Advertisement

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಅಗತ್ಯ

02:14 PM Aug 15, 2021 | Team Udayavani |

ಯಾದಗಿರಿ: ಪ್ರತಿಯೊಬ್ಬ ವಿದ್ಯಾರ್ಥಿಗಳು ರಾಷ್ಟ್ರಾಭಿಮಾನರೂಢಿಸಿಕೊಂಡು ನಾಡಪ್ರೇಮ ಬೆಳೆಸಿಕೊಳ್ಳಬೇಕೆಂದುಪ್ರಾಂಶುಪಾಲ ಡಾ| ಸುಭಾಶ್ಚಂದ್ರ ಕೌಲಗಿ ವಿದ್ಯಾರ್ಥಿಗಳಿಗೆಕರೆ ನೀಡಿದರು.

Advertisement

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿಕಲಬುರಗಿಯ ನೆಹರೂ ಯುವ ಕೇಂದ್ರದಸಂಯುಕ್ತಾಶ್ರಯದಲ್ಲಿ “ಆಜಾದಿ ಕಾ ಅಮೃತಮಹೋತ್ಸವ’ ಕಾರ್ಯಕ್ರಮದ ಅಂಗವಾಗಿ μಟ್‌ಇಂಡಿಯಾ μÅàಡಮ್‌ ಓಟಕ್ಕೆ ಚಾಲನೆ ನೀಡಿ ಅವರುಮಾತನಾಡಿದರು. ದೇಶಕ್ಕೆ ಸ್ವಾತಂತ್ರ ಲಭಿಸಿ 75ವರ್ಷಗಳು ಸಂದ ಸಡಗರದ ಸಂಭ್ರಮದಲ್ಲಿ ನಾವಿದ್ದೇವೆ.ಅದಕ್ಕಾಗಿ ಪ್ರತಿಯೊಬ್ಬ ಭಾರತೀಯ ಅಭಿಮಾನ ಪಡುವಸಂಗತಿಯಾಗಿದೆಯೆಂದು ಹೇಳಿದರು.

ನೆಹರೂ ಯುವ ಕೇಂದ್ರದ ಹರ್ಷಲ್‌ ಸಿದ್ಧಾರ್ಥತಳಸ್ಕರ್‌ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನಮೂಡಿಸಲಾಗುತ್ತಿದೆಯೆಂದು ಹೇಳಿದರು.ಡಾ| ಸರ್ವೋದಯ ಶಿವಪುತ್ರ, ಪ್ರೊ| ಶರಣಬಸಪ್ಪರಾಯಿಕೋಟಿ, ಡಾ| ಅಶೋಕರೆಡ್ಡಿ ಬಿ. ಪಾಟೀಲ, ಡಾ|ಚಂದ್ರಶೇಖರ ಕೊಂಕಲ್‌, ಟ್ರಾμಕ್‌ ಪಿಎಸ್‌ಐ ಮೆಹಬೂಬ,ಎಎಸ್‌ಐ ಕಲ್ಯಾಣಿ ಸೇರಿದಂತೆ ಇತರರಿದ್ದರು. ಸಿದ್ರಾಮಪ್ಪಾಸ್ವಾಗತಿಸಿದರು.

ರಾಘವೇಂದ್ರ ಬಂಡಿಮನಿ ನಿರೂಪಿಸಿ,ವಂದಿಸಿದರು.ಸರ್ಕಾರಿ ಪದವಿ ಕಾಲೇಜಿನಿಂದ ಪ್ರಾರಂಭವಾದಮ್ಯಾರಥಾನ್‌ ಓಟ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿನೇತಾಜಿ ವೃತ್ತದ ಮೂಲಕ ಮತ್ತೆ ಪದವಿ ಕಾಲೇಜುತಲುಪಿತು. ಓಟದಲ್ಲಿ ಪಾಲ್ಗೊಂಡ ಎನ್‌ಸಿಸಿ ಮತ್ತುಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಬೋಧಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next