Advertisement

ಕ್ವಾರಂಟೈನ್‌ಗೆ ಒಳಗಾಗದ್ದು ಸಚಿವರ ನಿರ್ಲಕ್ಷ್ಯ

04:39 PM May 01, 2020 | mahesh |

ಮಂಡ್ಯ: ಕೋವಿಡ್ ಸೋಂಕು ದೃಢಪಟ್ಟಿರುವ ಖಾಸಗಿ ಸುದ್ದಿವಾಹಿನಿಯ ಕ್ಯಾಮರಾಮೆನ್‌ ಸಂಪರ್ಕಕ್ಕೆ ಬಂದಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಸೇರಿದಂತೆ ಐವರು ಸಚಿವರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್‌ಗೆ ಸೂಚಿಸಿದ್ದರೂನಿಯಮಾವಳಿ ಉಲ್ಲಂಘಿಸಿ ಡಾ. ಸುಧಾಕರ್‌ ಕೋವಿಡ್‌ ನಿಯಂತ್ರಣ ಸಭೆಯಲ್ಲಿ ಪಾಲ್ಗೊಂಡಿರುವುದು ಖಂಡನೀಯ ಎಂದು ಶಾಸಕ ಪುಟ್ಟರಾಜು ಟೀಕಿಸಿದರು.

Advertisement

ಖಾಸಗಿ ವಾಹಿನಿಯ ಕ್ಯಾಮೆರಾಮನ್‌ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸಚಿವರಾದ ಡಾ.ಸುಧಾಕರ್‌, ಬಸವರಾಜ ಬೊಮ್ಮಾಯಿ, ಸೋಮಣ್ಣ, ಸಿ.ಟಿ.ರವಿ ಅವರನ್ನು ಏ. 23ರಿಂದ ಮೇ 5ರವರೆಗೆ ಕ್ವಾರಂಟೈನ್‌ಗೆ ಆರೋಗ್ಯ ಇಲಾಖೆ ಸೂಚಿಸಿತ್ತು. ಆದರೂ ವೈದ್ಯಕೀಯ ಶಿಕ್ಷಣ ಸಚಿವರು ಮಂಡ್ಯದಲ್ಲಿ ಸಭೆ ನಡೆಸುವ ಮೂಲಕಕೋವಿಡ್‌-19ರ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಡಿಯೋ ಕಾನ್ಫರೆನ್ಸ್‌ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಬಹುದಿತ್ತು. ಇದೆಲ್ಲವನ್ನೂ ಬಿಟ್ಟು ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಸಭೆ ನಡೆಸಿರುವುದು ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಅಂತರ ಕಾಯ್ದುಕೊಳ್ಳಲಿ: ಸುಮಾರು ಆಸನ ವ್ಯವಸ್ಥೆಯುಳ್ಳ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ 60ರಿಂದ 70 ಮಂದಿ ಮಾತ್ರ ಸಭೆಯಲ್ಲಿ ಪಾಲ್ಗೊಳ್ಳಬಹುದು. ಆದರೆ ಬುಧವಾರ ನಡೆದ ಸಭೆಯಲ್ಲಿ 100ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು, ಶಾಸಕರು ಹಾಗೂ ಇತರರನ್ನು ಸೇರಿಸಿಕೊಂಡು ಸಭೆ ನಡೆಸುವ ಅಗತ್ಯವಾದರೂ ಏನಿತ್ತು. ಈ ಬಗ್ಗೆ ಜಿಲ್ಲಾಡಳಿತ ಎಚ್ಚರ ವಹಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜವಾಬ್ದಾರಿ ಮೆರೆಯಬೇಕಿದೆ ಎಂದರು. ಮಂಡ್ಯದಲ್ಲಿ ನಂಜನಗೂಡು ಜುಬಿಲಿಯೆಂಟ್‌ ಕಾರ್ಖಾನೆ, ದೆಹಲಿಯ ತಬ್ಲೀಘಿಗಳಿಂದ ಮಳವಳ್ಳಿ ಮತ್ತು ಮುಂಬೈ ಸಂಪರ್ಕದಿಂದ ನಾಗಮಂಗಲ ತಾಲೂಕಿನಲ್ಲಿ ಸೋಂಕು ಕಾಣಿಸಿಕೊಂಡು ಈಗಾಗಲೇ 18ಕ್ಕೇರಿದೆ. ಇನ್ನಾದರೂ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಚ್ಚರದಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next