ಕಂಟಕಪ್ರಾಯವಾಗುತ್ತದೆ. ದುಡ್ಡಿನ ಆಸೆಗಾಗಿ ಇಂಥ ಕರಾಳ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳು ಸಮಾಜದ್ರೋಹಿಗಳು ಅಲ್ಲದೇ ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು ಅಗತ್ಯ ಎಂದು ಡಾ| ತೋಂಟದ ಸಿದ್ಧಲಿಂಗಸ್ವಾಮಿಗಳು ತಿಳಿಸಿದರು.
Advertisement
ಜ. ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಹೆಣ್ಣುಮಕ್ಕಳು ಈ ಬಗ್ಗೆ ನಿಗಾವಹಿಸಿ ದೇಹಕ್ಕೆ ಅಗತ್ಯವಾದ ಸಮತೋಲನ ಆಹಾರವನ್ನು ತಯಾರಿಸುವ ಮತ್ತು ಒದಗಿಸುವ ದಿಸೆಯಲ್ಲಿ
ಪ್ರಜ್ಞಾವಂತರಾಗಬೇಕೆಂದು ತಿಳಿಸಿದರು. ಆಹಾರ ಕಲಬೆರಕೆ ಕುರಿತು ಉಪನ್ಯಾಸ ನೀಡಿದ ವಿಜ್ಞಾನ ಪರಿಷತ್ತಿನ ಮಾಜಿ ಕಾರ್ಯದರ್ಶಿ ಪ್ರೊ| ಸಿ.ಡಿ. ಪಾಟೀಲ ಅವರು, ಇಂದಿನ ಯುವಜನತೆ ರಸ್ತೆ ಬದಿಯ ಆಹಾರ ಮತ್ತು ಜಂಕ್ ಫುಡ್‌ಗೆ ಜೋತು ಬಿದ್ದಿರುವುದು ವಿಪರ್ಯಾಸ ಸಂಗತಿ. ಶುಚಿತ್ವ ಮತ್ತು ಸಮತೋಲಿತವಲ್ಲದ ಆಹಾರದ ಸೇವೆನೆಯಿಂದ ಅನೇಕ ರೋಗಗಳಿಗೆ ತುತ್ತಾಗುವ
ಸಂಭವವಿದೆ. ಮನುಷ್ಯನ ದುರಾಸೆಯಿಂದ ಆಹಾರದಲ್ಲಿ ಕಲಬೆರಕೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಅನೈಸರ್ಗಿಕವಾಗಿ, ಅನೇಕ ರಾಸಾಯನಿಕಗಳನ್ನು ಬಳಸಿ ಕಾಯಿಗಳನ್ನು ಹಣ್ಣುಗಳನ್ನಾಗಿಸುವ ಕಾರ್ಯ ನಡೆದಿದೆ. ಸಾಫ್ಟ್ ಡಿಂಕ್ಸ್ ಗಳ
ನಿಯಮಿತ ಸೇವನೆಯಿಂದ ಹಲ್ಲು ಮತ್ತು ಉದರದ ಸಮಸ್ಯೆಗಳು ಉಲ್ಬಣವಾಗುತ್ತವೆ. ಈ ಕುರಿತಾಗಿ ಜನರಲ್ಲಿ ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು. ಇಂಡೋ-ಸೋಷಿಯೋ ಡೆವಲಪ್‌ಮೆಂಟ್ ಅಸೋಶಿಯೇಶನ್ ನವದೆಹಲಿ ಇವರಿಂದ ಭಾರತದ ಶ್ರೇಷ್ಠ ಶಿಕ್ಷಣ ತಜ್ಞ ಪ್ರಶಸ್ತಿಗೆ ಭಾಜನರಾದ ಜ. ತೋಂಟದಾರ್ಯ ಇಂಜನೀಯರಿಂಗ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಕೆ. ಕೊಟ್ರೇಶ ಅವರು ಪೂಜ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸತತ ಪರಿಶ್ರಮದಿಂದ ವ್ಯಕ್ತಿ ಮೇಲೆರಲು ಸಾಧ್ಯ. ಸಾಧನೆಗೆ ಜಾತಿ, ಧರ್ಮ, ಅಂತಸ್ತುಗಳು
ಅಡ್ಡಿ ಬರಲಾರವು. ಛಲ ಬಿಡದಂತೆ ಸಾಧಿಸಿದ ಸಾಧನೆಯನ್ನು ಕೋಟ್ರೇಶ್ ಅವರು ವಿವರಿಸಿದರು.
Related Articles
Advertisement
ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ, ದಾನಯ್ಯ ಗಣಾಚಾರಿ, ಅಕ್ಕಮಹಾದೇವಿ ಚೆಟ್ಟಿ, ಚೇತನ ಅಂಗಡಿ, ಶಿವನಗೌಡ ಗೌಡರ, ನಿಂಗಪ್ಪ ಪೂಜಾರ ಮೊದಲಾದವರು ಭಾಗವಹಿಸಿದ್ದರು.