ಜೇವರ್ಗಿ: ಸಮಾಜದ ಮುಖಂಡರು ಒಗ್ಗಟ್ಟಾಗುವುದರ ಮೂಲಕ ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಜಿಪಂ ಆರೊಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಚನ್ನಮಲ್ಲಯ್ಯ ಹಿರೇಮಠ ಹೇಳಿದರು. ಪಟ್ಟಣದ ಮಿನಿವಿಧಾನಸೌಧ ಕಚೇರಿ ಆವರಣದಲ್ಲಿ ತಾಲೂಕಾಡಳಿತದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಡಾ| ಬಾಬು ಜಗಜೀವನರಾಮ್ ಅವರ 110ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಬು ಜಗಜೀವನರಾಮ್ ಅವರ ನಡೆ-ನುಡಿಗಳು ನಮಗೆ ಆದರ್ಶವಾಗಬೇಕು. ಸಮಾಜದ ಭಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣವಂತರನ್ನಾಗಿ ಮಾಡಲು ಶ್ರಮ ವಹಿಸಬೇಕು. ರಾಜಕೀಯ ಅಧಿಧಿಕಾರ ಪಡೆಯಬೇಕಾದರೆ ಸಮಾಜದಲ್ಲಿ ಒಗ್ಗಟ್ಟು ಪ್ರದರ್ಶನ ಮುಖ್ಯ. ಸಮಾಜ ಎಲ್ಲಿಯವರೆಗೆ ಒಂದಾಗುವುದಿಲ್ಲವೋ ಅಲ್ಲಿಯವರೆಗೆ ಸಾಮಾಜಿಕ, ಆರ್ಥಿಕವಾಗಿ ಗುಲಾಮಗಿರಿ ಅನುಭವಿಸಬೇಕಾಗುತ್ತದೆ.
ಪ್ರತಿಯೊಂದು ಹಳ್ಳಿಗಳಲ್ಲಿಯೂ ಸಮಾಜದ ಸಂಘಟನೆಗಳನ್ನು ಬೆಳೆಸಬೇಕು ಎಂದು ಹೇಳಿದರು. ಸಮಾಜದ ಮುಖಂಡ ಮಲ್ಲಿಕಾರ್ಜುನ ದಿನ್ನಿ ಮಾತನಾಡಿ, ಬರುವ ಒಂದು ವರ್ಷದ ಒಳಗೆ ಪಟ್ಟಣದಲ್ಲಿ ಭವ್ಯವಾದ ಡಾ| ಬಾಬು ಜಗಜೀವನರಾಮ್‌ಪುತ್ಥಳಿ ನಿರ್ಮಾಣವಾಗಬೇಕು. ಶಾಸಕ ಡಾ| ಅಜಯಸಿಂಗ್ ಸಮಾಜದವರಿಗೆ ಜಿಪಂ, ತಾಪಂ ಸ್ಥಾನಗಳಿಂದ ವಂಚಿತರನ್ನಾಗಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಎದುರಿಸಲಿದ್ದಾರೆ.
ಮುಂಬರುವ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಪುರಸಭೆ ಅಧ್ಯಕ್ಷೆ ರೇಣುಕಾ ಶರಣು ಗುತ್ತೇದಾರ ಉದ್ಘಾಟಿಸಿದರು. ಸುರಪುರದ ಕರ್ನಾಟಕ ಬಿಎಡ್ ಕಾಲೇಜಿನ ಪ್ರಾಚಾರ್ಯ ಧರ್ಮಣ್ಣ ಕೆ. ಉಪನ್ಯಾಸ ನೀಡಿದರು.
ತಹಶೀಲ್ದಾರ ಯಲ್ಲಪ್ಪ ಸುಬೇದಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಪ್ರಭು ಮಾನೆ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮರೆಪ್ಪ ಕೋಬಾಳಕರ, ಮುಖಂಡರಾದ ಯಲ್ಲಪ್ಪ ಕೂಟನೂರ, ಮಲ್ಲಿಕಾರ್ಜುನ ಆಂದೋಲಾ, ಮಾನಪ್ಪ ಗೋಗಿ, ಬಾಗಪ್ಪ ಯಲಗೋಡ, ಮಾನಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಅವರಾದಿ,
ಈಶ್ವರ ಹಿಪ್ಪರಗಿ, ಹಣಮಂತ ಶಾಬಾದ, ಭೀಮರಾಯ ಹಳ್ಳಿ, ಭೀಮರಾಯ ಆಲಾಳ, ರಾಜು ಕಾಚಾಪುರ, ಸೈದಪ್ಪ ಇಜೇರಿ, ಮಡಿವಾಳಪ್ಪ ಸುಂಬಡ, ಗುರುಪಾದ ಮರಕಲ್, ಹಳ್ಳೆಪ್ಪ ವಕೀಲ, ಸಿದ್ದು ಸುಂಬಡ, ಚಂದ್ರು ಕೋರಿ, ಮಾಬು ಕುಮಾರ, ಬಸವರಾಜ ಹೊಸಮನಿ, ಈಶು ಭಜೆಂತ್ರಿ ಇದ್ದರು. ಕರೆಪ್ಪ ಹುಣಸಿಹಾಳ ನಿರೂಪಿಸಿ, ವಂದಿಸಿದರು.