Advertisement

ವಸಡಿನ ಆರೋಗ್ಯ ಕಾಪಾಡಿಕೊಳ್ಳುವ ಆವಶ್ಯಕತೆ 

07:00 AM Jul 23, 2017 | |

ವಕ್ರದಂತ ಚಿಕಿತ್ಸೆಗಾಗಿ ಹಲ್ಲಿನ ಮೇಲೆ ಸರಿಗೆ (Wire) ಹಾಕಿಸಿಕೊಂಡವರಲ್ಲಿ  
ಹಲ್ಲು ಮುಂದೆ ಇರುವವರು, ಹಲ್ಲು ಹಿಂದೆ, ಮುಂದೆ ಇರುವವರು, ಹಲ್ಲಿನ ಪಂಕ್ತಿಯಲ್ಲಿ, ಒಂದು ಹಲ್ಲು ಮೇಲೆ, ಕೆಳಗೆ ಇರುವವರು, ಹಲ್ಲಿನ ಪಂಕ್ತಿಯಲ್ಲಿ ಹಲ್ಲು ಒಂದೇ ರೀತಿಯಲ್ಲಿ ಚಂದವಾಗಿ ಇರಲು, ವಕ್ರದಂತ ಚಿಕಿತ್ಸೆ ಅಥವಾ ಸಾಮಾನ್ಯ ಭಾಷೆಯಲ್ಲಿ  ಹೇಳುವುದಾದರೆ, ಹಲ್ಲಿನ ಸರಿಗೆ ಹಾಕಿಕೊಂಡು, ಹಲ್ಲು ಪಂಕ್ತಿಯನ್ನು ಸರಿಪಡಿಸಿಕೊಳ್ಳುವುದು ಇಂದು ತುಂಬಾ ಸಾಮಾನ್ಯವಾಗಿದೆ. ಸಾಧಾರಣ ಹತ್ತರಲ್ಲಿ 2 ಮಕ್ಕಳಲ್ಲಿ ಹಲ್ಲಿಗೆ ಸರಿಗೆಯ ಚಿಕಿತ್ಸೆ ಮಾಡಿಕೊಂಡಿರುವುದು ಸಾಮಾನ್ಯವಾಗಿದೆ.

Advertisement

ಹಲ್ಲು ಅಕ್ರ-ವಕ್ರವಾಗಿರುವುದರಿಂದ, ಹಲ್ಲುಬ್ಬು  ಇರುವುದರಿಂದ ಹಲ್ಲಿನ ಮೇಲೆ, ದಂತ ಪಾಚಿ ಸಂಗ್ರಹವಾಗುವುದು ಬೇಗ ಮತ್ತು ಇದನ್ನು ಹಲ್ಲುಜ್ಜುವುದರಿಂದ ತೆಗೆಯಲೂ ಕಷ್ಟ ಕೂಡ, ಇದರಿಂದಾಗಿ ವಸಡು ರೋಗವು ಇಂತಹ ಅಕ್ರ-ವಕ್ರವಾಗಿರುವ ಕಡೆ ಸಾಮಾನ್ಯವಾಗಿರುತ್ತದೆ. ವಕ್ರದಂತ ಚಿಕಿತ್ಸೆಯಿಂದ ಹಲ್ಲಿನ ಒಂದೇ ಪಂಕ್ತಿಯಲ್ಲಿ ಇರುವುದರಿಂದ, ವಸಡು ರೋಗವನ್ನು ತಪ್ಪಿಸಬಹುದು.

ಆದರೆ – ವಕ್ರದಂತ ಚಿಕಿತ್ಸೆಯ ಸಮಯದಲ್ಲಿ, ಹಲ್ಲಿನ ಮೇಲೆ ಕೂರಿಸುವ ಬ್ರಾಕೆಟ್‌ಗಳಿಂದ ಮತ್ತು ಸರಣಿಗಳಿಂದ, ದಂತ ಪಾಚಿ ಸಂಗ್ರಹ ಜಾಸ್ತಿಯೂ ಮತ್ತು, ಬ್ರಶ್‌ ಮಾಡುವುದರಿಂದ ಇದನ್ನು ಸುಲಭವಾಗಿ ತೆಗೆಯಲೂ ಸಾಧ್ಯವಾಗದೇ ಇರುವುದರಿಂದ ವಸಡು ರೋಗವು ಹೆಚ್ಚಾಗುವುದು.

ವಕ್ರದಂತ ಚಿಕಿತ್ಸೆಯೂ ಸಾಧಾರಣ ಒಂದರಿಂದ – ಒಂದೂವರೆ – ಎರಡು ವರ್ಷಗಳ ತನಕವೂ, ಕೆಲವೊಮ್ಮೆ ಕ್ಲಿಷ್ಟವಾಗಿರುವ ಹಲ್ಲಿನ ಪಂಕ್ತಿಯಲ್ಲಿ ಇನ್ನು ಹೆಚ್ಚಿನ ಸಮಯವೂ ಬೇಕಾಗಬಹುದು, ಇಷ್ಟು ಸಮಯ ಹಲ್ಲಿನ ಮೇಲೆ, ಬ್ರಾಕೆಟ್‌ ಮತ್ತು ಸರಿಗೆಗಳು ಇರುವುದರಿಂದ, ಹಲ್ಲು ಸ್ವತ್ಛಗೊಳಿಸುವ ಕಾರ್ಯದತ್ತ ಹೆಚ್ಚಿನ ಗಮನ ನೀಡುವುದು ಅಗತ್ಯ.

ಪ್ರತಿಯೊಮ್ಮೆ ಆಹಾರ ತಿಂದ ಅನಂತರ ಚೆನ್ನಾಗಿ ಬಾಯಿ ಮುಕ್ಕಳಿಸುವುದು, ಬ್ರಶ್‌ ಮಾಡುವ ಅಗತ್ಯ ಇರುವುದಾದರೂ ಶಾಲೆಗೆ ಹೋಗುವ ಮಕ್ಕಳಲ್ಲಿ , ಕೆಲಸಕ್ಕೆ ಹೋಗುವವರಲ್ಲಿ ಈ ರೀತಿ ಬ್ರಶ್‌ ಮಾಡಲು ಅಸಾಧ್ಯವಾಗಬಹುದು.

Advertisement

ಆಹಾರ ತೆಗೆದು ಕೊಂಡ ಅನಂತರ, ಚೆನ್ನಾಗಿ ಬಾಯಿ ಮುಕ್ಕಳಿಸುವುದು ಅತ್ಯಗತ್ಯ. ಇದರಿಂದಾಗಿ ಹಲ್ಲಿನ ಮತ್ತು ಸರಿಗೆಗಳ ಮಧ್ಯೆ ಆಹಾರ ಸಿಕ್ಕಿ ಹಾಕಿಕೊಳ್ಳದೇ ಬ್ಯಾಕ್ಟೀರಿಯಾಗಳಿಗೆ ಈ ಆಹಾರವು ಸಿಗದ ಹಾಗೇ, ಇರುವಲ್ಲಿ ಸಹಾಯವಾಗುವುದು.

ಸರಿಯಾದ/ಸಮನಾದ ಅಂತರವಿರದ ವಸಡು ಸರಿ ಮಾಡುವುದು
ಕೆಲವೊಮ್ಮೆ ಹಲ್ಲು ಸರಿಗೆ ಹಾಕಿ ಚಿಕಿತ್ಸೆಯ ಅನಂತರ ವಸಡಿನ ತುದಿ ಒಂದಕ್ಕೊಂದು ಸಮಾನಾದ ಅಂತರವಿರದೇ, ಕೆಲವರಲ್ಲಿ ಎಲ್ಲ ಹಲ್ಲುಗಳು ವಸಡು ತುದಿ ಒಂದೇ ಅಂತರದಲ್ಲಿದ್ದರೇ, ಕೆಲವರಲ್ಲಿ ಅತೀ ಮೇಲೆ ಕಡಿಮೆ ಇರುವುದು, ಇದು, ಕೆಲವರ ಮುಖದ ನಗುವಿನ ಸೌಂದರ್ಯ ಕೆಡಿಸುವುದು ಕೂಡ, ಇದನ್ನು ಸರಿಪಡಿಸಲು, ದಂತ ಸುತ್ತು ಪರೆ ಚಿಕಿತ್ಸೆಯ ತಜ್ಞ (ಚಿಕ್ಕದಾದ ಶಸ್ತ್ರಚಿಕಿತ್ಸೆ ಮಾಡಿ ಇದನ್ನು ಸರಿಪಡಿಸುತ್ತಾರೆ, ಈ ಶಸ್ತ್ರಚಿಕಿತ್ಸೆಗೆ ಎಂದು ಹೇಳುವರು, ಕೆಲವೊಮ್ಮೆ ಒಳಗಿನ ಎಲುಬನ್ನು ಸ್ವಲ್ಪ ತೆಗೆದು ಸರಿಪಡಿಸುವ ಅಗತ್ಯವೂ ಇರಬಹುದು ಕೂಡ.

ವಸಡು ಊದಿಕೊಳ್ಳುವುದು ಮತ್ತು 
ವಸಡಿನಲ್ಲಿ  ಕೀವು ಕಾಣಿಸಿಕೊಳ್ಳುವುದು.

ಕೆಲವರಲ್ಲಿ ಹಲ್ಲಿನ ಉದ್ದ ಕಡಿಮೆಯಿದ್ದು, ಹಲ್ಲಿನ ಮೇಲೆ ಕೊಡಿಸುವ ಬ್ರಾಕೆಟ್‌ ಹಲ್ಲಿನ ಎಲ್ಲಾ ಭಾಗವನ್ನು ಆವರಿಸುವುದರಿಂದ ಮತ್ತು ಬ್ರಕೆಟ್‌ ವಸಡಿಗೆ ಅತೀ ಹತ್ತಿರವಿರುವುದು ಇದರಿಂದಾಗಿ ಬ್ರಾಕೆಟ್‌ ಮೇಲೆ ದಂತ ಪಾಚಿ ಸಂಗ್ರಹವಾಗಿಯೂ ಮತ್ತು ಕೆಲವೊಮ್ಮೆ ಬ್ರಾಕೆಟ್‌ಗೆ ಉಪಯೋಗಿಸುವ ಲೋಹದಿಂದ ವಸಡು ಊದಿಕೊಳ್ಳುವುದು ಸಾಮಾನ್ಯ. 

ಕೆಲವೊಮ್ಮೆ ಈ ವಸಡು ಊದಿಕೊಂಡಿರುವುದರಿಂದ ಹಲ್ಲು ಸ್ವತ್ಛಗೊಳಿಸಲು ಕಷ್ಟವಾಗಬಹುದು. ಅಲ್ಲದೇ ನಮ್ಮ ವಕ್ರ ದಂತ ಚಿಕಿತ್ಸೆ ಮಾಡುವ ವೈದ್ಯರು ಹಾಕುವ ಇಲಾಸ್ಟಿಕ್‌ನ್ನು ಹಾಕಲು ಆಗದೇ ಇರಬಹುದು. ಇಂತಹವರಲ್ಲಿ ಇದನ್ನು ಸಂಪರ್ಕಿಸಲು, ಈ ಉಬ್ಬಿರುವ ವಸಡನ್ನು ಸಣ್ಣ ಶಸ್ತ್ರಚಿಕಿತ್ಸೆಯಿಂದ ತೆಗೆಯುವರು ಮತ್ತು ವಸಡು ಆರೋಗ್ಯ ಸರಿಯಾಗಿರುವಂತೆ ನೋಡಿಕೊಳ್ಳುತ್ತಾರೆ.  ಈ ವಸಡು ಚಿಕಿತ್ಸೆಗೆ ಎಜಿnಜಜಿvಛಿcಠಿಟಞy ಎಂದು ಹೇಳುವರು. ಈ ಶಸ್ತ್ರಚಿಕಿತ್ಸೆ ಅಗತ್ಯ ಎಲ್ಲರಿಗೂ ಇರಲಾರದು.

ಕೆಲವೊಮ್ಮೆ ಸ್ವಲ್ಪ ಆಚೆ ಈಚೆ ಇರುವ ಹಲ್ಲನ್ನು ಸರಿಪಡಿಸಲು ಹಿಂದಿನ ದವಡೆಯ ಹಲ್ಲಿನ ಸಹಾಯವಿಲ್ಲದೇ, ಹಲ್ಲು ಸರಿಯಿರದಿರುವ ಜಾಗದಲ್ಲಿ ಮಿನಿ ಇಂಪ್ಲಾಟನ್ನು ವಸಡಿನಲ್ಲಿ ಕೂರಿಸಿ ಹಲ್ಲು ಸರಿಪಡಿಸುವರು, ಇದನ್ನು ವಕ್ರದಂತ ಚಿಕಿತ್ಸಾ ತಜ್ಞರೇ ಮಾಡುವರು.

ಕೆಲವೊಮ್ಮೆ ನಿಮ್ಮ ಎದುರಿನ ಹಲ್ಲಿನ ಮುಂಭಾಗದ ಎಲುಬು ತೆಳುವಾಗಿಯಿರುವುದರಿಂದ, ವಸಡು ಕೆಳಮುಖವಾಗಿ ಹೋಗಬಹುದು. ಇದರಿಂದಾಗಿ ನಗುವಾಗ ಉದ್ದ ಹಲ್ಲು ಕಂಡು, ಸುಂದರ ನಗುವಿಗೆ, ಅಡ್ಡವಾಗಬಹುದು. ಹಲ್ಲಿನ ಬೇರು ಕೂಡ ಕಾಣಬಹುದು, ಹೀಗೆ ಕಾಣುವ ಹಲ್ಲಿನ ಬೇರನ್ನು ವಸಡು ಶಸ್ತ್ರ ಚಿಕಿತ್ಸೆಯ ಮೂಲಕ ಮತ್ತೆ ಕೊಡಿಸಿ, ವಸಡು ಸ್ವಸ್ಥಾನದಲ್ಲಿದ್ದು ಹಲ್ಲು ಉದ್ದವಾಗಿ ಕಾಣದ ಹಾಗೇ ವಸಡು ಪುನಃ ನಿರ್ಮಾಣ ಶಸ್ತ್ರ ಚಿಕಿತ್ಸೆ ಮಾಡುವರು.

ಎದುರು, ಹಲ್ಲಿನ ಮಧ್ಯೆ ಜಾಗ (ಗ್ಯಾಪ್‌) ಎದುರು ಹಲ್ಲಿನ ಮಧ್ಯೆ ಅಂತರ ಇರುವುದಕ್ಕೆ ಬಹಳ ಕಾರಣಗಳಿರುತ್ತವೆ. ಅದರಲ್ಲಿ ಒಂದು ಕಾರಣ, ಈ ಎರಡು ಹಲ್ಲಿನ ಮಧ್ಯೆಯಿರುವ, ಮಾಂಸದ ಒಂದು ಪದರ (ಫ್ರೀನಮ್‌). ಇದು ನಮ್ಮ ತುಟಿಯನ್ನು ಮತ್ತು ಹಲ್ಲು ವಸಡನ್ನು ಜೋಡಿಕೊಂಡಿರುತ್ತದೆ. ಕೆಲವೊಮ್ಮೆ  ನಿಮ್ಮ ವಕ್ರದಂತ ಸರಿಪಡಿಸುವ ತಜ್ಞರು ಇದನ್ನು, ಹಲ್ಲಿಗೆ ಸರಿಗೆ ಹಾಕುವ ಮುನ್ನವೇ ಶಸ್ತ್ರ ಚಿಕಿತ್ಸೆ ಮಾಡಿ ತೆಗೆಸಲು ಸಲಹೆ ನೀಡಬಹುದು. ಬಹುತೇಕ ಎಲ್ಲರಲ್ಲಿ , ಹಲ್ಲು ಸರಿಗೆ ಹಾಕಿ, ಅಂತರ ಸಂಪೂರ್ಣ ಕಡಿಮೆಯಾದ ಅನಂತರ ಇದನ್ನು, ಸಾಮಾನ್ಯ ಶಸ್ತ್ರಚಿಕಿತ್ಸೆಯ ಮೂಲಕ, ಅಥವಾ ಇಲೆಕ್ಟ್ರೋ ಸರ್ಜರಿಯ ಮೂಲಕ, ಅಥವಾ ಲೇಸರ್‌ ಚಿಕಿತ್ಸೆಯ ಮೂಲಕ ತೆಗೆದು ಹಲ್ಲಿನ ಮಧ್ಯೆ ಮತ್ತೆ ಅಂತರ/ಜಾಗ ಬರದ ಹಾಗೇ ನೋಡಿಕೊಳ್ಳುತ್ತಾರೆ. ಇಂತಹ ವಸಡು ಶಸ್ತ್ರಚಿಕಿತ್ಸೆಗೆ ಫ್ರೀನೆಕ್ಟಿಮಿ  ಎನ್ನುವರು.

ಹಲ್ಲುಗಳು ಕೆಲವೊಮ್ಮೆ ನಮ್ಮ ದವಡೆಯಲ್ಲಿ ಸಂಪೂರ್ಣ ತಿರುಗಿರುತ್ತವೆ. ಹೀಗೆ ತಿರುಗಿರುವ ಹಲ್ಲನ್ನು ಸರಿಗೆ ಹಾಕಿ ಮತ್ತೆ ಪುನಃ ಸರಿದಾರಿಗೆ ತಂದು ದವಡೆಯಲ್ಲಿ  ನಿಲ್ಲಿಸುತ್ತಾರೆ. ಆದರೆ ಹಲ್ಲಿನ ಸುತ್ತಲಿರುವ ಪದರದಿಂದಾಗಿ, ಹಲ್ಲು ಮತ್ತೆ ಪುನಃ ಮಧ್ಯದ ಜಾಗಕ್ಕೆ ಬರುವ ಸಾಧ್ಯತೆಗಳಿವೆ. ಹೀಗೆ ಹಲ್ಲು ಪುನಃ ಸರಿ ಮಾಡಲು ಹಾಗೇ ತಿರುಗದೇ ಇರಲಿ. ವಸಡು ದಂತ ಚಿಕಿತ್ಸಾ ತಜ್ಞರು, ನಿಮ್ಮ ಹಲ್ಲಿನ ಸುತ್ತ ಶಸ್ತ್ರ ಚಿಕಿತ್ಸಾ ಬ್ಲೇಡನ್ನು ತೆಗೆದುಕೊಂಡು ಹೋಗಿ ಸಣ್ಣ ಚಿಕಿತ್ಸೆಯ ಮೂಲಕ, ವಸಡಿನ ಪದರ ಮತ್ತು ಹಲ್ಲು ಪುನಃ ಮೊದಲಿನ ಹಾಗೆ ಬರಲು ಸಹಾಯವಾಗುವುದು.

ಶೀಘ್ರವಾಗಿ ಹಲ್ಲು ಹಿಂದೆ ಮಾಡಲು – ಕೆಲವೊಮ್ಮೆ ನಿಮ್ಮ ದಂತ ವಕ್ರ ಚಿಕಿತ್ಸಾ ತಜ್ಞರು ದಂತ ಸುತ್ತ ಪರೆ ತಜ್ಞರ ಸಲಹೆಯ ಮೇರೆಗೆ, ಎಲುಬನ್ನು ನಿಯಮಿತವಾಗಿ, ಅಲ್ಲಲ್ಲಿ ಸ್ವಲ್ಪ ಕೊರೆದು ಅದರೊಳಗೆ ಎಲುಬಿನ ಹುಡಿಯನ್ನು ಹಾಕಿ, ಹಲ್ಲು ಬೇಗ ಹಿಂದೆ ಹೋಗುವ ಹಾಗೆ ಅನುಕೂಲ ಮಾಡಿಕೊಡುವರು, ಈ ಶಸ್ತ್ರ ಚಿಕಿತ್ಸೆ (ಎಲುಬಿನ ಶಸ್ತ್ರ ಚಿಕಿತ್ಸೆ ಮಾಡುವುದರಿಂದ, ಹಲ್ಲನ್ನು ಶೀಘ್ರವಾಗಿ ಹಿಂದೆ ಮಾಡಲು ಸಾಧ್ಯವಾದೀತು. ಈ ಚಿಕಿತ್ಸೆಗೆ ಕ|ಅ|O|O| ವಿಧಾನ (ಪೆರಿಯಾಂಡಲಾ ಎಕ್ಸಲರೇಟೆಡ್‌ ಆಸ್ಟಿಯೋಜೆನಿಕ್‌, ಆಥೋìಡೊಂಟಿಕ್ಸ್‌) ಎನ್ನುವರು.

ಹಲ್ಲು ಸ್ವತ್ಛಗೊಳಿಸುವ ವಿಧಾನ 
ವಕ್ರದಂತ ಚಿಕಿತ್ಸೆ ಪಡೆದುಕೊಳ್ಳುವವರಲ್ಲಿ  ಹಲ್ಲಿನ ಮೇಲೆ, ಬ್ರಾಕೆಟ್‌ ಮತ್ತು ಸರಿಗೆ ಇರುವುದರಿಂದ ಸಾಮಾನ್ಯರಲ್ಲಿ ಬ್ರಶ್‌ ಮಾಡುವ ಹಾಗೇ ಹಲ್ಲು ಸ್ವತ್ಛಗೊಳಿಸುವುದು ಸ್ವಲ್ಪ ಕಷ್ಟ ನಿಜ. ಆದರೆ, ನಾವು ಮೊದಲಿನಿಂದ ಹೇಗೆ ಹಲ್ಲು ಸ್ವತ್ಛಗೊಳಿಸುತ್ತೇವೆಯೋ, ಅದೇ ರೀತಿ, ಹಲ್ಲು ಸ್ವತ್ಛಗೊಳಿಸುವುದು ಅತೀ ಮುಖ್ಯ. ಅದೇ ವಿಧಾನ, ಆದರೆ ಸ್ವಲ್ಪ ಬದಲಾವಣೆ, ಸಾಧಾರಣ ಸರಿಗೆ ಹಾಕಿಕೊಂಡವರು ಬ್ರಶ್‌ ಮಾಡುವಾಗ ಸರಿಗೆ ಮಧ್ಯ ಇರುವ ಆಹಾರ ತೆಗೆಯಲು ಅಥವಾ ದಂತ ಪಾಚಿ ತೆಗೆಯಲು, ಹೆಚ್ಚಿನ  ಪ್ರಾಮುಖ್ಯತೆ ಕೊಡುತ್ತಾರೆ. ಮತ್ತು ಬ್ರಾಕೆಟ್‌ ಮತ್ತು  ವಸಡಿನ  ಮಧ್ಯ, ಬ್ರಶ್‌ ಸರಿಯಾಗಿ ಇಡಲು ಅಗದೇ ಮತ್ತು ಕೆಲವೊಮ್ಮೆ ಬ್ರಶ್‌ ಸರಿಯಾಗಿ ಇಡಲು ಆದರೂ, ಈ ಜಾಗಕ್ಕೆ ಪ್ರಾಮುಖ್ಯತೆ ಕೊಡದೇ, ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ವಸಡಿನ ಪಕ್ಕದಲ್ಲಿ, ತುಂಬಾ ದಂತ ಪಾಚಿ ಸಂಗ್ರಹವಾಗಿ ವಸಡು ರೋಗ ಕಂಡು ಬಂದು, ಮೊದಲು ರಕ್ತ ಒಸರಿ, ಅನಂತರ ಒಸಡು ಊದಿಕೊಳ್ಳುತ್ತದೆ, ಇದರಿಂದಾಗಿ, ಸರಿಗೆ ಮತ್ತು ಹಲ್ಲಿನ ಮಧ್ಯೆ ಅಲ್ಲದೇ, ವಸಡು ಮತ್ತು ಬ್ರಾಕೆಟ್‌, ಸರಿಗೆಯ ಮಧ್ಯೆ, ಬ್ರಶ್‌ ಮಾಡುವಾಗ ಲಕ್ಷ್ಯ ವಹಿಸುವುದು ಮುಖ್ಯ.

ನಮ್ಮ ಕೋರೆ  ಹಲ್ಲುಗಳು ಕೆಲವೊಮ್ಮೆ ಎಲುಬಿನ ಒಳಗೆ ಸಿಕ್ಕಿ ಹಾಕಿಕೊಂಡು ಹೊರಗೆ ಬರದೇ, ಆ ಹಲ್ಲಿರುವ ಜಾಗ ಖಾಲಿಯಾಗಿ ನೋಡಲು ಚಂದವಾಗಿರದು, ಕೆಲವೊಮ್ಮೆ ಈ ಹಲ್ಲನ್ನು ದಂತ ವಕ್ರ ಚಿಕಿತ್ಸಾ ತಜ್ಞರು, ವಸಡು ಶಸ್ತ್ರ ಚಿಕಿತ್ಸಾ ತಜ್ಞರೊಂದಿಗೆ ಕೂಡಿ ಹೊರತಂದು  ಅದು ಸರಿಯಾದ ಜಾಗದಲ್ಲಿ ಬಂದಿರಲು ಸಹಕರಿಸುವರು. ಹೀಗೆ ಮಾಡುವ ಆ ಹಲ್ಲಿನ ಮೇಲಿರುವ ವಸಡನ್ನು ಮತ್ತು ಎಲುಬನ್ನು ಶಸ್ತ್ರ ಚಿಕಿತ್ಸೆಯಿಂದ ತೆಗೆಸಿ, ಆ ಒಳಗಿರುವ ಕೋರೆ ಹಲ್ಲಿನ ಮೇಲೆ, ಲೋಹದ ಚಿಕ್ಕ ಬ್ರಾಕೆಟನ್ನು ಇಟ್ಟು, ಅದರ ಮೇಲೆ ಸರಿಗೆಯಿಂದ, ಒತ್ತಡ ಹಾಕಿ ಎಳೆಯುವರು ಮತ್ತು ಕೋರೆಹಲ್ಲು ಸ್ವಸ್ಥಾನಕ್ಕೆ ಬರಲು ಸಹಕರಿಸುವರು.

– ಡಾ| ಸುಬ್ರಾಯ ಭಟ್‌ ,   
ಅಸೋಸಿಯೇಟ್‌ ಡೀನ್‌,
ಪ್ರೊಫೆಸರ್‌ ಆಫ್ ಪೆರಿಯೋಡೊಂಟಿಕ್ಸ್‌
ಎಂಸಿಒಡಿಎಸ್‌, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next