ಮದುವೆ ಅಂದ್ಮೇಲೆ ಅಲ್ಲಿ ಜನರ ಗಡಿಬಿಡಿ, ಮಕ್ಕಳ ಓಡಾಟ ಒಟ್ಟಿನಲ್ಲಿ ಸಂಬಂಧಿಕರು, ಆತ್ಮೀಯರು, ಸ್ನೇಹಿತರು ಹೀಗೆ ಎಲ್ಲರೂ ನೆರೆದಿರುತ್ತಾರೆ. ಈ ನಡುವೆ ಕೆಲವೊಮ್ಮೆ ಸಣ್ಣಪುಟ್ಟ ಅಚಾತುರ್ಯ ನಡೆಯುವುದು ಸಾಮಾನ್ಯ.
ಅಂಥದ್ದೇ ಅಚಾತುರ್ಯದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮದುವೆಯ ಸಮಾರಂಭದಲ್ಲಿ ವಧು – ವರರು ನಿಂತಿದ್ದಾರೆ. ಸಂಬಂಧಿಕರು, ಸ್ನೇಹಿತರು ನೂತನ ವಧು – ವರರಿಗೆ ಶುಭಾಶಯವನ್ನು ನೀಡುವ ತವಕದಲ್ಲಿದ್ದಾರೆ. ಮದುವೆ ಸಂಭ್ರಮವನ್ನು ಮ್ಯೂಸಿಕ್ ಹೆಚ್ಚಿಸಿದೆ. ಹಾಡುಗಳನ್ನು ಪ್ಲೇ ಕೇಳುತ್ತಾ ಜನ ಅವರವರ ಮಾತಿನಲ್ಲಿ ತಲ್ಲೀನರಾಗಿದ್ದಾರೆ. ಆದರೆ ಈ ಮಧ್ಯ ನಡುವೆ ನಡೆದ ಒಂದು ಘಟನೆ ಎಲ್ಲರ ಚಿತ್ತವನ್ನು ವರನತ್ತ ನೋಡುವಂತೆ ಮಾಡಿದೆ.
ಮದುವೆಯ ವೇದಿಕೆಯ ಬಳಿ ಸೌಂಡ್ ಬಾಕ್ಸ್ ವೊಂದನ್ನು ಇಟ್ಟಿದ್ದಾರೆ. ಅದರ ಮುಂದೆ ವಧು – ವರ ನಿಂತಿದ್ದಾರೆ. ಇದ್ದಕ್ಕಿದ್ದಂತೆ ಸೌಂಡ್ ಬಾಕ್ಸ್ ಹಾರಿ ಬಿದ್ದು ವರನ ಬೆನ್ನಿಗೆ ಜೋರಾಗಿ ಬಡಿದಿದೆ. ಪರಿಣಾಮ ವರ ಮುಂದೆ ಹೋಗಿ ಬೀಳುವ ಹಂತಕ್ಕೆ ಬಂದಿದ್ದಾರೆ.
ಈ ಘಟನೆ ಎಲ್ಲಿಯದು ಎನ್ನುವುದು ಇದುವರೆಗೆ ತಿಳಿದು ಬಂದಿಲ್ಲ. ಸದ್ಯ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಆಪ್ಲೋಡ್ ಮಾಡಿದ್ದು,ವೈರಲ್ ಆಗಿದೆ.
ಮ್ಯೂಸಿಕ್ ಇಷ್ಟು ಹಾರ್ಡ್ ಹಿಟ್ ಮಾಡಬಾರದು ದೇವರೇ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.