Advertisement

ಹಂಪಿ ವಿವಿಯಿಂದ ಸಾಧಕರಿಗೆ ನಾಡೋಜ ಪದವಿ ಗೌರವ

08:50 PM Apr 07, 2021 | Team Udayavani |

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ಉಡುಪಿಯ ನೇತ್ರತಜ್ಞ ಡಾ| ಕೆ.ಕೃಷ್ಣಪ್ರಸಾದ್‌ ಹಾಗೂ ವಿಜಯಪುರದ ಸಮಾಜ ಸೇವಕ ಹಾಗೂ ಶಿಕ್ಷಣಪ್ರೇಮಿ ಜಗದೀಶ ಎಸ್‌.ಗುಡಗುಂಟಿ ಭಾಜನರಾಗಿದ್ದಾರೆ.

Advertisement

ಹಂಪಿ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ಏ.9ರಂದು ನಡೆಯಲಿರುವ 29ನೇ ನುಡಿಹಬ್ಬ, ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಾ ಧಿಪತಿ ಆಗಿರುವ ವಜುಭಾಯಿ ವಾಲಾ ಇಬ್ಬರು ಸಾಧಕರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ.

ಉನ್ನತ ಶಿಕ್ಷಣ ಸಚಿವ, ಸಮಕುಲಾಧಿ  ಪತಿ ಡಾ| ಸಿ.ಎನ್‌.ಅಶ್ವತ್ಥ್ನಾರಾಯಣ ಡಿ.ಲಿಟ್‌ ಹಾಗೂ ಪಿಎಚ್‌ಡಿ ಪದವಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಪದ್ಮಾಶೇಖರ್‌ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಸ.ಚಿ.ರಮೇಶ ಸ್ವಾಗತ ಭಾಷಣ ಮಾಡಲಿದ್ದಾರೆ.

29ನೇ ನುಡಿಹಬ್ಬದಲ್ಲಿ ಒಟ್ಟು 365 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಅವುಗಳಲ್ಲಿ 10 ಡಿ.ಲಿಟ್‌ ಪದವಿ, 100 ಪಿಎಚ್‌ಡಿ ಸೇರಿದಂತೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುವುದು. ಏ.9ರಂದು ಬೆಳಗ್ಗೆ 11 ಗಂಟೆಗೆ ಮಂಟಪ ಸಭಾಂಗಣದಲ್ಲಿ 86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪದ್ಮಶ್ರೀ ಡಾ|ದೊಡ್ಡರಂಗೇಗೌಡ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next