Advertisement

ಭಾರತ-ಪಾಕ್‌ ಗಡಿ ಸೀಮೆಗೆ ಸೀಮಾ ಹೈದರ್‌ ಹೆಸರೇ ಉತ್ತರ!

10:52 PM Dec 24, 2023 | Team Udayavani |

ಜೈಪುರ: ಭಾರತ ಮತ್ತು ಪಾಕಿಸ್ಥಾನದ ನಡುವೆ ಇರುವ ಗಡಿ (ಸೀಮಾ) ಹೆಸರೇನು ಎಂಬ ಪ್ರಶ್ನೆಗೆ ಶಾಲಾ ವಿದ್ಯಾರ್ಥಿ ಸೀಮಾ ಹೈದರ್‌ ಎಂದು ಉತ್ತರಿಸಿದ್ದಾನೆ. 2 ದೇಶಗಳ ಗಡಿ ಎಷ್ಟು ಕಿಮೀ ದೂರವಿದೆ ಎಂಬ ಪ್ರಶ್ನೆಗೆ ಸೀಮಾ ಹೈದರ್‌ ಹೊಂದಿರುವ ಎತ್ತರವನ್ನೇ ಬರೆದಿದ್ದಾನೆ.

Advertisement

ಆತನ ಉತ್ತರಪತ್ರಿಕೆಯ ಫೋಟೋ ವೈರಲ್‌ ಆಗಿದ್ದು, ನೆಟ್ಟಿಗರನ್ನು ನಗೆ ಗಡಲಲ್ಲಿ ಮುಳುಗಿಸಿದೆ. ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಶಾಲೆಯ ಪ್ರಶ್ನೆ ಪತ್ರಿಕೆಯಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಇರುವ ಗಡಿ (ಸೀಮಾ ) ಯಾವುದು ? ಅದರ ಉದ್ದ ಎಷ್ಟು ಎಂದು ಕೇಳಲಾಗಿತ್ತು. ಅದಕ್ಕೆ 2 ದೇಶಗಳ ನಡುವೆ ಇರುವುದು ಸೀಮಾ ಹೈದರ್‌. ಗಡಿಯ ಉದ್ದ 5 ಅಡಿ, 6 ಇಂಚು. ಎರಡೂ ರಾಷ್ಟ್ರಗಳೂ ಅವಳಿಗಾಗಿ ಜಗಳವಾಡುತ್ತಿವೆ ಎಂದೂ ಬರೆದಿದ್ದಾನೆ. ಪಾಕಿಸ್ಥಾನ ಪ್ರಜೆ ಸೀಮಾ ಹೈದರ್‌ ಎಂಬ ಮಹಿಳೆ ಭಾರತೀಯ ಪ್ರಿಯಕರನನ್ನು ಮದುವೆಯಾಗಲು ನೇಪಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿ ಸುದ್ದಿಯಾಗಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next