Advertisement

ಶಾಸಕರ ಫ‌ಂಡ್‌ ಬಗ್ಗೆ 10 ವರ್ಷಗಳ ವಿವರ ನೀಡಲು ಡಿಸಿಗೆ ಸಚಿವರ ಆದೇಶ

03:45 AM May 09, 2017 | Team Udayavani |

ಬೆಂಗಳೂರು: ಕಳೆದ ಹತ್ತು ವರ್ಷಗಳಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಹಂಚಿಕೆಯಾದ, ಬಿಡುಗಡೆಯಾದ ಮತ್ತು ಬಳಕೆಯಾದ ಅನುದಾನದ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಯೋಜನಾ ಸಚಿವ ಎಂ.ಆರ್‌. ಸೀತಾರಾಂ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಬಳಕೆಗೆ ಸ್ಪಷ್ಟ ಮಾರ್ಗಸೂಚಿಗಳಿವೆ. ಇಂತಹದ್ದೇ ಕಾರ್ಯಕ್ರಮ ಮತ್ತು ಯೋಜನೆಗಳಿಗೆ ಇಂತಿಷ್ಟೇ ಅನುದಾನ ಕೊಡಬಹುದು ಎಂಬ ಸ್ಪಷ್ಟತೆ ಇದೆ. ಅದಾಗ್ಯೂ ನಿರೀಕ್ಷಿತ ಮಟ್ಟದಲ್ಲಿ ಶಾಸಕರ ಅನುದಾನ ಬಳಕೆ ಆಗುತ್ತಿಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ. ಹಾಗಾಗಿ ಕಳೆದ 10 ವರ್ಷಗಳ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕಳೆದ ವರ್ಷ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕರಿಗೆ ಒಟ್ಟು 600 ಕೋಟಿ ರೂ. ಆನುದಾನ ನೀಡಲಾಗಿತ್ತು, ಅದರಲ್ಲಿ 450 ಕೋಟಿ ರೂ. ಮಾತ್ರ ಖರ್ಚಾಗಿದೆ. ಶಾಸಕರ ಅನುದಾನ ಸಂಪೂರ್ಣವಾಗಿ ಆಯಾ ವರ್ಷದಲ್ಲೇ ಸಮರ್ಪಕವಾಗಿ ಬಳಕೆ ಆಗುವಂತೆ ನೋಡಿಕೊಳ್ಳಲಾಗುವುದು ಎಂದು ಸೀತಾತಾಂ ಇದೇ ವೇಳೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next