Advertisement

ಅಡಕೆ “ಮಾನ’ಕ್ಕೆ ಕುತ್ತು ತಂದ ಮಿಕ್ಸಿಂಗ್‌ ದಂಧೆ! 

06:00 AM Nov 28, 2018 | Team Udayavani |

ಶಿವಮೊಗ್ಗ: ಕಳಪೆ ಅಡಕೆ ಸಾಗಣೆ ದಂಧೆಯಲ್ಲಿ ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್‌ ಜಯಸೂರ್ಯ ಭಾಗಿಯಾಗಿದ್ದಾರೆ ಎಂಬ ಆರೋಪದ ಬೆನ್ನಲೇ ಸೋಮವಾರ ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳಿಂದ 3 ಲಾರಿ ಅಡಕೆ ಶಿವಮೊಗ್ಗಕ್ಕೆ ಬಂದಿರುವುದು ಪತ್ತೆಯಾಗಿದೆ. ಇದು ಮಿಕ್ಸಿಂಗ್‌ ದಂಧೆ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡಿದೆ. 

Advertisement

ಕಳೆದ ಎರಡು ತಿಂಗಳಿನಿಂದ ಧಾರಣೆಯಲ್ಲಿ ಸ್ಥಿರತೆ ಕಂಡುಕೊಂಡಿರುವ ಅಡಕೆಗೆ ಬೇರೆ ರಾಜ್ಯಗಳಿಂದ ಬರುತ್ತಿರುವ ಅಡಕೆ ಸವಾಲು ಒಡ್ಡುತ್ತಿದೆ. ಎಪಿಎಂಸಿ ಬಿಟ್ಟು ಹೊರಗೆ ವ್ಯವಹಾರ ಮಾಡುವ ಬಹುತೇಕ ಕಂಪನಿಗಳು ಮಿಕ್ಸಿಂಗ್‌ ದಂಧೆಯಲ್ಲಿ ತೊಡಗಿವೆ
ಎನ್ನಲಾಗಿದೆ. ಶಿವಮೊಗ್ಗದ ಅಡಕೆಯೊಂದಿಗೆ ಪಶ್ಚಿಮ ಬಂಗಾಳ, ಅಸ್ಸಾಂ, ಶ್ರೀಲಂಕಾ, ಮಲೇಶಿಯಾ ಸೇರಿದಂತೆ ಇತರೆ ಕಡೆಯಿಂದ ಕಳಪೆ ಅಡಕೆಯನ್ನು ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತದೆ. ಇದರಿಂದ ಉತ್ತಮ ಗುಣಮಟ್ಟದ ಅಡಕೆಯ ಮಾನ
ಹೋಗುತ್ತಿದೆ. ಕಳಪೆ ಅಡಕೆ ಎಂಬ ಕಾರಣಕ್ಕೆ ಶಿವಮೊಗ್ಗ ದಿಂದ ಬೇರೆ ಕಡೆ ಕಳುಹಿಸಲಾಗಿದ್ದ ಒಂದು ಲಾರಿ ಲೋಡ್‌ ಅಡಕೆ ಸೋಮವಾರ ವಾಪಸ್‌ ಬಂದಿದೆ.

ಕಳಪೆ ಯಾಕೆ: ಶಿವಮೊಗ್ಗ, ದಕ್ಷಿಣ ಕನ್ನಡ, ಚನ್ನಗಿರಿ, ಭೀಮ ಸಮುದ್ರದ ಅಡಕೆ ತುಂಬಾ ಮೃದುವಾಗಿದೆ. ಇದರಿಂದ ಗುಟ್ಕಾ ಕಂಪನಿಗಳಲ್ಲಿ ಬೇಡಿಕೆ ಇದೆ. ಅಷ್ಟೇ ಅಲ್ಲದೇ ಕರ್ನಾಟಕದಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ಅಡಕೆಗೆ ಬಣ್ಣ ಹಾಕುವ ಪದಟಛಿತಿ ಇದೆ. ಇದರಿಂದ ಉತ್ತಮ ಬೇಡಿಕೆ ಇದೆ. ಆದರೆ ಬೇರೆ ರಾಜ್ಯಗಳಲ್ಲಿ ಅಡಕೆಗೆ ರಾಸಾಯನಿಕ ಬಳಸಿ ಬಣ್ಣ ಹಾಕಲಾಗುತ್ತದೆ. ಇದರಿಂದ ಬಹುತೇಕ ಅಡಕೆಗಳು ಮಾರುಕಟ್ಟೆಯಲ್ಲಿ ತಿರಸ್ಕೃತಗೊಳ್ಳುತ್ತವೆ. ಹೀಗೆ ತಿರಸ್ಕೃತ ಅಡಕೆಯನ್ನು ಅಡ್ಡದಾರಿಗಳ ಮೂಲಕ ಮಾರುಕಟ್ಟೆಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ.

ಗುಟ್ಕಾ ಕಂಪನಿಯಲ್ಲೂ ಬೇಡಿಕೆ: ಎಲ್ಲ ಗುಟ್ಕಾ  ತಯಾರಿಕಾ ಕಂಪನಿಗಳೂ ಉತ್ತಮ ಗುಣಮಟ್ಟದ ಅಡಕೆಯನ್ನೇ ಬಳಕೆ ಮಾಡುವುದಿಲ್ಲ. ಶೇ.20ರಿಂದ 30ರಷ್ಟು ಕಳಪೆ ಅಡಕೆಯನ್ನೂ ಮಿಕ್ಸ್‌ ಮಾಡುತ್ತಾರೆ. ಬಹುತೇಕ ಕಂಪನಿಗಳು 3-4 ತಿಂಗಳಿಗೆ ಆಗುವಷ್ಟು ಅಡಕೆಯನ್ನು ಮೊದಲೇ ದಾಸ್ತಾನು ಮಾಡಿಡುತ್ತವೆ. ಹೀಗಾಗಿ ಕಡಿಮೆ ದರಕ್ಕೆ ಸಿಗುವ ಕಳಪೆ ಅಡಕೆಗೂ ಬೇಡಿಕೆ ಇದೆ.

ಕಡಿವಾಣ ಬೇಕು: ಅಸ್ಸಾಂ, ಪಶ್ಚಿಮ ಬಂಗಾಳದ ಅಡಕೆ ಕೂಡ ಶಿವಮೊಗ್ಗದ ಮಾರುಕಟ್ಟೆಗೆ ಬಂದಿದೆ. ಉತ್ತಮವಾದ ಅಡಕೆಯ ಜೊತೆ ಕಳಪೆ ಅಡಕೆ ಬೆರೆಸುವುದರಿಂದ ಉತ್ತಮ ಅಡಕೆ ಸಹ ಬೇಡಿಕೆ ಕಳೆದುಕೊಳ್ಳಲಿದೆ. ಇದನ್ನು ತಡೆಯಲು ಎಪಿಎಂಸಿ ಮೂಲಕವೇ ಎಲ್ಲ ವ್ಯವಹಾರ ನಡೆಯುವಂತೆ ಕಾನೂನು ತರಬೇಕು ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷ ದುಗ್ಗಪ್ಪ ಗೌಡ. ಎರಡು ವರ್ಷಗಳ ಹಿಂದೆ 50 ಸಾವಿರ ಗಡಿ ದಾಟಿದ್ದ ಅಡಕೆ ಇಂದು 34 ಸಾವಿರಕ್ಕೆ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ಅಡಕೆ ವಾಪಸ್‌ ಬರುತ್ತಿದ್ದರೆ, ಉಳಿದ
ಅಡಕೆಯ ಬೇಡಿಕೆ ಕುಸಿಯುತ್ತದೆ. ಇದರಿಂದ ಮಿಕ್ಸಿಂಗ್‌ ಮಾಡುವವರ ವಿರುದಟಛಿ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯವಿದೆ ಎನ್ನುತ್ತಾರೆ ಎಪಿಎಂಸಿ ಸದಸ್ಯರೊಬ್ಬರು.

Advertisement

ಕಳ್ಳ ಮಾರ್ಗದ ಮೂಲಕ ಅಡಕೆ ರವಾನೆ?
ಶ್ರೀಲಂಕಾದಿಂದ ಬರುವ ಅಡಕೆ ಮಲೇಷಿಯಾದ್ದು ಎನ್ನಲಾಗಿದೆ. ಮಲೇಷಿಯಾದಿಂದ ಭಾರತಕ್ಕೆ ಅಡಕೆ ಆಮದು ಮಾಡಿಕೊಳ್ಳಲು ಶೇ.110ರಷ್ಟು ಟ್ಯಾಕ್ಸ್‌ ಇರುವುದರಿಂದ ಅಲ್ಲಿಂದ ಯಾರೂ ಅಡಕೆ ತರುವುದಿಲ್ಲ. ಇದರಿಂದ ಕಳ್ಳ ಮಾರ್ಗ ಹಿಡಿದಿರುವ ದಂಧೆಕೋರರು ಶ್ರೀಲಂಕಾ ಮೂಲಕ ಅಡಕೆ ತರುತ್ತಿದ್ದಾರೆ. ಶ್ರೀಲಂಕಾ ಮೂಲಕ ಬರುವ ಅಡಕೆಗೆ ಯಾವುದೇ ತೆರಿಗೆ ಇಲ್ಲ. ಅಲ್ಲದೇ ಮಲೇಷಿಯಾದಿಂದ ಶ್ರೀಲಂಕಾಗೆ ತರಲು ತೆರಿಗೆ ಇಲ್ಲ. ಈ ಅಡಕೆಯು ಭಾರತದ ಅಡಕೆ ಜತೆ ಮಿಕ್ಸ್‌ ಆಗುತ್ತದೆ. 20-30 ಸಾವಿರಕ್ಕೆ ಸಿಗುವ ಈ ಅಡಕೆಗೆ ಬಣ್ಣ ಹಾಕಿ ಮಾರಲಾಗುತ್ತದೆ. ಇದೇ ತರಹದ ಸರಕು ಅಡಕೆಗೆ ಪ್ರಸ್ತುತ 50 ರಿಂದ 60 ಸಾವಿರ ದರ ಇದೆ.

ಶರತ್ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next