Advertisement
ಮಕ್ಕಳ ರಕ್ಷಣೆ ಮತ್ತು ಹಕ್ಕುಗಳ ರಕ್ಷಿಸುವ ಕಾರ್ಯ ಸರ್ಕಾರ ಅಥವಾ ಸಂಘ ಸಂಸ್ಥೆಗಳಿಗೆ ಮಾತ್ರವೇ ಸೀಮಿತ ಅಲ್ಲ. ಎಲ್ಲಾ ಮಕ್ಕಳ ರಕ್ಷಣೆ ಸಮಾಜದ ಹೊಣೆ ಎಂದರು. ವಿದ್ಯಾರ್ಥಿಯೊಬ್ಬ 2-3 ದಿನಗಳಿಂದ ಗೈರು ಹಾಜರಾದರೆ ಆ ಶಾಲೆಯ ಮುಖ್ಯೋಪಾಧ್ಯಾಯರು ತಕ್ಷಣ ಆತ ಗೈರು ಆಗುತ್ತಿರುವ ಕಾರಣದ ಪೋಷಕರಿಂದ ಮಾಹಿತಿ ಪಡೆಯಬೇಕು. ಗೈರಾಗುವ ಮಕ್ಕಳ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು.
Related Articles
Advertisement
ಅದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್, ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿಯೇ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಅಂತಹ 2 ಹೆಣ್ಣು ಮಕ್ಕಳು ಬಾಲಮಂದಿರದಲ್ಲಿದ್ದಾರೆ. ಅವರಿಗೆ ಟೈಲರಿಂಗ್ ಹಾಗೂ ದಾನಿಗಳಿಂದ ಕಂಪ್ಯೂಟರ್ ಪಡೆದು ತರಬೇತಿ ನೀಡಲು ಕ್ರಮ ವಹಿಸಲಾಗಿದೆ ಎಂದರು.
ಮಕ್ಕಳ ಕಲ್ಯಾಣ ಸಂಸ್ಥೆಯ ಸಂಯೋಜಕ ಟಿ.ಎಂ. ಕೊಟ್ರೇಶ್, ಗ್ರಾಮ ಪಂಚಾಯತ್ ಮಟ್ಟದಿಂದ ಸಾರ್ವಜನಿಕರಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಗ್ರಾಮ ಪಂಚಾಯ್ತಿಗಳಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಮಕ್ಕಳ ಗ್ರಾಮಸಭೆ ನಡೆಸಬೇಕು ಎಂಬ ಸರ್ಕಾರದ ಆದೇಶ ಇದೆ. ಆದರೆ, ಸಭೆಗಳು ನಡೆಯುತ್ತಿಲ್ಲ. ಈ ಕುರಿತಂತೆ ಗ್ರಾಮ ಪಂಚಾಯತ್ ಸದಸ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಳೆದ ಸಾಲಿನಲ್ಲಿ ಮಕ್ಕಳ ಸಮಸ್ಯೆಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿಗೆ 3,887 ಕರೆ ಬಂದಿದ್ದು, ಹಲವು ಮಕ್ಕಳ ವಿಳಾಸ ಪತ್ತೆ ಹಚ್ಚಿ ಅವರ ಪೋಷಕರ ಜೊತೆ ಸೇರಿಸಲಾಗಿದೆ.ಅದರಲ್ಲಿ ಹೊರ ಜಿಲ್ಲೆಯ ಕೆಲವು ಮಕ್ಕಳು ಸೇರಿದ್ದಾರೆ. ವಿಳಾಸ ಪತ್ತೆ ಆಗದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.
ಮಕ್ಕಳ ರಕ್ಷಣಾ ಘಟಕದ ಸದಸ್ಯ ಕೆ.ಬಿ. ರೂಪ್ಲಾನಾಯ್ಕ, ತ್ಯಾವಣಗಿ ಪಂಚಾಯತಿಯಲ್ಲಿ ವಿಶೇಷ ಚೇತನ ಸೌಲಭ್ಯದಡಿ ಅವಶ್ಯವಿರುವ ಸಾಧನಗಳನ್ನು ಬಿಟ್ಟು ಮಂಚಗಳನ್ನು ನೀಡಲಾಗಿದೆ ಎಂಬುದನ್ನು ಸಭೆ ಗಮನಕ್ಕೆ ತಂದಾಗ ಜಿಲ್ಲಾ ಧಿಕಾರಿ, ಹಾಗಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಬಸ್, ರೈಲ್ವೆ ನಿಲ್ದಾಣದಲ್ಲಿ ಸಿಗುವ ಮಕ್ಕಳನ್ನು ಗುರುತಿಸಿ ಅವರ ಪೋಷಕರ ವಿಳಾಸ ಪತ್ತೆ ಹಚ್ಚುವುದು,
ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ಮಕ್ಕಳ ಸಹಾಯವಾಣಿಗೆ ಬರುವ ದೂರುಗಳನ್ನು ತ್ವರಿತ ಗಮನಹರಿಸುವ ಬಗ್ಗೆ ಸಂಬಂಧಿತ ಇಲಾಖೆ ಅಧಿಕಾರಿಗಳು ಗಮನ ನೀಡಬೇಕು ಎಂದು ಜಿಲ್ಲಾಧಿಕಾರಿ ರಮೇಶ್ ಸೂಚಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಬಸನಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್.ಎಂ. ಪ್ರೇಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ. ಸದಾಶಿವ ಇತರರು ಇದ್ದರು.