ಹೇಳಿದರು.
Advertisement
ಪಟ್ಟಣದ ಗೌತಮದಲ್ಲಿ ತಮ್ಮ ಸನ್ಯಾಸಗ್ರಹಣದ 25ನೇ ವರ್ಷದ ಪಾದಾರ್ಪಣೆ ದಿನದಂದು ದುರ್ಬಲ ಕುಟುಂಬವೊಂದನ್ನು ದತ್ತು ಪಡೆದು ಆ ಕುಟುಂಬವನ್ನು ಜೀವದಾನದ ಮೂಲಕ ಪೋಷಿಸುವ ವಾತ್ಸಲ್ಯ ದಿನವನ್ನಾಗಿ ಸನ್ಯಾಸಗ್ರಹಣ ದಿನಾಚರಣೆ ನಡೆಸಿದ ಶ್ರೀಗಳು ಮಠದ ಜೀವನದಾನ ಟ್ರಸ್ಟ್ ಮೂಲಕ ಉಪ್ಪಿನಂಗಡಿ ವಲಯ ಕಾಸರಗೋಡ ಮುಳಿಯಾಲದ ಧರ್ಮಸ್ಥಳ ನಿವಾಸಿಯಾಗಿದ್ದು ಕಿಡ್ನಿ ವೈಫಲ್ಯದಿಂದ ಕಳೆದ ಆರು ವರ್ಷಗಳಿಂದ ಬಳಲುತ್ತಿರುವ ಗೋಪಾಲಕೃಷ್ಣ ಭಟ್ ರಿಗೆ ಜೀವನದಾನವನ್ನು ಅನುಗ್ರಹಿಸಿಆಶೀರ್ವಚನ ನೀಡುತ್ತಿದ್ದರು.
ಎಚ್ಚರಿಸಿದ್ದರು. ಆದರೆ ನಾವು ಯಾವುದೇ ಅಡೆತಡೆಯನ್ನೂ ಮೀರಿ ಇಷ್ಟು ದೂರ ಬರಲು ಸಾಧ್ಯವಾಯಿತು. ನಮಗೆ ಸನ್ಯಾಸವೇನೂ ಮುಳ್ಳಿನ ಕಿರೀಟವೆನಿಸಲಿಲ್ಲ. ನಾವು ಅನೇಕ ವಿಧಾಯಕ ಕಾರ್ಯಕ್ರಮಗಳ ಮೂಲಕ ಅರ್ಧಮಂಡಲ (24 ವರ್ಷ) ಪೂರೈಸಿದ್ದೇವೆ ಎಂದು ಶ್ರೀಗಳು ತಿಳಿಸಿದರು. ಜೀವನದಾನ ಟ್ರಸ್ಟಿನ ಅಧ್ಯಕ್ಷ, ಶ್ರೀಮಠದ ಕಾರ್ಯನಿರ್ವಹಣಾ ಅಧಿಕಾರಿ ಕೆ.ಜಿ.ಭಟ್ಟ ಮಾತನಾಡಿದರು. ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ವೇ.ಶೇಷಗಿರಿ ಭಟ್ಟ ಉಪಸ್ಥಿತರಿದ್ದರು. ಜೀವನದಾನ ಅನುಗ್ರಹ ಪಡೆದ
ಗೋಪಾಲಕೃಷ್ಣ ಭಟ್ಟರ ಧರ್ಮಪತ್ನಿ ಮೀನಾಕ್ಷಿ, ಮಕ್ಕಳಾದ ಅನುರಾಧಾ, ಚೈತ್ರಾ ಹಾಗೂ ಅಳಿಯ ಸುರೇಶ ಪಾಲ್ಗೊಂಡಿದ್ದರು. ಆರ್.ಎಸ್.ಹೆಗಡೆ ಹರಗಿ ಪ್ರಾಸ್ತಾವಿಕ ಮಾತನಾಡಿದರು. ಗುರುಭಿಕ್ಷಾ ಸೇವೆ ನಡೆಸಿದ ಅನಂತ ರಾಮಯ್ಯ ಹೆಗಡೆ, ಪಾರ್ವತಿ
ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿದರು.