Advertisement

ಓಂಪ್ರಕಾಶ್‌ ರಾವ್‌ ಚಿತ್ರದ ಹೆಸರು ಬದಲಾಗಿದೆ

10:46 AM Aug 03, 2017 | |

ಈ ಹಿಂದೆ ಓಂಪ್ರಕಾಶ್‌ ರಾವ್‌ ಅವರು “ಮದರಂಗಿ’ ಕೃಷ್ಣ ಅಭಿನಯದಲ್ಲಿ “ಹುಚ್ಚ 2′ ಸಿನಿಮಾ ನಿರ್ದೇಶಿಸುವುದಾಗಿ ಘೋಷಿಸಿದ್ದು ನೆನಪಿರಬಹುದು. ಆದರೆ, ಈಗ ಆ ಚಿತ್ರದ ಶೀರ್ಷಿಕೆ ಬದಲಾಗಿದೆ. “ಹುಚ್ಚ’ ಶೀರ್ಷಿಕೆ ಕೆಳಗೆ “ಹಂಡ್ರೆಡ್‌ ಪರ್ಸೆಂಟ್‌’ ಎಂಬ ಅಡಿಬರಹವಿದೆ. ಅಲ್ಲಿಗೆ ಅದನ್ನು “ಹುಚ್ಚ ಹಂಡ್ರೆಡ್‌ ಪರ್ಸೆಂಟ್‌’ ಎಂದು ಓದಿಕೊಳ್ಳಲ್ಲಡ್ಡಿಯಿಲ್ಲ. 

Advertisement

ಕೆಲವು ವರ್ಷಗಳ ಹಿಂದೆಯೇ ಶುರುವಾದ ಚಿತ್ರ, ಈಗ ಬಿಡುಗಡೆಯ ತಯಾರಿಯಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ. ಇದು ತಮಿಳಿನ “ರಾಮ್‌’ ಚಿತ್ರದ ರಿಮೇಕ್‌. 2005 ರಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅಮೀರ್‌ ನಿರ್ದೇಶನ ಮಾಡಿದ್ದರು.

ಜೀವ, ಶರಣ್ಯ, ರೆಹಮಾನ್‌ ಇತರರು ಅಭಿನಯಿಸಿದ್ದರು. ಕನ್ನಡದಲ್ಲಿ “ಹುಚ್ಚ ಹಂಡ್ರೆಡ್‌ ಪರ್ಸೆಂಟ್‌’ ಸಿನಿಮಾ ನಿರ್ದೇಶಿಸಿರುವ ಓಂ ಪ್ರಕಾಶ್‌ರಾವ್‌, ತಮ್ಮ ಚಿತ್ರಕ್ಕೆ ಮದರಂಗಿ ಕೃಷ್ಣ ಅವರನ್ನು ನಾಯಕರನ್ನಾಗಿ ಮಾಡಿದರೆ, ಶ್ರಾವ್ಯಾ ಅವರನ್ನು ನಾಯಕಿಯನ್ನಾಗಿಸಿದ್ದಾರೆ. 

ಮಿಕ್ಕಂತೆ ಚಿತ್ರದಲ್ಲಿ ಸಾಯಿಕುಮಾರ್‌,ಅವಿನಾಶ್‌, ಮಾಳವಿಕಾ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಅಭಿನಯಿಸಿದ್ದಾರೆ. ಎ.ಎಂ.ಉಮೇಶ್‌ರೆಡ್ಡಿ ಅವರು ಚಿತ್ರವನ್ನು ನಿರ್ಮಿಸಿದರೆ, ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ. ಎಂ.ಎಸ್‌.ರಮೇಶ್‌ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next