ಅಧಿಕಾರದಲ್ಲಿದ್ದಾಗ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿವೆ ಎಂದು ಗೃಹಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
Advertisement
ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಮಾ.5ರಂದು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಅನಂತರ ಪತ್ರಕರ್ತರ ಜತೆಗೆ ಮಾತನಾಡಿದ ಅವರು, ಎನ್‌ಸಿಆರ್‌ಬಿ (ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ಪ್ರಕಾರ ಅಪರಾಧ ಪ್ರಕರಣದಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ 10ನೇ ಸ್ಥಾನದಲ್ಲಿದೆ. ಹಿಂದೆ ಬಿಜೆಪಿ ಆಡಳಿತ ಇದ್ದಾಗ ಅಪರಾಧ ಪ್ರಕರಣಗಳ ಪ್ರಮಾಣ ಶೇ.7 ಇತ್ತು. ಈಗ ಶೇ.5ಕ್ಕೆ ಬಂದಿದೆ. ಟ್ರಾಫಿಕ್ ಕೇಸುಗಳನ್ನು ಕೂಡ ಇತರ ಪ್ರಕರಣಗಳ ಜತೆ ಸೇರಿಸಿರುವುದರಿಂದ ಶೇ. 5 ಆಗಿದೆ. ಇಲ್ಲದಿದ್ದರೆ ಈ ಪ್ರಮಾಣ ಶೇ. 4ರಷ್ಟಾಗುತ್ತಿತ್ತು ಎಂದರು.
ಪಿಎಫ್ಐ, ಎಸ್‌ಡಿಪಿಐ ಅಥವಾ ಇತರ ಮುಸ್ಲಿಮರಿಂದ ಮೃತಪಟ್ಟ ಹಿಂದೂಗಳು 10 ಮಂದಿ ಮಾತ್ರ. ಬಿಜೆಪಿಯವರು ಹೇಳುತ್ತಿರುವಂತೆ 23 ಮಂದಿ ಅಲ್ಲ. ಉಳಿದವರ ಪೈಕಿ ಕೆಲವು ಮಂದಿ ಆತ್ಮಹತ್ಯೆ ಮಾಡಿಕೊಂಡವರು. ವೈಯಕ್ತಿಕ ಕಾರಣಗಳು, ರಾಜಕೀಯ, ಇತರ ವ್ಯವಹಾರಗಳ ಹಿನ್ನೆಲೆಯಲ್ಲಿ ಕೂಡ ಕೊಲೆಗಳಾಗಿವೆ. ಹಿಂದೂ ಸಂಘಟನೆಗಳಿಂದ 10 ಮಂದಿ ಹಿಂದೂಗಳು ಮೃತಪಟ್ಟಿದ್ದಾರೆ. ಹಿಂದೂಗಳಿಂದ 14 ಮಂದಿ ಹಿಂದೂಗಳು ಮೃತಪಟ್ಟಿದ್ದಾರೆ. ಹಿಂದೂ ಸಂಘಟನೆಗಳಿಂದ 11 ಮಂದಿ ಮುಸಲ್ಮಾನರು ಕೊಲೆಗೀಡಾಗಿದ್ದಾರೆ. ಮೃತಪಟ್ಟಿರುವ 23 ಮಂದಿ ಬಿಜೆಪಿ ಕಾರ್ಯಕರ್ತರು ಹೌದು. ಆದರೆ ಅವರೆಲ್ಲರೂ ಮುಸಲ್ಮಾನರಿಂದ ಕೊಲೆಗೈಯಲ್ಪಟ್ಟಿದ್ದಲ್ಲ. ಎಲ್ಲ ಪ್ರಕರಣಗಳಲ್ಲೂ ಆರೋಪಿಗಳ ಬಂಧನವಾಗಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ರೆಡ್ಡಿ ಹೇಳಿದರು.
Related Articles
ಬಿಜೆಪಿಯವರು ಗೋಹತ್ಯೆ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಾರೆ. ಆದರೆ ಗೋಮಾಂಸ ರಫ್ತು ನಿಲ್ಲಿಸುತ್ತಿಲ್ಲ. ಗೋಮಾಂಸ ರಫ್ತು ನಿಲ್ಲಿಸಲಿ. ಜತೆಗೆ ಎಲ್ಲ ಪ್ರಾಣಿಗಳ ಹತ್ಯೆಯನ್ನೂ ನಿಲ್ಲಿಸಲಿ. ಇದಕ್ಕೆ ನನ್ನ ಬೆಂಬಲವೂ ಇದೆ ಎಂದು ರೆಡ್ಡಿ ತಿಳಿಸಿದರು.
Advertisement