Advertisement

ವಿಷಯ ಇಲ್ಲದಿದ್ದರೂ ಕೈ ನಾಯಕರಿಂದ ಆರೋಪ

11:01 AM Nov 04, 2017 | |

ಬೆಂಗಳೂರು: “ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡುರಾವ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಹತಾಶೆಗೊಂಡಿದ್ದು, ಬಿಜೆಪಿಗರ ವಿರುದ್ಧ ದೋಷಾರೋಪಕ್ಕೆ ಯಾವುದೇ ವಿಷಯ ಇಲ್ಲದೇ, ಸತ್ತ ಕುದುರೆಯನ್ನು ಮತ್ತೆ ಹೊಡೆಯುವ ಪ್ರಯತ್ನ’ ಎಂದು ಬಿಜೆಪಿ ರಾಜ್ಯ ವಕ್ತಾರ ಎಸ್‌.ಸುರೇಶ್‌ ಕುಮಾರ್‌ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

Advertisement

ಜೈಲಿಗೆ ಹೋಗಿ ಬಂದಿರುವ ಅಮಿತ್‌ ಶಾ ಹಾಗೂ ಯಡಿಯೂರಪ್ಪ ಸೇರಿ ಪರಿವರ್ತನಾ ರ್ಯಾಲಿ ಉದ್ಘಾಟಿಸಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಸುದೀರ್ಘ‌ ವಿಚಾರಣೆಯ ನಂತರ ನ್ಯಾಯಾಲಯವೇ ಅಮಿತ್‌ ಶಾ ಹಾಗೂ ಯಡಿಯೂರಪ್ಪ ಅವರನ್ನು ಗೌರವಾನ್ವಿತವಾಗಿ ನಿರ್ದೋಷಿ ಎಂದು ಹೇಳಿದೆ.

ಕಾಂಗ್ರೆಸ್‌ ನಾಯಕರಿಗೆ ಬಿಜೆಪಿಗರ ವಿರುದ್ಧ ಆರೋಪಿಸಲು ಯಾವುದೇ ವಿಷಯ ಇಲ್ಲ. ಹೀಗಾಗಿ ಅಪ್ರಸ್ತುತ ವಿಚಾರಗಳನ್ನು ಚರ್ಚೆಗೆ ತರುತ್ತಿದ್ದಾರೆ. ಇದು ಅವರ ರಾಜಕೀಯ ದಿವಾಳಿತನ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next