Advertisement
ಏನು ಬದಲಾವಣೆ?ಹೊಸ ನೀಲನಕ್ಷೆಗೆ ಶ್ರೀರಾಮ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ಜು. 18ರಂದು ಒಪ್ಪಿಗೆ ಸಿಕ್ಕಿದೆ. ಇದರಲ್ಲಿ ದೇಗುಲಕ್ಕೆ 3 ಹೊಸ ಗುಮ್ಮಟಗಳನ್ನು ಸೇರಿಸಲಾಗಿದೆ. ಆಧಾರಸ್ತಂಭಗಳ ಎತ್ತರವನ್ನು 160 ಅಡಿಗಳಿಂದ 366 ಅಡಿಗಳ ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮೆಟ್ಟಿಲುಗಳ ಅಳತೆಯನ್ನು 6 ಅಡಿಗಳಿಂದ 16 ಅಡಿಗಳಿಗೆ ಹೆಚ್ಚಿಸಲಾಗಿದೆ. ದೇಗುಲದ ಎತ್ತರವನ್ನೂ 141 ಅಡಿಗಳಿಂದ 161 ಅಡಿಗಳಿಗೆ ಏರಿಸಲಾಗಿದೆ.
ಮಂದಿರ ಸಮುಚ್ಚಯದಲ್ಲಿ ಶ್ರೀರಾಮ ದೇಗುಲ ಮಾತ್ರವಲ್ಲದೆ, ಸೀತಾಮಾತೆ, ಲಕ್ಷ್ಮಣ, ಗಣೇಶ ಮತ್ತು ಹನುಮಾನ್ ದೇವಸ್ಥಾನ ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಜತೆಗೆ ಇನ್ನಿತರ ಆಯ್ದ ದೇವರುಗಳ ಸಣ್ಣ ಗುಡಿಗಳು ಇರುತ್ತವೆ. ಶ್ರೀರಾಮ ದೇಗುಲದ ಗರ್ಭಗುಡಿಯ ಮೇಲ್ಛಾವಣಿಯು ಶಾಸ್ತ್ರಸಮ್ಮತವಾಗಿ ಅಷ್ಟಭುಜಾ ಕೃತಿ ಯಲ್ಲಿರಲಿದೆ. ಮೂರೂವರೆ ವರ್ಷಗಳಲ್ಲಿ ನಿರ್ಮಾಣ
ಮುಂದಿನ ಮೂರೂವರೆ ವರ್ಷಗಳಲ್ಲಿ ದೇಗುಲ ನಿರ್ಮಾಣ ಪೂರ್ಣಗೊಳ್ಳಲಿದೆ ಎನ್ನಲಾಗಿದ್ದರೂ ಲಾಕ್‌ಡೌನ್, ನಿರ್ಬಂಧಗಳಿಂದ ಅವಧಿ ಇನ್ನೂ ಆರೇಳು ತಿಂಗಳು ವಿಸ್ತರಿಸಬಹುದು ಎನ್ನಲಾಗಿದೆ. ಮಂದಿರ ನಿರ್ಮಾಣವನ್ನು ಹಿಂದೆ 3 ಕಂಪೆನಿಗಳಿಗೆ ವಹಿಸಲಾಗಿತ್ತಾದರೂ ಈಗ ಪೂರ್ಣ ಜವಾಬ್ದಾರಿಯನ್ನು ಲಾರ್ಸನ್ ಆ್ಯಂಡ್ ಬ್ರೊ (ಎಲ್‌ಆ್ಯಂಡ್‌ಟಿ)ಗೆ ನೀಡಲಾಗಿದೆ.
Related Articles
“ಸೋಮಪುರಾಸ್’ ದೇಗುಲ ವಾಸ್ತುಶಿಲ್ಪ ದಲ್ಲಿ ದೇಶದಲ್ಲೇ ಪ್ರಖ್ಯಾತ. ಇದೊಂದು ಕೌಟುಂಬಿಕ ಸಂಸ್ಥೆ. ದೇಗುಲ ವಾಸ್ತುಶಿಲ್ಪ ಈ ಕುಟುಂಬಕ್ಕೆ ವಂಶಪಾರಂಪರ್ಯ. ಈ ವರೆಗೆ 200ಕ್ಕೂ ಹೆಚ್ಚು ದೇಗುಲಗಳ ವಿನ್ಯಾಸ ಮಾಡಿ ಕೊಟ್ಟ ಹೆಗ್ಗಳಿಕೆ ಇವರದ್ದು. ರಾಮಮಂದಿರ ನಿರ್ಮಾಣ ಪರಿಕಲ್ಪನೆ ಮೊಳೆತಾಗಲೇ ವಿಹಿಂಪವು ಸೋಮಪುರಾಸ್‌ಗೆ ನೀಲನಕ್ಷೆಯ ಜವಾಬ್ದಾರಿ ನೀಡಿತ್ತು. ಕುಟುಂಬದ ಮುಖ್ಯಸ್ಥ ಚಂದ್ರ ಕಾಂತ್ ಸೋಮಪುರ ತಮ್ಮ ಹಿರಿಯ ರಿಂದ ವಾಸ್ತುಶಿಲ್ಪ ಜ್ಞಾನವನ್ನು ಪಡೆದವರು. ಅವರ ಪುತ್ರರೂ ಇದರಲ್ಲಿ ಸಿದ್ಧಹಸ್ತರು. ಗುಜರಾತ್‌ನ ಸೋಮನಾಥಪುರ ದೇಗುಲದ ವಾಸ್ತು ವಿನ್ಯಾಸವನ್ನು ಚಂದ್ರಕಾಂತ್ ಸೋಮಪುರ ಅವರ ತಾತ ಪ್ರಭಾಶಂಕರ್ ಸೋಮಪುರ ರೂಪಿಸಿದ್ದರು. ಈಗ ರಾಮಮಂದಿರಕ್ಕೆ ಚಂದ್ರಕಾಂತ್ ಮತ್ತು ಮಕ್ಕಳಾದ ನಿಖೀಲ್, ಆಶಿಶ್ ವಿನ್ಯಾಸ ರೂಪಿಸಿದ್ದಾರೆ.
Advertisement