Advertisement
26 ನೇ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆ ನಡೆಸಿ ಮಾತನಾಡಿ, 2023 ರ ರಾಷ್ಟ್ರೀಯ ಯುವ ದಿನದ ಈ ದಿನ ಬಹಳ ವಿಶೇಷವಾಗಿದೆ. ಒಂದೆಡೆ ಈ ಶಕ್ತಿ ಹಬ್ಬ ಮತ್ತೊಂದೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ. ವಿವೇಕಾನಂದರ ಈ ಘೋಷಣೆಯು ಭಾರತದ ಯುವಜನತೆಯ ಜೀವನ ಮಂತ್ರವಾಗಿದೆ ಎಂದರು.
Related Articles
Advertisement
ಏಕ ಭಾರತ ಶ್ರೇಷ್ಠ ಭಾರತ ಒಂದು ಉದಾಹರಣೆ. ದೇಶ ಹೊಸ ಸಂಕಲ್ಪಗಳೊಂದಿಗೆ ಮುಂದಕ್ಕೆ ಸಾಗುತ್ತಿದೆ. ಯುವ ಶಕ್ತಿ ಮೂಲಕ ಭವಿಷ್ಯದ ರಾಷ್ಟ್ರದ ನಿರ್ಮಾಣ ಸುಲಭ ಎಂದರು. ಕಿತ್ತೊರಿನ ರಾಣಿ ಚನ್ನಮ್ಮ ದೇಶದ ಅಗ್ರಗಣ್ಯ ಮಹಿಳಾ ಸ್ವಾತಂತ್ರ್ಯ ಸೇನಾನಿ ಯಾಗಿದ್ದರು. ಅವರ ಸೇನೆಯಲ್ಲಿ ಸಂಗೊಳ್ಳಿ ರಾಯಣ್ಣ ಕೂಡ ವೀರ ಸೇನಾನಿಯಾಗಿದ್ದರು ಎಂದರು.
ಮೂರು ಸಾವಿರ ಮಠ, ಸಿದ್ದಾರೂಢ ಮಠ ನೆನಪಿಸಿಕೊಂಡು, ಮಹಾನ್ ಸಂಗೀತಕಾರರಾದ ಪಂಡಿತ್ ಕುಮಾರ್ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್ , ಭೀಮ್ ಸೇನ್ ಜೋಶಿ, ಗಂಗೂ ಬಾಯಿ ಹಾನಗಲ್ ಅವರನ್ನು ನೆನಪಿಸಿದರು. ಸಿದ್ದೇಶ್ವರ ಸ್ವಾಮೀಜಿ ಅವರಿಗೂ ನಾನು ಶ್ರದ್ದಾಂಜಲಿ ಅರ್ಪಿಸುತ್ತೇನೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದು ಎಂದರು. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಕನ್ನಡದಲ್ಲೇ ಹೇಳಲು ಪ್ರಯತ್ನಿಸಿದರು.
ದೇಶದ ವಿವಿಧ ಭಾಗಗಳಲ್ಲಿ ನಮ್ಮ ಯುವಕರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ನಂಬಲಾಗದ ಉದಾಹರಣೆಗಳಿವೆ.ಇಂದಿಗೂ ವಿಶ್ವ ವೇದಿಕೆಗಳಲ್ಲಿ ಗಣಿತದಿಂದ ವಿಜ್ಞಾನದವರೆಗೆ ಸ್ಪರ್ಧೆಗಳು ನಡೆದಾಗ ಭಾರತೀಯ ಯುವಕರ ಸಾಮರ್ಥ್ಯ ಜಗತ್ತನ್ನೇ ಬೆರಗುಗೊಳಿಸುತ್ತದೆ ಎಂದರು.