Advertisement

ಕೇಂದ್ರದ ಮಾರುಕಟ್ಟೆ ಪರಿಕಲ್ಪನೆ ರೈತರಿಗೆ ಅನುಕೂಲ

07:53 PM Nov 21, 2020 | Suhan S |

ವಿಜಯಪುರ: ಕೇಂದ್ರ ಸರ್ಕಾರ ಒಂದು ರಾಷ್ಟ್ರ,ಒಂದು ಮಾರುಕಟ್ಟೆ ಪರಿಕಲ್ಪನೆಯಲ್ಲಿ ಜಾರಿಗೆತಂದಿರುವ ಕೃಷಿ ವಿಷಯಕ್ಕೆ ಸಂಬಂಧಿಸಿದ ವಿವಿಧಕಾಯ್ದೆಗಳು ಐತಿಹಾಸಿಕ ಕಾಯ್ದೆಗಳಾಗಿವೆ. ಸದರಿಕಾಯ್ದೆಗಳಿಂದ ದೇಶದಲ್ಲಿ ಭವಿಷ್ಯದ ದಿನಗಳಲ್ಲಿ ದೇಶದ ಕೃಷಿ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ನೆರವಾಗಲಿದೆ ಎಂದು ಆತ್ಮ ಯೋಜನೆ ಉಪ ಯೋಜನಾ ನಿರ್ದೇಶಕ ಡಾ| ಎಂ.ಬಿ. ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಕೃಷಿ ಇಲಾಖೆಯ ಆತ್ಮ ಯೋಜನೆ ರೈತರ ಸಲಹಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಕೃಷಿ ಕ್ಷೇತ್ರದ ಕುರಿತ ಅಗತ್ಯ ವಸ್ತುಗಳಕಾಯ್ದೆ-1955ರ ಕಾಯ್ದೆಯನ್ವಯ ರೈತರ ಉತ್ಪನ್ನ ಮಾರಾಟ ಮತ್ತು ಉತ್ತೇಜನ-ಸೌಲಭ್ಯದ ವಾಣಿಜ್ಯ ಕಾಯ್ದೆ, 2020 ಮತ್ತು ಬೆಲೆ ಖಾತರಿಮತ್ತು ಕೃಷಿ ಸೇವೆಗಳು (ರೈತರ ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಕಾಯ್ದೆ-2020 ಜಾರಿಗೆ ತರಲಾಗಿದೆ. ಸದರಿ ಕಾಯ್ದೆಗಳು ಭವಿಷ್ಯದ ದಿನಗಳಲ್ಲಿ ರೈತರ ಬದುಕನ್ನು ಹಸನು ಮಾಡಲಿವೆಎಂದು ಹೇಳಿದರು.

ಸದರಿ ಕಾಯ್ದೆಗಳು ಒಂದು ರಾಷ್ಟ್ರ ಒಂದು ಮಾರುಕಟ್ಟೆ ಎಂಬ ತತ್ವದ ಮೇಲೆ ಆಧಾರಿತವಾಗಿದ್ದು, ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಎಪಿಎಂಸಿ, ಇತರೆ ಕೃಷಿ ಸಂಬಂಧಿತ ಕಾಯ್ದೆ ಕಾನೂನುಗಳಿಗೆ ವ್ಯತಿರಿಕ್ತವಾಗಿಲ್ಲ, ಬದಲಾಗಿ ಪರಸ್ಪರ ಪೂರಕಾಗಿವೆ. ಎಪಿಎಂಸಿ ಕಾಯ್ದೆಗಳನ್ನು ಸೂಕ್ತ ತಿದ್ದುಪಡಿ ಸಹಿತ ಮುಂದುವರಿಸಲಾಗಿದೆ. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಇನ್ನು ಮುಂದೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ಎಪಿಎಂಸಿ ಹೊರಗಡೆ ದೇಶದ ಯಾವುದೇ ಮೂಲೆಯಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ರೈತರಿಗೆ ಅವಕಾಶ ಕಲ್ಪಿಸಿದೆ ಎಂದು ವಿವರಿಸಿದರು.

ಪ್ಯಾನ್‌ ಕಾರ್ಡ್‌ ಹೊಂದಿದ ಯಾವುದೇ ವ್ಯಕ್ತಿ, ಖಾಸಗಿ ಕಂಪನಿ, ಸಂಘ ಸಂಸ್ಥೆಗಳು, ಸಹಕಾರಸಂಘಗಳು, ರೈತ ಉತ್ಪಾದಕ ಕಂಪನಿಗಳುಹಾಗೂ ಸ್ವಸಹಾಯ ಸಂಘಗಳು ಕೃಷಿ ಉತ್ಪನ್ನಗಳ ವ್ಯವಹಾರದಲ್ಲಿ ತೊಡಗಬಹುದು. ಇದಲ್ಲದೇ, ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ ಭಾರತಅಭಿಯಾನದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನಯೋಜನೆಯಲ್ಲಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತುನೀಡಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಸುಮಾರು 1 ಲಕ್ಷ ಕೋಟಿ ರೂ. ವಿನಿಯೋಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ರೈತರು ಎಲ್ಲಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗದೇ, ತಮ್ಮದೇ ಆದ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿಕೊಂಡು ತಮ್ಮಉತ್ಪನ್ನಗಳ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆಹಾಗೂ ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಕೃಷಿಯನ್ನು ಲಾಭದಾಯಕ ಉದ್ಯೋಗ ಮಾಡುವಲ್ಲಿ ನೆರವಾಗಲಿದೆ ಎಂದರು. ಕೃಷಿಕ ಸಮಾಜದ ತಾಲೂಕ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

Advertisement

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಎಚ್‌.ವೈ. ಸಿಂಗೆಗೋಳ, ಹುಣಶ್ಯಾಳ, ಪ್ರಗತಿಪರ ರೈತರಾದ ಬಾಗಪ್ಪಗೌಡ ಪಾಟೀಲ, ಶರಣು ಸಾಂಬಾ, ದೇವೇಂದ್ರರಾವ್‌ ಮಳ್ಳಿ, ಮಹಾಂತೇಶ ಪೂಜಾರಿ, ಅನುಸೂಯಾ ಪಾರಗೊಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next