Advertisement

ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆ

12:54 AM Apr 22, 2019 | Lakshmi GovindaRaju |

ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿಯ ದೊಡ್ಡತೊಗೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.

Advertisement

ದೊಡ್ಡತೊಗೂರು ನಿವಾಸಿ ಪ್ರಿಯಾಂಕಾ (26) ಕೊಲೆಯಾದವರು. ಈ ಸಂಬಂಧ ಆಕೆಯ ಪತಿ, ಆರೋಪಿ ರಮೇಶ್‌ ಬಾಬು (34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿಯನ್ನು ಕೊಂದ ಆರೋಪಿ, ಒಂದು ಹಂತದಲ್ಲಿ ಫ್ಯಾನ್‌ಗೆ ಸೀರೆ ಕಟ್ಟಿ, ಅದಕ್ಕೆ ಪತ್ನಿಯ ಶವ ನೇತುಹಾಕಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಯತ್ನಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ರಮೇಶ್‌ಬಾಬು ದಂಪತಿ ಎಂಟು ವರ್ಷಗಳಿಂದ ಎಲೆಕ್ಟ್ರಾನಿಕ್‌ ಸಿಟಿಯ ದೊಡ್ಡತೊಗೂರಿನಲ್ಲಿ ವಾಸವಾಗಿದ್ದು, ದಂಪತಿಗೆ ಆರು ವರ್ಷದ ಹೆಣ್ಣು ಮಗು ಇದೆ. ಪುತ್ರಿಯನ್ನು ಪ್ರಿಯಾಂಕಾ ಪೋಷಕರ ಬಳಿ ಬಿಟ್ಟಿದ್ದಾರೆ.

ರಮೇಶ್‌ ಬಾಬು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಪ್ರಿಯಾಂಕಾ, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ರಮೇಶ್‌ಬಾಬು ಪರಸ್ತ್ರೀ ಜತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಪ್ರಿಯಾಂಕಾ ಪತಿಯನ್ನು ಪ್ರಶ್ನಿಸಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು.

Advertisement

ಶನಿವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಮದ್ಯ ಸೇವಿಸಿ ಮನೆಗೆ ಬಂದ ರಮೇಶ್‌ ಬಾಬುಗೆ ಪತ್ನಿ ಪ್ರಿಯಾಂಕ ಮತ್ತೆ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಒಂದು ಹಂತದಲ್ಲಿ ಕೋಪಗೊಂಡ ಆರೋಪಿ,

ಪ್ರಿಯಾಂಕಾ ಮೇಲೆ ಹಲ್ಲೆ ನಡೆಸಿದ್ದು, ಮೂಗು ಮತ್ತು ಬಾಯಿಯಲ್ಲಿ ರಕ್ತಸ್ರಾವವಾಗಿದೆ. ಇದರಿಂದ ಹೆದರಿದ ಆರೋಪಿ, ಆಕೆಯ ಕತ್ತು ಹಿಸುಕಿ ಹಾಗೂ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದರು.

ಆತ್ಮಹತ್ಯೆ ನಾಟಕ: ನಂತರ ಕೊಠಡಿಯಲ್ಲಿರುವ ಫ್ಯಾನ್‌ಗೆ ಸೀರೆ ಕಟ್ಟಿ ಪತ್ನಿಯನ್ನು ನೇಣು ಹಾಕಿದ ಆರೋಪಿ, ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜೋರಾಗಿ ಕೂಗಿಕೊಂಡಿದ್ದಾನೆ.

ಕೂಡಲೇ ಸ್ಥಳೀಯರು ಬಂದು ನೋಡಿ, ಪೊಲೀಸ್‌ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು.

ಅನುಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೌಟುಂಬಿಕ ವಿಚಾರವಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದ.

ಆದರೆ, ಆತನ ಗೊಂದಲದ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು, ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next