Advertisement
ಚೀನಾದ ವುಹಾನ್ ನಲ್ಲಿ ಜನ್ಮತಳೆದ ಕೋವಿಡ್-19 ವೈರಸ್ ಗೆ ಜಗತ್ತೇ ತತ್ತರಿಸತೊಡಗಿದೆ. ಈ ಹಿಂದೆಯೂ ಕಾಲರಾ, ಪ್ಲೇಗ್ ಮಹಾಮಾರಿ ಕೂಡಾ ಊರಿಗೆ, ಊರನ್ನೇ ಆಪೋಶನ ತೆಗೆದುಕೊಂಡಿತ್ತು ಎಂಬುದನ್ನು ಕೇಳಿದ್ದೇವೆ. 1990ರ ದಶಕದಲ್ಲಿ ಆಫ್ರಿಕಾದ ಸಹರಾ ಮರುಭೂಮಿಯಲ್ಲಿ ಹುಟ್ಟಿಕೊಂಡ ಏಬೋಲಾ ಎಂಬ ಮಾರಣಾಂತಿಕ ವೈರಸ್ ಕೂಡಾ ಮಾನವ ಜನಾಂಗವನ್ನು ಅಲುಗಾಡಿಸಿತ್ತು. ಈ ವೈರಸ್ ಕೂಡಾ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತ್ತು. ಆದರೆ ಈ ವೈರಾಣು ಭಾರತವನ್ನು ಪ್ರವೇಶಿಸಿಲ್ಲ. ಏಬೋಲಾಕ್ಕೂ ಕೂಡಾ ಈವರೆಗೂ ಅಧಿಕೃತವಾಗಿ ಲಸಿಕೆ ಕಂಡು ಹಿಡಿದಿಲ್ಲ. ಈ ಎಲ್ಲಾ ವೈರಸ್ ಗಳ ಕುರಿತು ಬೆಳ್ಳಿಪರದೆಯಲ್ಲಿ ಸಿನಿಮಾವಾಗಿ ಪ್ರದರ್ಶನ ಕಂಡಿತ್ತು.!
Related Articles
Advertisement
ಈ ಸಿನಿಮಾದ ಸಣ್ಣ ಎಳೆಯೊಂದನ್ನು ಉಲ್ಲೇಖಿಸುತ್ತೇನೆ..ನಂತರದ ಊಹೆ ನಿಮಗೆ ಬಿಟ್ಟಿದ್ದು. ಹಾಂಗ್ ಕಾಂಗ್ ನಿಂದ ಮಹಿಳಾ ಉದ್ಯಮಿ ಬೆಥ್ ಎಮೊಫ್ (ನಟಿ ಗ್ವಾನೆಥ್ ಪಾಲ್ಟ್ರೋ) ಊರಾದ ಮಿನ್ನೆಸೋಟಾಗೆ ವಾಪಸ್ ಆಗುತ್ತಾಳೆ. ಈ ಸಂದರ್ಭದಲ್ಲಿ ಜ್ವರ ಕಾಣಿಸಿಕೊಂಡ ಎರಡು ದಿನದಲ್ಲಿಯೇ ಪತಿಯ ಕಣ್ಣೆದುರೇ ಕುಸಿದು ಬಿದ್ದು ಸಾವನ್ನಪ್ಪುತ್ತಾಳೆ. ತಾಯಿಯನ್ನು ಹಿಡಿಯಲು ಪುಟ್ಟ ಮಗಳು ಓಡಲು ಮುಂದಾದಾಗ ತಂದೆ ಕೈ ಸನ್ನೆಯ ಮೂಲಕ ಬೇಡ ಎಂದು ಹೇಳಿದಾಗ. ಆ ಮಗು ಅಚ್ಚರಿ, ಆಘಾತದಿಂದ ಅಲ್ಲೇ ನಿಲ್ಲುತ್ತದೆ. ಇದೇ ಸೋಂಕು ಎಲ್ಲರಿಗೂ ಹಬ್ಬುತ್ತಾ ವಿಶ್ವಾದ್ಯಂತ ವ್ಯಾಪಿಸತೊಡಗುತ್ತದೆ….ಮುಂದೇನು…ಏನಾಗುತ್ತದೆ….ಆಕೆಗೆ ಸೋಂಕು ಹೇಗೆ ತಗುಲಿತು. ಅದರ ಮೂಲವೇನು ಎಂಬ ಬಗ್ಗೆ ನಿಮಗೆ ಕುತೂಹಲವಿದ್ದರೆ ನೆಟ್ ಫ್ಲಿಕ್ಸ್ ನಲ್ಲಿಯೋ ಅಥವಾ ಅಮೆಜಾನ್ ಫ್ರೈಮ್ ನಲ್ಲಿ ಕಂಟೇಜನ್ ಚಿತ್ರ ವೀಕ್ಷಿಸಿ!
ಸ್ವೀವನ್ ಸೋಡೆರ್ ಬರ್ಗ್ 1963ರ ಜನವರಿ 14ರಂದು ಅಟ್ಲಾಂಟದಲ್ಲಿ ಜನಿಸಿದ್ದರು. ಸ್ಟೀವನ್ ಬಾಲ್ಯದಲ್ಲಿಯೇ ಅವರ ಪೋಷಕರು ವರ್ಜಿನಿಯಾಕ್ಕೆ ವಲಸೆ ಬಂದಿದ್ದರು. ಚಿಕ್ಕಂದಿನಲ್ಲಿಯೇ ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಸ್ಟೀವನ್ 1989ರಲ್ಲಿ ಮೊದಲ ಸಿನಿಮಾ ನಿರ್ದೇಶಿಸುವ ಮೂಲಕ 26ನೇ ವಯಸ್ಸಿಗೆ ಅತೀ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಸ್ಟೀವನ್ ಅವರ ಕಂಟೇಜನ್ ಸಿನಿಮಾ ಸಮೂಹಪ್ರಜ್ಞೆ(ಕ್ರೌಡ್ ಸೈಕಾಲಜಿ) ಹಾಗೂ ಒಗ್ಗಟ್ಟಿನ ನಡವಳಿಕೆಯ ಮಾಸ್ ಹಿಸ್ಟರಿಯಾದ ಜತೆ, ಜತೆಗೆ ಸಾಮಾಜಿಕ ಕಳಕಳಿಯನ್ನೇ ಹೇಗೆ ಕಳೆದುಕೊಳ್ಳುತ್ತಾರೆ ಎಂಬ ಅಂಶ ಪ್ರಸ್ತುತಪಡಿಸಲಾಗಿದೆ. ವೈರಸ್ ನಿಂದ ಸಂಭವಿಸುವ ಪರಿಣಾಮ ಅದರ ಜತೆಗೆ ದಿಗ್ಭ್ರಮೆಗೊಳಿಸುವುದು, ಸೋಂಕು ಹರಡುವುದು, ಅಸಹಾಯಕತೆ, ಮಾಹಿತಿ ಕೊರತೆಯನ್ನು ಸುಳ್ಳು ಸುದ್ದಿಯನ್ನಾಗಿ ಹಬ್ಬಿಸುವ ಸಂಚು ಹೇಗೆ ಭಯಭೀತರನ್ನಾಗಿಸುತ್ತದೆ ಎಂಬುದನ್ನು ಸ್ಟೀವನ್ ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ!