲ್‌ಗ‌ಳಲ್ಲಿ 224 ಸ್ಯಾಂಪಲ್‌ಗ‌ಳು ಸೇವನೆಗೆ ಸುರಕ್ಷಿತವಾಗಿದ್ದು, 5 ಸ್ಯಾಂಪಲ್‌ಗ‌ಳು ಅಸುರಕ್ಷಿತ ಎಂದು ಕಂಡುಬಂದಿದೆ. ಒಂದು ಸ್ಯಾಂಪಲ್‌ ಮಾತ್ರ ಕಳಪೆ ಗುಣಮಟ್ಟದ್ದಾಗಿದೆ ಎಂದು ವರದಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂ ರಾವ್‌ ಮಾಹಿತಿ ಹಂಚಿಕೊಂಡರು.

ನಗರದಲ್ಲಿ ‘ಮ್ಯಾಜಿಕ್‌ ಬಾಕ್ಸ್‌’ ಆಹಾರ ಪರೀಕ್ಷಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಲಬೆರಕೆ ಆಹಾರ ತಪಾಸಣೆಗೆ ಪ್ರಾಯೋಗಿಕವಾಗಿ ಮ್ಯಾಜಿಕ್‌ ಬಾಕ್ಸ್‌ ಅಳವಡಿಸಲಾಗಿದೆ. ಇದು ಯಶಸ್ವಿಯಾದರೆ ಎಲ್ಲ ಕಡೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next