ಹರಿಹರ: ನಗರಕ್ಕೆ ಕುಡಿಯುವ ನೀರಿನ ಶಾಶ್ವತ ಯೋಜನೆ ಕಲ್ಪಿಸಲು ಒಗ್ಗಟ್ಟಿನ ಹೋರಾಟ ಅತ್ಯಗತ್ಯವಾಗಿದ್ದು, ವಿವಿಧ ಸಂಘ-ಸಂಸ್ಥೆಗಳು, ಸಮಾಜ ಸೇವಕರು ಮುಂಚೂಣಿಯಲ್ಲಿ ಈ ಹೋರಾಟ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದರು.
ಜನಪರ ವೇದಿಕೆ, ಸಿವಿಲ್ ಇಂಜಿನಿಯರ್ ಅಸೋಶಿಯೇಷನ್, ಚೇಂಬರ್ ಆಫ್ ಕಾಮರ್ಸ್, ಪರಸ್ಪರ ಬಳಗ, ಕನ್ನಡ ಪರ ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಾಶ್ವತ ನೀರಿನ ಹೋರಾಟ ಸಮಿತಿ ಆಶ್ರಯದಲ್ಲಿ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಕದಲ್ಲೆ ತುಂಗಭದ್ರೆ ಹರಿಯುತ್ತಿದ್ದು, ಹಿಂದೆಲ್ಲ ನೀರಿನ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸರ ಅಸಮತೋಲನದಿಂದ ನದಿ ನೀರು ಕ್ಷೀಣಿಸಿ, ನಗರ ಕುಡಿಯುವ ನೀರಿನ ಬವಣೆ ಎದುರಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಅಗತ್ಯ ಅನುದಾನ ತರಲು ಬೃಹತ್ ಹೋರಾಟ ಅನಿವಾರ್ಯವಾಗಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಡಾ| ವೈ.ನಾಗರ ನಾಯಕತ್ವದಲ್ಲಿ ಈ ಹೋರಾಟ ಆರಂಭಿಸೋಣ, ನಾಗಪ್ಪರ ನೇತೃತ್ವದಲ್ಲಿ ಸಿಎಂ ಬಳಿ ತೆರಳಿ ಕೆರೆ ಅಭಿವೃದ್ದಿಗೆ ಅನುದಾನ ನೀಡಲು ಕೋರಬೇಕು. 22 ಕೆರೆಗಳಿಗೆ ನೀರು ಪೂರೈಸುವ ಪೈಪ್‌ಲೈನ್ ಅಗಸನಕಟ್ಟೆ ಕೆರೆ ಪಕ್ಕದಲ್ಲೆ ಹಾದು ಹೋಗಿದ್ದು, ಜಿಲ್ಲಾ ಮಂತ್ರಿಗಳು, ಸಿರಿಗೆರೆ ಸ್ವಾಮಿಗಳಿಗೆ ಮನವಿ ಮಾಡಿ ಕೆರೆಗೆ ನೀರು ಹರಿಸುವಂತೆ ಕೇಳಿಕೊಳ್ಳೋಣ ಎಂದರು.
ಮಾಜಿ ಸಚಿವ ಡಾ| ವೈ.ನಾಗಪ್ಪ ಮಾತನಾಡಿ, ತಾವು ಶಾಸಕರಿದ್ದಾಗಲೂ ಬರ ಬಂದು, ನೀರಿಗೆ ಹಾಹಾಕಾರ ಉಂಟಾಗಿತ್ತು. ಕೂಡಲೇ ಕೊಳವೆ ಬಾವಿಗಳನ್ನು ರಿಬೋರ್ ಮಾಡಿಸಿದಾಗ 4-5 ಇಂಚು ನೀರು ಬಂತು. ಈಗಲೂ ರೀಬೋರ್ ಮಾಡಿಸಿ, ನೋಡಬಹುದು. ಜನಪ್ರತಿನಿಧಿಧಿಗಳು ಜನರ ಸಮಸ್ಯೆಗಳಿಗೆ ಆದ್ಯತೆ ನೀಡಿ, ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಜನರ ಪ್ರೀತಿಗಳಿಸಲು ಸಾಧ್ಯ ಎಂದರು.
ಇಂಜಿನಿಯರ್ ಗುರುನಾಥ್ ಅಗಸನಕಟ್ಟೆ ಕೆರೆಯ ಉಪಯೋಗ ಮತ್ತು ತಾಂತ್ರಿಕ ವಿವರವನ್ನು ಸಭೆಗೆ ತಿಳಿಸಿದರು. ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್, ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ, ನಗರಸಭೆ ಸದಸ್ಯ ಶಂಕರ್ ಖಟಾವ್‌ಕರ್, ರೇವಣಸಿದ್ದಪ್ಪ, ನಾಗರಾಜ್ ಮೆಹರಾÌಡೆ, ಬೆಳ್ಳೂಡಿ ರಾಮಚಂದ್ರಪ್ಪ, ರಮೇಶ್ ಮಾನೆ, ಪ್ರೊ| ಎಚ್ .ಎ.ಭಿûಾವರ್ತಿಮಠ, ಎಸ್.ಎಂ.ವೀರೇಶ್ ಹನಗವಾಡಿ,
ಡಿ.ಕುಮಾರ್ ಹೋರಾಟದ ರೂಪರೇಷಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಡಿ.ಜಿ.ರಘುನಾಥ್, ಸಿ.ಎನ್.ಹುಲಿಗೇಶ್, ಜೆ.ಕಲೀಂಭಾಷಾ, ಪ್ರೊ| ಸಿ.ವಿ.ಪಾಟೀಲ್, ನಗರಸಭೆ ಸದಸ್ಯ ಮರಿದೇವ, ಶರದ್ ಕೊಣ್ಣೂರು, ಕೃಷ್ಣಾಸಾ ಭೂತೆ, ಅಂಬುಜಾ ರಾಜೋಳಿ, ಬಿ.ಮಗು, ಪ್ರಸನ್ನ ಕುಮಾರ್, ಎಸ್.ಎಚ್ .ಪ್ಯಾಟಿ ಮತ್ತಿತರರಿದ್ದರು. ಶಿವಪ್ರಕಾಶ್ ಶಾಸ್ತ್ರಿ ಸ್ವಾಗತಿಸಿದರು. ಪ್ರಕಾಶ್ ಕೋಳೂರು ನಿರೂಪಿಸಿದರು. ಎಚ್.ಕೆ.ಕೊಟ್ರಪ್ಪ ವಂದಿಸಿದರು.