Advertisement
ಭಾರತೀಯ ಸಮಾಜ ವಿಜ್ಞಾನ ಸಮ್ಮೇಳನ ಸಂಘಟನೆ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲ ಯದ ಸಹಯೋಗದಲ್ಲಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ 43ನೇ ಭಾರತೀಯ ಸಮಾಜ ವಿಜ್ಞಾನ ಸಮ್ಮೇಳನದ ಸಮಾ ರೋಪದಲ್ಲಿ ಮಾತನಾಡಿ, ನಮ್ಮ ಜೀವನ ಪದ್ಧತಿಯಲ್ಲಿ ಮೂಲಭೂತ ಬದಲಾವಣೆಯಾಗುತ್ತಿದೆ. ನಗರ ಪ್ರದೇಶದಲ್ಲಿರುವ ಅತ್ಯುತ್ತಮ ಸೌಲಭ್ಯಗಳನ್ನು ನೋಡಿ, ಹಳ್ಳಿ ಭಾಗದಿಂದ ನಗರಕ್ಕೆ ವಲಸೆ ಬರುತ್ತಿದ್ದಾರೆ ಎಂದರು.
Related Articles
Advertisement
ಮೊಬೈಲ್‌ಗಳಲ್ಲಿ ಸಿಗಲಿದೆ ಇಸ್ರೋ ನಾವಿಕ್ ವ್ಯವಸ್ಥೆಬೆಂಗಳೂರು: ಅಮೆರಿಕದ ದೂರಸಂಪರ್ಕ ಕಂಪನಿ ಕ್ವಾಲ್ಕಾಂ ಮತ್ತು ಇಸ್ರೋ ನಡುವೆ ಸಹಭಾಗಿತ್ವ ಏರ್ಪ ಟ್ಟಿದೆ. ಈ ಒಪ್ಪಂದದ ಬಳಿಕ ಕ್ವಾಲ್ಕಾಂ ಕಂಪನಿ ಹೊರ ತರಲಿರುವ ಹೊಸ ಮೊಬೈಲ್‌ಗಳಲ್ಲಿ ಇಸ್ರೋ ಅಭಿವೃದ್ಧಿ ಪಡಿಸಿರುವ ನಾವಿಕ್ (NavIC) ಸಿಗಲಿದೆ. ಅದಕ್ಕಾಗಿ ಸ್ನ್ಯಾಪ್‌ಡ್ರಾಗನ್ 720ಜಿ, ಸ್ನ್ಯಾಪ್‌ಡ್ರಾಗನ್ 662 ಮತ್ತು ಸ್ನ್ಯಾಪ್‌ಡ್ರಾಗನ್460 ಎಂಬ ಹೊಸ ರೀತಿಯ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾ ಗಿದೆ. ಇದೇ ಮೊದಲ ಬಾರಿಗೆ ಚಿಪ್ ತಯಾರಿಕಾ ಸಂಸ್ಥೆಯೊಂದು ಇಸ್ರೋ ಜತೆಗೆ ಕೈಜೋಡಿಸಿದೆ. ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮ ದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್, “ಸಂಸ್ಥೆ ಕ್ವಾಲ್ಕಾಂ ಹೊಂದಿರುವ ತಾಂತ್ರಿಕ ವ್ಯವಸ್ಥೆಯಲ್ಲಿ ಪರಿಶೀಲಿಸಿ ತೃಪ್ತಿ ಹೊಂದಿದ ನಂತರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. ಅಮೆರಿಕದ ಜಿಪಿಎಸ್ ವ್ಯವಸ್ಥೆಗೆ ಸೆಡ್ಡು ಹೊಡೆವ ನಿಟ್ಟಿನಲ್ಲಿ ಇಸ್ರೋ ನಾವಿಕ್ ಎಂಬ ಹೊಸ ವ್ಯವಸ್ಥೆ ಅಭಿವೃದ್ಧಿಗೊಳಿಸಿದ್ದು, ಅದು ಹೆಚ್ಚಿನ ರೀತಿಯಲ್ಲಿ ಲಭ್ಯವಾಗಲು ಉಪಗ್ರಹ ಗಳನ್ನು ಉಡಾಯಿಸಿದೆ. ಮೊಬೈಲ್ ಕಂಪನಿಗಳಾದ ಶಿಯೋಮಿ, ರಿಯಲ್‌ಮಿ ಈಗಾಗಲೇ ಕ್ವಾಲ್ಕಾಂ ಜತೆಗೆ ಕೈಜೋಡಿಸುವ ನಿರ್ಧಾರ ಪ್ರಕಟಿಸಿವೆ. ಮುಂದಿನ ದಿನಗಳಲ್ಲಿ ಈ ಎರಡೂ ಕಂಪನಿಗಳ ಫೋನ್‌ಗಳಲ್ಲಿ ಇಸ್ರೋದ ನಾವಿಕ್ ವ್ಯವಸ್ಥೆ ಒಳಗೊಳ್ಳಲಿದೆ. ಮೀನುಗಾರರಿಗೆ ಅನುಕೂಲ: ಮೀನುಗಾರರಿಗೆ ಅನುಕೂಲ ಆಗುವಂತೆ ನಾವಿಕ್ ನ್ಯಾವಿಗೇಷನ್ ವ್ಯವಸ್ಥೆಯನ್ನು ಇಸ್ರೋ ಅನ್ವೇಷಿಸಿದೆ. ಇದರಲ್ಲಿ ಮೀನುಗಾರರು ಅತಿ ಸುಲಭವಾಗಿ ಮೀನು ಹೆಚ್ಚಿರುವ ಜಾಗದಲ್ಲಿ ಬಲೆ ಹಾಕಿ ಮೀನು ಹಿಡಿಯಲು ಸಹಕಾರಿಯಾಗ ಲಿದೆ. ಅಲ್ಲದೆ, ಹವಾಮಾನ ವೈಪರಿತ್ಯದ ಬಗ್ಗೆ ಮೀನುಗಾರರ ಮಾತೃಭಾಷೆಯಲ್ಲೇ ಎಚ್ಚರಿಕೆಯ ಸಂದೇಶ ಬರಲಿದೆ.. ಸಮುದ್ರದಲ್ಲಿರುವ ವಿದೇಶದ ಗಡಿರೇಖೆ ತಲುಪುತ್ತಿದ್ದಂತೆಯೂ ಎಚ್ಚರಿಕೆ ಸಂದೇಶ ಮೀನುಗಾರಿಕೆ ತಲುಪುತ್ತದೆ. ಮೊಬೈಲ್ ಆ್ಯಪ್ ಮೂಲಕ ಇದೆಲ್ಲವೂ ಸಾಧ್ಯವಾಗುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದರು.