Advertisement

ಕ್ವಾರಂಟೈನ್ ಮುಗಿಸಿದ್ದ ವ್ಯಕ್ತಿ ಮನೆ ಸೇರುವ ಮುನ್ನವೇ ಕಲಬುರಗಿಯ ವ್ಯಕ್ತಿ ಸಾವು

12:01 PM May 26, 2020 | keerthan |

ಕಲಬುರಗಿ: ಕೋವಿಡ್-19 ಸೋಂಕಿತರ ಸಂಪರ್ಕಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ್ದ ವ್ಯಕ್ತಿಯೋರ್ವ ಮನೆ ಸೇರುವ ಮುನ್ನವೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

Advertisement

ಇಲ್ಲಿನ ಇಂದಿರಾ ನಗರದ ನಿವಾಸಿ 32 ವರ್ಷದ ‌ವ್ಯಕ್ತಿ ಮೃತಪಟ್ಟಿದ್ದು, ಈತ‌ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದರಿಂದ 14 ದಿನ ಕ್ವಾರಂಟೈನ್ ಮಾಡಲಾಗಿತ್ತು. ಸೋಮವಾರ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಮನೆಗೆ ಹೋಗುವಂತೆ ತಿಳಿಸಲಾಗಿತ್ತು.

ಅಂತೆಯೇ‌ ಸಂಬಂಧಿಯೊಬ್ಬರ ಬೈಕ್ ನಲ್ಲಿ ಮನೆಗೆ ಬರುವಾಗ ಆ ವ್ಯಕ್ತಿ ಅಸ್ವಸ್ಥಗೊಂಡಿದ್ದ.‌ ತಕ್ಷಣವೇ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.‌ ಆದರೆ ಸೋಮವಾರ ಸಂಜೆ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ. ಇನ್ನು, ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next