Advertisement

ಕದಿಯಲು ಬಂದವನ ರುಂಡ ಕಡಿದರು

11:15 PM Sep 22, 2019 | Lakshmi GovindaRaju |

ಹರಿಹರ: ಕುರಿಗಾಯಿಯೊಬ್ಬ ಕುರಿ ಕದಿಯಲು ಬಂದವನ ರುಂಡ ಕತ್ತರಿಸಿದ ಘಟನೆ ತಾಲೂಕಿನ ಜಿಟಿ ಕಟ್ಟೆ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಶನಿವಾರ ರಾತ್ರಿ ನಡೆದಿದೆ. ಮಲೇಬೆನ್ನೂರು ಮೂಲದ ಚಮನ್‌ ಸಾಬ್‌ (45) ಕೊಲೆಗೀಡಾದ ವ್ಯಕ್ತಿ. ಬೆಳಗಾವಿ ತಾ.ಚಿಕ್ಕೋಡಿ ಗ್ರಾಮದ ಆರೋಪಿ, ಕುರಿಗಾಯಿ ಅರ್ಜುನಪ್ಪ ಭಾನುವಾರ ತಾನೇ ಠಾಣೆಗೆ ಶರಣಾಗಿದ್ದಾನೆ.

Advertisement

ಹಲವು ದಿನಗಳಿಂದ ಜಿಟಿ ಕಟ್ಟೆ ಗ್ರಾಮದ ಗೌಡ್ರ ಶೇಖರಪ್ಪನವರ ಜಮೀನಿನಲ್ಲಿ ಕುರಿಗಳನ್ನು ಬಿಡಲಾಗಿತ್ತು. ಶನಿವಾರ ರಾತ್ರಿ 1 ಗಂಟೆ ಸುಮಾರಿಗೆ ಚಮನ್‌ ಸಾಬ್‌ ಮತ್ತಿತರ ನಾಲ್ವರು ಕುರಿ ಕಳ್ಳತನ ಮಾಡಲು ಬಂದಿದ್ದರು. ಅವರನ್ನು ಬೆನ್ನಟ್ಟಿದಾಗ ಉಳಿದವರು ಪರಾರಿಯಾಗಿದ್ದು, ಚಮನ್‌ ಸಾಬ್‌ ಸಿಕ್ಕಿಬಿದ್ದ.

ರೊಚ್ಚಿಗೆದ್ದು ಕೊಡಲಿಯಿಂದ ಆತನ ತಲೆ ಕತ್ತರಿಸಿ ಕೊಲೆ ಮಾಡಿರುವುದಾಗಿ ಆರೋಪಿ ಅರ್ಜುನಪ್ಪ ಪೊಲೀಸರಿಗೆ ತಿಳಿಸಿದ್ದಾನೆ. ಮೃತ ಚಮನ್‌ ಸಾಬ್‌ ಮತ್ತಿತರ ಗುಂಪಿನ ಮೇಲೆ ಜಿಲ್ಲೆಯ ಹಲವೆಡೆ ಕುರಿ ಕಳ್ಳತನದ ಆರೋಪಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮಲೇಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next