Advertisement

ಚಾಲಕರು-ಕ್ಲೀನರ್‌ ಕಾರ್ಯಕ್ಷಮತೆಗೆ ಮೇಯರ್‌ ಮೆಚ್ಚುಗೆ

01:05 PM Apr 08, 2017 | |

ದಾವಣಗೆರೆ: ಏ. 13ರಂದು ತಮ್ಮ ಅಧಿಕಾರಾವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಮೇಯರ್‌ ರೇಖಾ ನಾಗರಾಜ್‌ ಶುಕ್ರವಾರ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಲಘು ಉಪಾಹಾರ ಕೂಟ ಏರ್ಪಡಿಸಿ, ಅವರ ಕಾಯಕ್ಷಮತೆ ಶ್ಲಾಘಿಸಿದ್ದಾರೆ. 

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ತ್ಯಾಜ್ಯ ಸಂಗ್ರಹ ಅಧಿಕವಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ಸವಾಲಾಗಿದೆ. ವಾಹನಗಳಲ್ಲಿ 60-70 ಟನ್‌ನಷ್ಟು ತ್ಯಾಜ್ಯ ಡಂಪ್‌ ಮಾಡಲಾಗುತ್ತಿತ್ತು. ವಾಹನಗಳ ಚಾಲಕರು, ಕ್ಲೀನರ್‌ಗೊಂದಿಗೆ ಮಾತನಾಡಿ, ಅವರ ಸಮಸ್ಯೆ ಆಲಿಸಿದ್ದರಲ್ಲದೆ, ವಾಹನಗಳ ದುರಸ್ತಿಗೆ ಮೇಯರ್‌ ಕ್ರಮ ಕೈಗೊಂಡಿದ್ದರು. 

ಇದರಿಂದ ಹಂತ ಹಂತವಾಗಿ ತ್ಯಾಜ್ಯ ವಿಲೇವಾರಿ ಪ್ರಮಾಣ ಹೆಚ್ಚುತ್ತಾ ಬಂದಿತಲ್ಲದೆ, 120 ಟನ್‌ ನಷ್ಟು ವಿಲೇವಾರಿ  ಮಾಡಲಾಗಿದೆ. ಚಾಲಕರು ಹಾಗೂ ಕ್ಲೀನರ್‌ಗಳ ಕಾರ್ಯಕ್ಷಮತೆ ಮೆಚ್ಚಿ ಅವರಿಗೆ ಕೃತಜ್ಞತೆ ಸಲ್ಲಿಸಿದ, ಮೇಯರ್‌ ಸ್ವತ ತಾವೇ ಲಘು ಉಪಾಹಾರ ವಿತರಿಸಿದರು. 

ಈ ವೇಳೆ  ಮಾತನಾಡಿದ ಮೇಯರ್‌ ರೇಖಾ ನಾಗರಾಜ್‌, 6 ತಿಂಗಳ ಹಿಂದೆ ನಾನು ಅಧಿಕಾರ ವಹಿಸಿಕೊಂಡಾಗ ನಗರದ ತ್ಯಾಜ್ಯ ವಿಲೇವಾರಿ ಪ್ರಮಾಣ ದಿನಕ್ಕೆ 70-80 ಟನ್‌ ಮಾತ್ರ  ಇತ್ತು. ವಾಸ್ತವದಲ್ಲಿ ದಿನನಿತ್ಯ 120 ಟನ್‌ ಕಸ ಉತ್ಪತ್ತಿಯಾಗುತ್ತದೆ. ಪೂರ್ಣ ಪ್ರಮಾಣದ ವಿಲೇವಾರಿ ಸಾಧ್ಯ ಆಗಿರಲಿಲ್ಲ.

ದಿನವೊಂದಕ್ಕೆ 40-50 ಟನ್‌ ಕಸ ಹಾಗೆ ಉಳಿಯುತ್ತಿತ್ತು. ಇದರ ಪರಿಹಾರಕ್ಕೆ ಚಾಲಕರ, ಕೀÉನರ್‌, ಕಸ ತುಂಬುವವರ ಸಭೆ ನಡೆಸಿದ್ದೆ. ಸಭೆಯಲ್ಲಿ ಸಿಬ್ಬಂದಿ ತಮಗೆ ಇದ್ದ ಸಮಸ್ಯೆ ಹೇಳಿಕೊಂಡಿದ್ದರು ಎಂದು ಸ್ಮರಿಸಿದರು. ವಾಹನ ದುರಸ್ತಿ ಇತರೆ ಸಮಸ್ಯೆ ಪರಿಹರಿಸಿದ ನಂತರ ದಿನನಿತ್ಯ ಕಸ ವಿಲೇವಾರಿ ಪ್ರಮಾಣ ಹೆಚ್ಚಾಗುತ್ತಾ ಹೋಯಿತು.

Advertisement

ಇಂದು 38 ವಾಹನಗಳಲ್ಲಿ ಸರಿಯಾಗಿ 120 ಟನ್‌ ಕಸ ವಿಲೇವಾರಿ ಮಾಡಲಾಗಿದೆ. ನಿಜಕ್ಕೂ ಇದು ಉತ್ತಮ ಕಾರ್ಯ. ಇದನ್ನು ಮುಂದೆ ಸಹ ಹೀಗೆ ಕಾಪಾಡಿಕೊಂಡು ಹೋಗಿ. ಸಮಸ್ಯೆಗಳು ಬಂದಾಗ ಪರಿಹರಿಸಿಕೊಂಡು ನಗರದ ಸ್ವತ್ಛತೆಗೆ ಒತ್ತುಕೊಡಿ ಎಂದು ಕೋರಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಹಾಲೇಶ್‌, ಪಾಲಿಕೆ ಆಯುಕ್ತ ಬಿ.ಎಚ್‌. ನಾರಾಯಣಪ್ಪ, ಪಾಲಿಕೆಯ ಹಿರಿಯ ಸದಸ್ಯ ಶಿವನಹಳ್ಳಿ ರಮೇಶ್‌, ಪೌರ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜ್‌ ಇತರರು ಈ ಸಂದರ್ಭದಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next