Advertisement

ಮಂಗಳನ ಮೇಲೆ ಯಶಸ್ವಿ ರೊಬೊಟಿಕ್ ಹೆಲಿಕಾಪ್ಟರ್‌ ಹಾರಾಟದ ಹಿಂದೆ ಕನ್ನಡಿಗ!

08:41 PM Apr 20, 2021 | Team Udayavani |

ವಾಷಿಂಗ್ಟನ್‌: ವಿಶ್ವವೇ ಕಣ್ಣರಳಿಸಿ ನೋಡುವಂತೆ ಮಂಗಳನ ಮೇಲೆ ರೊಬೊಟಿಕ್‌ ಹೆಲಿಕಾಪ್ಟರನ್ನು ಹಾರಿಸಿದ ನಾಸಾದ ಐತಿಹಾಸಿಕ ಯಶಸ್ಸಿನ ಹಿಂದಿರುವ ರೂವಾರಿ, ಬಾಬ್‌ ಬಲರಾಮ್‌ ಎಂಬ ಬೆಂಗಳೂರು ಮೂಲದ ವಿಜ್ಞಾನಿ!

Advertisement

ಮಂಗಳನ ಭೂಮೇಲ್ಮೆ„ನಲ್ಲಿ 30 ಸೆಕೆಂಡು ಹಾರಾಟ ನಡೆಸಿದ ಇಂಗೆನ್ಯೂಟಿಯನ್ನು ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್‌ ಪ್ರೊಪುಲ್ಶನ್ ಲ್ಯಾಬೊರೇಟರಿ (ಜೆಪಿಎಲ್‌) ಘಟಕದ ಮೂಲಕ ನಿಯಂತ್ರಿಸಲಾಗಿತ್ತು. ಈ ಹೆಲಿಕಾಪ್ಟರ್‌ ಹಾರಾಟ ಯೋಜನೆಗೆ ಮುಖ್ಯ ಎಂಜಿನಿಯರ್‌ ಆಗಿ ಬಲರಾಮ್‌ರನ್ನು ನೇಮಿಸಲಾಗಿತ್ತು. ಸ್ವಾತಿ ಮೋಹನ್‌ ಬಳಿಕ ನಾಸಾದ ಮಾರ್ಸ್‌ ಮಿಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ 2ನೇ ಮುಖ್ಯ ಎಂಜಿನಿಯರ್‌ ಇವರು.

ಬಾಲ್ಯದಿಂದಲೇ ಬಾಹ್ಯಾಕಾಶ ವಿಜ್ಞಾನದಲ್ಲಿ ಕುತೂಹಲ ಹೊಂದಿದ್ದ ಇವರು, ಖ್ಯಾತ ತಣ್ತೀಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಸ್ಥಾಪಿತ ರಿಷಿ ವ್ಯಾಲೆ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದರು. ಬಳಿಕ ಐಐಟಿ ಮದ್ರಾಸ್‌ನಲ್ಲಿ ಪದವಿ ಪೂರೈಸಿ, 35 ವರ್ಷಗಳಿಂದ ನಾಸಾದ ಜೆಪಿಎಲ್‌ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ :ಸಮುದ್ರದ ಪ್ಲಾಸ್ಟಿಕ್‌ ಕಣ ಸಂಸ್ಕರಣೆಗೆ ಐಐಟಿ ಗುವಾಹಟಿ ತಂಡ ಸಫ‌ಲತೆ

Advertisement

ಭೂಮಿ 1 ಲಕ್ಷ ಅಡಿ ಎತ್ತರಕ್ಕೆ ಸಮ!
“ದಟ್ಟ ಇಂಗಾಲ ಡೈ ಆಕ್ಸೆ„ಡ್‌ ವಾತಾವರಣ ಹೊಂದಿರುವ ಮಂಗಳದಲ್ಲಿ ಗಾಳಿಯ ಸಂಚಾರ ಭಾರೀ ಕಡಿಮೆ. ಕ್ಯೂಬಿಕ್‌ ಮೀಟರ್‌ ಗಾಳಿಯನ್ನು ಭೂಮಿಯ ಮೇಲೆ 1 ಕಿಲೋಗೆ ಹೋಲಿಸಿದರೆ, ಅಲ್ಲಿ ಈ ಪ್ರಮಾಣದ ಗಾಳಿ ಕೆಲವೇ ಗ್ರಾಂಗಳಲ್ಲಿ ತೂಗುತ್ತದೆ. ಹೀಗಾಗಿ, 30 ಸೆಕೆಂಡಿನ ಹೆಲಿಕಾಪ್ಟರ್‌ ಹಾರಾಟ ಭಾರೀ ಸಾಹಸಮಯ ಕಾರ್ಯವಾಗಿತ್ತು. ನ್ಯೂಟನ್‌ ನಿಯಮ ಆಧರಿಸಿ ಹೇಳುವುದಾದರೆ, 10 ಅಡಿಯ ಇಂಗೆನ್ಯೂಟಿಯ ಹಾರಾಟ, ಭೂಮಿ ಮೇಲೆ 1 ಲಕ್ಷ ಅಡಿ ಎತ್ತರದ ಹಾರಾಟಕ್ಕೆ ಸಮವಾಗಿತ್ತು’ ಎನ್ನುತ್ತಾರೆ, ಬಲರಾಮ್‌!

Advertisement

Udayavani is now on Telegram. Click here to join our channel and stay updated with the latest news.

Next