Advertisement

ನಾಳೆ ಬೃಹತ್‌ ಪ್ರತಿಭಟನೆ

02:39 PM Apr 05, 2017 | |

ಧಾರವಾಡ: ತಾಲೂಕಿನಲ್ಲಿ ಉಳಿಸಿ ಹೋರಾಟ ಸಮಿತಿಯಿಂದ ನಿಗದಿ ಹಾಗೂ ಮುಗದ ಸುತ್ತಮುತ್ತಲಿನ ಗ್ರಾಮಗಳನ್ನು ಧಾರವಾಡ ತಾಲೂಕಿನಲ್ಲೇ ಮುಂದುವರಿಸುವ ಕುರಿತಂತೆ ಆಗ್ರಹಿಸಿ ಏ.6ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ  ಅಧ್ಯಕ್ಷ ಮಲ್ಲನಗೌಡರ ಗೌಡರ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಜಿಲ್ಲೆಯಲ್ಲಿ 2017-18ರ ಬಜೆಟ್‌ ನಲ್ಲಿ ಅಳ್ನಾವರ ಹೊಸ ತಾಲೂಕು ಘೋಷಿಸಿದೆ. ಅದರ ಅಂಗವಾಗಿ ಧಾರವಾಡ ತಾಲೂಕನ್ನು ವಿಭಜಿಸಿ ಹೊಸ ಅಳ್ನಾವರ ತಾಲೂಕಿಗೆ ನಿಗದಿ ಹಾಗೂ ಸುತ್ತಲಿನ 13 ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸುವ ಪ್ರಯತ್ನ ನಡೆದಿದೆ.

ಇದು ನಮ್ಮ ಗ್ರಾಮಗಳ ಜನರಿಗೆ ತುಂಬಾ ಅನಾನುಕೂಲ ಮತ್ತು ತೊಂದರೆ ಉಂಟು ಮಾಡಲಿದೆ ಎಂದರು. ಈ ಹಿಂದೆಯೇ ಸಂಬಂಧಪಟ್ಟವರಿಗೆ ಗ್ರಾಮಗಳಿಂದ ತರಕಾರು ಮನವಿ  ಸಲ್ಲಿಸಲಾಗಿತ್ತು. ಆದರೆ ಈಗ ಗ್ರಾಮಗಳ ಜನರ ಮನವಿಗೆ ಸ್ಪಂದಿಸದೇ ಆ ಭಾಗಗಳನ್ನು ಅಳ್ನಾವರ ಹೊಸ ತಾಲೂಕಿಗೆ ಸೇರ್ಪಡೆ ಮಾಡಲು ಮುಂದಾಗಿರುವುದು ಸರಿಯಲ್ಲ. 

ಈ ಕ್ರಮ ಖಂಡಿಸಿ ಏ.6 ರಂದು ಧಾರವಾಡದ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಕೈಗೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಮೆರವಣಿಗೆಯಲ್ಲಿ 13 ಗ್ರಾಮಗಳ ಜನರು ಪಾಲ್ಗೊಳ್ಳಲಿದ್ದಾರೆ ಎಂದರು. 

ಅಳ್ನಾವರ ಹೊಸ ತಾಲೂಕಿಗೆ ಸೇರ್ಪಡೆ ಮಾಡಲು ಹೊರಟಿರುವ 13 ಗ್ರಾಮಗಳು ಧಾರವಾಡ ತಾಲೂಕಿನಿಂದ ಕೇವಲ 10-15 ಕಿ.ಮೀ ಅಂತರದಲ್ಲಿವೆ. ಆದರೆ ಹೊಸ ಅಳ್ನಾವರ ತಾಲೂಕು ಈ ಗ್ರಾಮಗಳಿಂದ 40 ರಿಂದ 55 ಕಿ.ಮೀ  ದೂರದಲ್ಲಿವೆ. ಇದರಿಂದ ಜನರಿಗೆ ಸಾಕಷ್ಟು ಅನಾನುಕೂಲ ಆಗಲಿದ್ದು, ಸಮಯವೂ ನಷ್ಠ ಆಗಲಿದೆ. 

Advertisement

ಇದಲ್ಲದೇ ಜನರಿಗೆ ಸರಕಾರಿ ಕೆಲಸಗಳು ದುರ್ಬಲವಾಗಲಿದ್ದು, ಒಂದು ವೇಳೆ ಅಭಿವೃದ್ಧಿ ದೃಷ್ಟಿಯಿಂದ ತಾಲೂಕಿನ ರಚನೆ ಅನಿವಾರ್ಯವಾದಲ್ಲಿ ಧಾರವಾಡ ಶಹರ ತಾಲೂಕು ಹಾಗೂ ಧಾರವಾಡ ಗ್ರಾಮೀಣ ತಾಲೂಕು ಮಾಡಬೇಕೆಂದು ಆಗ್ರಹಿಸಿದರು. ಮಹದೇವಪ್ಪ ನೀರಲಗಿ, ತಾಪಂ ಸದಸ್ಯೆ ಪಾವನಾ ಬೇಲೂರು, ಕಲ್ಮೇಶ ಹಾವೇರಿಪೇಟ, ಶ್ರೀಕಾಂತ ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next