Advertisement

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನಸಂಪರ್ಕ ಸಭೆ 

04:16 PM Feb 26, 2017 | Team Udayavani |

ಗೋಣಿಕೊಪ್ಪ: ಕೊಂಗಣ ಹೊಳೆ ತಿರುವು ಯೋಜನೆಯನ್ನು ವಿರೋಧಿಸುವ ನಿರ್ಣಯ ಕೈಗೊಳ್ಳಬೇಕು ಮತ್ತು ಕೊಡಗನ್ನು ವಿಶೇಷ ವಲಯ ಎಂದು ಘೋಷಿಸುವಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಪೊನ್ನಂಪೇಟೆ ಹೋಬಳಿಯ 10 ಗ್ರಾಮದ ನಿವಾಸಿಗಳು ಒತ್ತಾಯಿಸಿದರು. 

Advertisement

ಪೊನ್ನಂಪೇಟೆ ಮಹಿಳಾ ಸಮಾಜದಲ್ಲಿ ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ಅವರ ನೇತೃತ್ವದಲಿ ನಡೆದ ಪೊನ್ನಂಪೇಟೆ ಹೋಬಳಿಯ ಜನರ ಕುಂದು ಕೊರತೆ ಪರಿಶೀಲನಾ ಸಭೆಯಲ್ಲಿ  ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು.

ಕೊಂಗಣ ಹೊಳೆ ತಿರುವು ಯೋಜನೆಯ ಬಗ್ಗೆ  ಸರಕಾರ ದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಈ ಭಾಗದಲ್ಲಿ  ಸರ್ವೆ ಕಾರ್ಯವು ನಡೆದಿಲ್ಲ. ಈ ಯೋಜನೆಯನ್ನು ಜನವಿರೋಧ ವ್ಯಕ್ತಪಡಿಸಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಲಾಗುವುದು. ಈ ವಿಚಾರವಾಗಿ 10 ದಿನದ ಒಳಗೆ ವಿಶೇಷ ಸಭೆಯನ್ನು ಕರೆಯಲಾಗುವುದು  ಎಂದು ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ತಿಳಿಸಿದರು.

ಜಿಲ್ಲೆಯ 3 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 1 ಕೋಟಿ 20 ಲಕ್ಷ ಅನುದಾನ ನೀಡಿದೆ. ತಾಲೂಕಿಗೆ 40 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ವಿರಾಜಪೇಟೆ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಅನುದಾನವನ್ನು ಬಳಕೆ ಮಾಡಲಾಗುತ್ತದೆ. ತೋಟಗಳಿಗೆ ಹಾಗೂ ಗದ್ದೆಗಳಿಗೆ ನದಿ-ತೋಡುಗಳಿಂದ ನೀರು ಹಾಯಿಸದೆ ಕುಡಿಯುವ ನೀರಿಗಾಗಿ ಮೇ ತಿಂಗಳವರೆಗೆ ನೀರನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಯುಕೊ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಜನ ವಿರೋಧಿಸುತ್ತಿರುವ ಕೊಂಗಣ ಹೊಳೆ ತಿರುವು ಯೋಜನೆ ಯನ್ನು ಅನುಷ್ಠಾನಕ್ಕೆ ಬಾರದಂತೆ ಕ್ರಮಕೈಗೊಳ್ಳಲು ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದರು. 

Advertisement

ಈ ಸಂಧರ್ಭ ಜಿಲ್ಲಾಧಿಕಾರಿ ಯೋಜನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಪೊನ್ನಂಪೇಟೆ ಹೋಬಳಿಯ 10 ಗ್ರಾಮದ ಜನರನ್ನು ಕತ್ತಲೆಯಲ್ಲಿಟ್ಟು ಕೊಂಗಣ ಹೊಳೆಯ ತಿರುವು ಯೋಜನೆಗೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ಇಲ್ಲ. ಹುಣಸೂರು ಶಾಸಕ ಮಂಜು ಅವರು ವಿಧಾನ ಸಭೆಯಲ್ಲಿ ಗಂಭೀರವಾಗಿ ಕೊಂಗಣ ಹೊಳೆ ತಿರುವು ಯೋಜನೆ ಮಂಡಿಸಿ ದರೂ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಯೋಜನೆಗೆ ನಿರ್ದೇಶನ ನೀಡಿದ್ದಾರೆ. ಇದು ಇಲ್ಲಿನ ಜನವಿರೋಧಿ ಯೋಜನೆಯಾಗಿದೆ.

ಸ್ಥಳೀಯ ಜನರಿಗೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೈಟೆನÒನ್‌ ಮಾರ್ಗ ಯೋಜನೆಯಿಂದ ಲಕ್ಷಾಂತರ ಮರಗಳು ನಾಶಗೊಂಡಿವೆ. ಈ ಎಲ್ಲದರ ಪರಿಣಾಮ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಗೊಂಡಿದೆ. ಭತ್ತದ ಕೃಷಿ ಹಿನ್ನಡೆ ಸಾಧಿಸಿದ್ದರಿಂದ ಮಣ್ಣಿನ ತೇವಾಂಶ ಕಡಿಮೆಗೊಂಡಿದ್ದು, ಅಂತರ್ಜಲ ಕುಸಿತ ಕಂಡಿದೆ. ಕೊಳವೆ ಬಾವಿಗಳು 700 ಅಡಿ ಕೊರೆದರೂ ಕಾವೇರಿಯ ಜನ್ಮ ಸ್ಥಳದಲ್ಲಿ ನೀರು ದೊರೆಯುತ್ತಿಲ್ಲ. 

ಕೊಂಗಣ ಹೊಳೆ ತಿರುವು ಯೋಜನೆಯಿಂದ ಹೊರ ತಾಲೂಕು ಜಿಲ್ಲೆಗಳಿಗೆ ನೀರು ಹಾಯಿಸುವ ಚಿಂತನೆ ನಡೆದಿದೆ. ಸ್ಥಳೀಯ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ರೂಪುಗೊಳ್ಳಬೇಕು ಎಂದರು.

ಆರ್‌.ಟಿ.ಸಿ.ಯಲ್ಲಿ ಹಲವು ಲೋಪಗಳು ಕಂಡುಬಂದಿದೆ. ವರ್ಷಕ್ಕೆ 3 ಬೆಳೆ ರೂಪದಲ್ಲಿ ಆರ್‌.ಟಿ.ಸಿ. ನೀಡಲಾಗುತ್ತಿದೆ. ಇದರಿಂದ ರೈತರಿಗೆ ಬಹಳಷ್ಟು ಸಮಸ್ಯೆ ಎದುರಾಗಿದೆ. ವರ್ಷ ಪೂರ್ತಿ ಇರುವ ಕಾಫಿ ಕೃಷಿಯನ್ನು ಆರ್‌.ಟಿ.ಸಿ.ಯಲ್ಲಿ ನಮೂದಿಸಬೇಕು. 

ಬೆಳೆಗಾರರು ಪದೇ ಪದೇ ಕಂದಾಯ ಇಲಾಖೆಗೆ ಆರ್‌.ಟಿ.ಸಿ. ದೋಷ ಸರಿಪಡಿಸಲು ಅಲೆಯುವು ದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಭತ್ತದ ಗದ್ದೆಗಳು ಪಾಳು ಬಿದ್ದಿದೆ. ಕೊಂಗಣ ಹೊಳೆ ನೀರನ್ನು ಸ್ಥಳೀಯವಾಗಿ ಬಳಸಿ ಇಲ್ಲಿನ ಕೃಷಿ ಭೂಮಿಯನ್ನು ಫ‌ಲವತ್ತತೆಗೊಳಿಸಲು ಯೋಜನೆ ರೂಪಿತ ವಾಗಬೇಕು. ಭತ್ತದ ಗದ್ದೆಗಳಲ್ಲಿ ಬಡಾವಣೆಗಳನ್ನು ನಿರ್ಮಿಸಲು ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್‌ ಪೆಡೆ°àಕರ್‌, ತಾಲೂಕು ದಂಡಾಧಿಕಾರಿ ಮಹದೇವಸ್ವಾಮಿ, ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ತಾ.ಪಂ. ಸದಸ್ಯೆ ಆಶಾ ಜೇಮ್ಸ್‌, ತಾ.ಪಂ. ಸದಸ್ಯೆ ಮೂಕಳೇರ ಆಶಾ ಪೂಣಚ್ಚ , ಪ್ರಕಾಶ್‌, ಕಂದಾಯ ಪರಿವೀಕ್ಷಕ ರಾಧಕೃಷ್ಣ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next