Advertisement
“ದರ್ಪಣ’ ಒಂದು ವೈಜ್ಞಾನಿಕ ಕಮರ್ಷಿಯಲ್ ಥ್ರಿಲ್ಲರ್ ಚಿತ್ರವಾಗಿದ್ದು, ಕನ್ನಡ ಚಿತ್ರರಂಗದಲ್ಲೇ ಇಂಥದ್ದೊಂದು ಪ್ರಯತ್ನ ಇದುವರೆಗೂ ಆಗಿಲ್ಲ.
Related Articles
Advertisement
ಚಿತ್ರಕ್ಕೆ ಸೆನ್ಸಾರ್ ಬೋರ್ಡ್‌ನಿಂದ “ಎ’ ಸರ್ಟಿಫಿಕೇಟ್ ಸಿಕ್ಕಿದ್ದು, ಸೆಪ್ಟೆಂಬರ್ 8ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.ಹೈಲೈಟ್‌ಗಳನ್ನೆಲ್ಲಾ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು ಕಾರ್ತಿಕ್ ವೆಂಕಟೇಶ್. ಅವರೀಗ “ದರ್ಪಣ’ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಬಿಡುಗಡೆಗೂ ಮುನ್ನ ಒಮ್ಮೆ ಚಿತ್ರದ ಹಾಡು-ಟ್ರೇಲರ್ ತೋರಿಸಿ, ಚಿತ್ರದ ಬಗ್ಗೆ ನಾಲ್ಕು ಮಾತಾಡಬೇಕೆಂದು ಅವರು ತಮ್ಮ ತಂಡದವರ ಜೊತೆಗೆ ಬಂದಿದ್ದರು. ಸೈನ್ಸ್ ಫಿಕ್ಷನ್ ಚಿತ್ರಗಳು ಹೊಸದೇನಲ್ಲ. ಫಿಕ್ಷನ್ ಅಂದರೆ ಮುಂದೆ ಹೀಗೂ ಆಗಬಹುದು ಎಂದರ್ಥ. ಆದರೆ, ವೆಂಕಟೇಶ್ ಸೈನ್ಸ್ ಫ್ಯಾಕ್ಟ್ ಚಿತ್ರವನ್ನು ಮಾಡಿದ್ದಾರೆ. ಹಾಗಂದರೆ, ವೈಜ್ಞಾನಿಕ ನಿಜ ಎಂದರ್ಥ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಹೀಗಾಗುತ್ತದೆ ಎಂದು ಈ ಚಿತ್ರದ ಮೂಲಕ ಹೇಳುತ್ತಿದ್ದಾರೆ. ಇನ್ನೂ ಸರಳವಾಗಿ ಹೇಳುವುದಾದರೆ, ಮನುಷ್ಯನು ದೇವರ ನಿಯಮವನ್ನು ಬದಲಿಸುವುದಕ್ಕೆ ಹೊರಟರೆ, ಅದರಿಂದ ಏನೆಲ್ಲಾ ಆಗುತ್ತದೆ ಎಂಬುದು ಈ ಚಿತ್ರದ ಕಥೆ. ಹಾಗೆಯೇ, ದೇವರ ನಿಯಮಗಳ ವಿರುದ್ಧ ಗೆಲ್ಲುವುದು ಕಷ್ಟ ಎಂಬ ಮಾತನ್ನೂ ಹೇಳುತ್ತಿದ್ದಾರೆ.”ದರ್ಪಣ’ ಚಿತ್ರವನ್ನು ಎಡ್ವರ್ಡ್ ಡಿ’ಸೋಜಾ ನಿರ್ಮಿಸಿದ್ದಾರೆ. ಇನ್ನು ಚಿತ್ರದಲ್ಲಿ ಅರವಿಂದ್ ರಾವ್, ದುಬೈ ರಫೀಕ್, ಸಂದೀಪ್ ಮಲಾನಿ, ಯತಿರಾಜ್, ಸೂರ್ಯ, ಮಧುರ ಮುಂತಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆ ಪೈಕಿ ಶೂಟಿಂಗ್ ಇದ್ದ ಕಾರಣ ಅರವಿಂದ್ ರಾವ್ ಬಂದಿರಲಿಲ್ಲ. ಮಿಕ್ಕಂತೆ ಎಲ್ಲರೂ ನಾಲ್ಕಾ$°ಲ್ಕು ಮಾತುಗಳನ್ನಾಡಿದರು. ಈ ಚಿತ್ರದಲ್ಲಿ ವಿಜ್ಞಾನಿಯ ಪಾತ್ರವನ್ನು ಮಾಡಿರುವ ದುಬೈ ರಫೀಕ್, ಈ ಚಿತ್ರ ತಮ್ಮ ಚಿತ್ರಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಆಗಬಹುದು ಎಂದರು. ನಟ ಯತಿರಾಜ್, ನಿರ್ದೇಶಕರ ಭಂಡಧೈರ್ಯವನ್ನು ಮೆಚ್ಚಿಕೊಂಡರು. ನಿರ್ದೇಶಕರು ಹೊಸ ಹೊಸ ಸವಾಲುಗಳನ್ನು ಹಾಕಿ ಗೆಲ್ಲುವ ಪ್ರಯತ್ನ ಮಾಡುತ್ತಾರೆ ಎಂದರು. ಸಂದೀಪ್ ಮಲಾನಿ, ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡುತ್ತಿರುವುದಾಗಿ ಹೇಳಿದರು.