Advertisement

ಜೆಡಿಎಸ್‌ ಕಚೇರಿಗೆ ಕಾಂಗ್ರೆಸ್‌ ಮೇಯರ್‌ ಪದ್ಮಾವತಿ ಭೇಟಿ

12:09 PM Mar 17, 2017 | Team Udayavani |

ಬೆಂಗಳೂರು: ಮೇಯರ್‌ ಪದ್ಮಾವತಿ ಗುರುವಾರ ಶೇಷಾದ್ರಿಪುರಂನ ಜೆಡಿಎಸ್‌ ನೂತನ ಕಚೇರಿಗೆ ಭೇಟಿ ನೀಡಿದ್ದರು. ಉಪ ಮೇಯರ್‌ ಆನಂದ್‌ ಅವರೊಂದಿಗೆ ಕಚೇರಿಗೆ ಭೇಟಿ ನೀಡಿದ್ದ ಪದ್ಮಾವತಿ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜತೆ ಕೆಲಹೊತ್ತು ಸಮಾಲೋಚನೆ ನಡೆಸಿದರು.

Advertisement

ಬಿಬಿಎಂಪಿಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದು, ಮೇಯರ್‌ ಆಯ್ಕೆಗೂ ಮುನ್ನ ಪದ್ಮಾವತಿ ಅವರು ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ತಮ್ಮ ಆಯ್ಕೆಗೆ ಬೆಂಬಲಿಸುವಂತೆ ಮನವಿ ಮಾಡಿದ್ದರು.

ಮೂಲತಃ ಜನತಾಪರಿವಾರದ ಪದ್ಮಾವತಿಯವರು ಜನತಾದಳದಿಂದ ಆಯ್ಕೆಯಾಗಿ ಪಾಲಿಕೆ ಪ್ರವೇಶಿಸಿದ್ದರು. ನಂತರ ಕಾಂಗ್ರೆಸ್‌ ಸೇರಿದ್ದನ್ನು ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next