Advertisement
ಗಾಜಿನ ಮನೆಯ ಮೇಲಿನ ಗಾಜುಗಳು ಪುಡಿಯಾಗಿ ಮಳೆ ಬಂದರೆ ನೀರು ಒಳಗೆ ಸೋರುತ್ತಿದೆ. ಕಳೆದ 10-15 ದಿನಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲವಾಗಿದ್ದರೂ ಯಾರೊಬ್ಬರೂ ಗಮನಿಸದಾಗಿದ್ದಾರೆ. ಇಂದಿರಾ ಗಾಜಿನ ಮನೆ-ಮಹಾತ್ಮಾ ಗಾಂಧಿ ಉದ್ಯಾನವನ ಸುವಿಹಾರಿಗಳ ಸಂಘ, ಹಾಸ ಪರಿವಾರ, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಉದ್ಯಾನವನ ಸುಸ್ಥಿತಿಯಲ್ಲಿಡುವಂತೆ ಮಾಡಿದ ಮನವಿಗಳಿಗೆ ಬೆಲೆ ಇಲ್ಲವಾಗಿದೆ.
Related Articles
Advertisement
ಕೇವಲ ಟಿಕೆಟ್ ನೀಡುವುದಕ್ಕೆ ಸಿಬ್ಬಂದಿ ಇದ್ದಂತೆ ಭಾಸವಾಗುತ್ತಿದೆ. ಈ ಹಿಂದೆ ರಾಜೇಂದ್ರ ಚೋಳನ್ ಜಿಲ್ಲಾಧಿಕಾರಿಯಾಗಿದ್ದಾಗ ಉದ್ಯಾನವನ ಅಭಿವೃದ್ಧಿಗೆ ಆಸಕ್ತಿ ತೋರಿದ್ದರು. ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದರು. ಬೆಳಗಿನ ವಾಯುವಿಹಾರಕ್ಕೆ ಬರುವವರ ವಾಹನಗಳನ್ನು ಉದ್ಯಾನವನ ಮುಖ್ಯದ್ವಾರ ಆವರಣದಲ್ಲಿ ನಿಲ್ಲಿಸದೆ ಉಚಿತವಾಗಿ ವಾಹನ ನಿಲುಗಡೆ ಜಾಗದಲ್ಲಿ ನಿಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು.
ವಾಹನಗಳು ಪಾರ್ಕಿಂಗ್ ಪ್ರದೇಶದಲ್ಲಿ ಸರಿಯಾದ ರೀತಿಯಲ್ಲಿ ನಿಲ್ಲಿಸುವಂತೆ ನೋಡಿಕೊಳ್ಳಬೇಕೆಂದು ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದರು. ಇದು ಕೆಲವೇ ಕೆಲವು ದಿನಗಳವರೆಗೆ ನಡೆಯಿತಲ್ಲದೆ, ಇದೀಗ ಪಾರ್ಕಿಗ್ ಜಾಗ ಇದ್ದರೂ ಜನ ಮಾತ್ರ ಮನಸ್ಸಿಗೆ ಬಂದಂತೆ ಮುಖ್ಯದ್ವಾರ ಎದುರಿನ ಆವರಣದಲ್ಲಿಯೇ ಮನಸೋ ಇಚ್ಛೆ ನಿಲ್ಲಿಸುತ್ತಿದ್ದು, ಹೇಳುವವರು ಕೇಳುವವರು ಇಲ್ಲವಾಗಿದೆ.
ಸಿಸಿ ಕ್ಯಾಮೆರಾ ಹಾಕಿಸುತ್ತೇವೆ, ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸುತ್ತೇವೆ, ಕಲಾಕೃತಿಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದೆಲ್ಲ ಭರವಸೆ ನೀಡಿದ್ದ ಪಾಲಿಕೆ ಆಯುಕ್ತರು ಕನಿಷ್ಠ ತಾವು ನೀಡಿದ ಭರವಸೆಗಳನ್ನು ನೆನಪು ಮಾಡಿಕೊಂಡು ನಿರ್ಮಿತಿ ಕೇಂದ್ರದಿಂದ ಉದ್ಯಾನವನವನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳುವ, ಕನಿಷ್ಠ ಸುಧಾರಣೆ ಕ್ರಮಕ್ಕಾದರೂ ಮುಂದಾಗಲಿ ಎಂಬುದು ಜನರ ಒತ್ತಾಸೆ.
* ಬಸವರಾಜ ಹೂಗಾರ