Advertisement

ಸಂಚಾರ ದಟ್ಟಣೆಯ ಪ್ರಮುಖ “ಕೇಂದ್ರ’

01:07 AM Jun 08, 2019 | Team Udayavani |

ಬೆಂಗಳೂರು: ಇದು ರಾಜ್ಯದ ಶಕ್ತಿ ಕೇಂದ್ರ. ಎಲ್ಲ ಯೋಜನೆಗಳು, ನೀತಿ, ನಿರೂಪಣೆಗಳು, ಸಮಸ್ಯೆಗಳಿಗೆ ಪರಿಹಾರಗಳು ಸಿದ್ಧವಾಗುವುದು ಇಲ್ಲಿಯೇ. ಆದರೆ, ಶಕ್ತಿ ಕೇಂದ್ರ ತಲುಪಲು ಪ್ರತಿ ಕ್ಷಣ ಉಂಟಾಗುತ್ತಿರುವ ಭಾರೀ ದಟ್ಟಣೆಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ.

Advertisement

ಅದು- ನಗರದಿಂದ ಹೊರ ರಾಜ್ಯ ಹಾಗೂ ನೆರೆ ಜಿಲ್ಲೆಗಳನ್ನು ಸಂಪರ್ಕಿಸುವ ಬಸವೇಶ್ವರ ವೃತ್ತ (ಚಾಲುಕ್ಯ ಸರ್ಕಲ್‌). ಈ ವೃತ್ತದ ಸುತ್ತಳತೆಯ ಕೇವಲ ಅರ್ಧ ಕಿ.ಮೀ ದೂರದಲ್ಲಿ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ರಾಜಭವನ, ಬಹುಮಹಡಿ ಕಟ್ಟಡ, ನಗರ ಪೊಲೀಸ್‌ ಆಯುಕ್ತ ಕಚೇರಿ, ಮುಖ್ಯಮಂತ್ರಿಗಳ ಅಧಿಕೃತ ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳು, ವಿಐಪಿಗಳ ಮನೆಗಳು, ಅಪಾರ್ಟ್‌ಮೆಂಟ್‌ಗಳು ಇವೆ.

ಹೆಬ್ಟಾಳ ಕಡೆ ಅಥವಾ ಬೆಂಗಳೂರಿನ ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳಿಂದ ಉತ್ತರ ಭಾಗಕ್ಕೆ, ಹೆಬ್ಟಾಳ ಕಡೆಗೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಅಥವಾ ಬೆಂಗಳೂರಿನ ನಾಲ್ಕೂ ದಿಕ್ಕುಗಳನ್ನು ಸಂಪರ್ಕಿಸುವ ವೃತ್ತ ಬಸವೇಶ್ವರ ವೃತ್ತ!

ಹೀಗೆ.. ಎಲ್ಲದಕ್ಕೂ ಈ ವೃತ್ತದ ಮೂಲಕವೇ ಹಾದು ಹೋಗಬೇಕು. ಆದರೂ ಸುಮಾರು ಮೂರು ದಶಕಗಳಿಂದ ಈ ವೃತ್ತದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ.
ಈ ನಡುವೆಯೂ ಕೆಲ ವರ್ಷಗಳ ಹಿಂದೆ ಚಾಲುಕ್ಯ ವೃತ್ತದಿಂದ ಹೆಬ್ಟಾಳ ಸಿಗ್ನಲ್‌ವರೆಗೂ “ಸ್ಟೀಲ್‌ ಬ್ರಿಡ್ಜ್’ ಅಥವಾ “ಎಲಿವೇಟೆಡ್‌ ಕಾರಿಡಾರ್‌’ ನಿರ್ಮಾಣಕ್ಕೆ ಸರ್ಕಾರ ಸಿದ್ಧತೆ ನಡೆಸಿತ್ತು.

ಆದರೆ, ಪರಿಸರವಾದಿಗಳ ನಿರಂತರ ಹೋರಾಟದಿಂದ ಅದೂ ನೆನೆಗುದಿಗೆ ಬಿದ್ದಿದೆ. ಅನಂತರ ಇದುವರೆಗೂ ಯಾವುದೇ ಪರ್ಯಾಯ ಮಾರ್ಗ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿಲ್ಲ. ನಗರದ ಆರು ಪ್ರಮುಖ ಸ್ಥಳಗಳ ರಸ್ತೆಗಳು ಸೇರುವ ಈ ವೃತ್ತ 1949ರಲ್ಲಿ ಅಸ್ತಿತ್ವಕ್ಕೆ ಬಂತು. ಬಳಿಕ ಇಲ್ಲಿ ಚಾಲುಕ್ಯ ಹೋಟೆಲ್‌ ಸ್ಥಾಪನೆಯಾದರಿಂದ “ಚಾಲುಕ್ಯ ವೃತ್ತ’ ಎಂದು ಕರೆಯಲಾಗುತ್ತಿತ್ತು.

Advertisement

ಅನಂತರ ಸರ್ಕಾರ ಶಾಸಕ ಭವನದ ಆವರಣದ ಪಕ್ಕದಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಿಸಿ, ಅಧಿಕೃತವಾಗಿ “ಬಸವೇಶ್ವರ ವೃತ್ತ’ ಎಂದು ನಾಮಕರಣ ಮಾಡಿತು. ನಾಲ್ಕು ದಶಕಗಳ ಹಿಂದೆ ಈ ವೃತ್ತಕ್ಕೆ ಕೂಡುವ ಹಳೇ ಮದ್ರಾಸ್‌, ವಿಧಾನಸೌಧ, ಕೆ.ಆರ್‌ ಮಾರುಕಟ್ಟೆ, ತುಮಕೂರು ರಸ್ತೆ,

ರಾಜಭವನ ಮೆಜೆಸ್ಟಿಕ್‌ ಮತ್ತು ಶೇಷಾದ್ರಿಪುರ ರಸ್ತೆಗಳಲ್ಲಿ ಎರಡು ಕಡೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿನಿತ್ಯ 20-30 ಸಾವಿರ ವಾಹನಗಳು ಸಂಚರಿಸುತ್ತಿದ್ದವು. ನಂತರದ ಪ್ರತಿ ವರ್ಷ ಶೇ.17ರಿಂದ 19ರಷ್ಟು ಹೆಚ್ಚುತ್ತಿದ್ದ ಸಂಚಾರ ದಟ್ಟಣೆ ಪರಿಹಾರಕ್ಕೆ ಕೆಲ ಮಾರ್ಗಗಳಲ್ಲಿ ಏಕಮುಖ ಸಂಚಾರ ಕಲ್ಪಿಸಲಾಗಿದೆ.

ಹೀಗಾಗಿ ಪ್ರಸ್ತುತ ಈ ರಸ್ತೆಗಳಲ್ಲಿ ಪಿಕ್‌ ಹವರ್‌ನಲ್ಲಿ ಪ್ರತಿ ಗಂಟೆಗೆ ಕನಿಷ್ಠ 10-13 ಸಾವಿರ ವಾಹನಗಳು ಓಡಾಡುತ್ತಿದ್ದು, ದಿನಕ್ಕೆ ಮೂರುವರೆ ಲಕ್ಷ ವಾಹನಗಳು ಈ ವೃತ್ತದಿಂದಲೇ ಹಾದು ಹೋಗುತ್ತವೆ. ಹೀಗಾಗಿ ಈ ವೃತ್ತದಿಂದ ಸುಮಾರು ಐದಾರು ಕಿ.ಮೀಟರ್‌ ದೂರ ವಾಹನಗಳು ಕೇವಲ 15-20 ಕಿ.ಮೀಟರ್‌ ವೇಗದಲ್ಲಿ ಚಲಿಸಬೇಕಿದೆ.

ಇದಕ್ಕೆ ಮೂಲ ಕಾರಣ ರಸ್ತೆ ಅಗಲ ಕಡಿಮೆ ಇರುವುದು. ಈ ವೃತ್ತದ್ದ ಸುತ್ತ-ಮುತ್ತಲಿರುವ ರಸ್ತೆಗಳ ಅಗಲ ಭಾರತೀಯ ರೋಡ್‌ ಕಾಂಗ್ರೆಸ್‌(ಐಆರ್‌ಎಸ್‌)ನ ನಿಯಮದಂತೆ ಇದ್ದರೂ ಪ್ರಸ್ತುತ ವಾಹನಗಳ ಓಡಾಡದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಬಹುದು.ಆದರೆ, ಪ್ರಸ್ತುತ ರಸ್ತೆ ಅಗಲೀಕರಣ ಕೂಡ ಸಾಧ್ಯವಿಲ್ಲ ಎನ್ನುತ್ತಾರೆ ಬಿಬಿಎಂಪಿಯ ಸಂಚಾರ ವಿಭಾಗದ ಅಧಿಕಾರಿಗಳು.

ಒಂದು ವೇಳೆ ಚಾಲುಕ್ಯ ವೃತ್ತದಿಂದ ನೇರವಾಗಿ ಹೆಬ್ಟಾಳ ಅಥವಾ ಏರ್‌ಪೋರ್ಟ್‌ಗೆ ನೇರವಾದ ರಸ್ತೆ ಅಥವಾ ಮೇಲು ಸೇತುವೆ ಅಥವಾ ಮೆಟ್ರೋ ನಿರ್ಮಾಣ ಮಾಡಿದರೆ ಶೇ.40ರಿಂದ 45ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಬಹುದು. ಇನ್ನುಳಿದ ಶೇ.65ರಷ್ಟು ವಾಹನಗಳು ಇತರೆ ಮಾರ್ಗಗಳ ಕಡೆ ಚಲಿಸುವುದರಿಂದ ಬಹುತೇಕ ನಿಯಂತ್ರಣ ಸಾಧ್ಯವಿದೆ ಎಂದು ಸಂಚಾರ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವೈಜ್ಞಾನಿಕ ವೃತ್ತ, ರಸ್ತೆಗಳು: ಅವೈಜ್ಞಾನಿಕವಾಗಿ ನಿರ್ಮಿಸಿರುವ ವೃತ್ತ ಮತ್ತು ರಸ್ತೆಗಳಿಂದಲೇ ಬಸವೇಶ್ವರ ವೃತ್ತದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲು ಕಾರಣ. ಇಂಡಿಯನ್‌ ರೋಡ್‌ ಕಾಂಗ್ರೆಸ್‌(ಐಆರ್‌ಎಸ್‌) ನಿಯಮದಂತೆ ಪ್ರತಿ ರಸ್ತೆ 3.5 ಲೆನ್‌(ಅಂದಾಜು 12 ಅಡಿ) ಇರಬೇಕು. ಹಾಗೆಯೇ ಒಂದು ವೃತ್ತಕ್ಕೆ ಸೇರುವ ಐದಾರು ರಸ್ತೆಗಳ ಅಳತೆ ಕೂಡ ಅಷ್ಟೇ ಇದ್ದಾಗ ಮಾತ್ರ ಒಂದೇ ವೇಗದಲ್ಲಿ ವಾಹನಗಳು ಚಲಿಸಲು ಸಾಧ್ಯ.

ಆದರೆ, ಬಸವೇಶ್ವರ ವೃತ್ತಕ್ಕೆ ಸೇರುವ ಎಲ್ಲ ರಸ್ತೆಗಳ ಅಳತೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಜತೆಗೆ ಕೆಲವು ಏಕಮುಖ, ಮತ್ತೆ ಕೆಲವು ದ್ವಿಪಥ ರಸ್ತೆ¤ಗಳನ್ನೊಳಗೊಂಡಿವೆ. ಅಲ್ಲದೆ, ಕೂಗಳತೆ ದೂರಗಳಲ್ಲೇ ಸಿಗ್ನಲ್‌ಗ‌ಳು ಅಳವಡಿಸಿರುವುದರಿಂದ ಸಾಮಾನ್ಯವಾಗಿ ವಾಹನ ದಟ್ಟಣೆ ಅಧಿಕವಾಗುತ್ತದೆ ಎನ್ನುತ್ತಾರೆ ಸಂಚಾರ ತಜ್ಞ ಪ್ರೊ ಎಂ.ಎನ್‌.ಶ್ರೀಹರಿ.

ಪರ್ಯಾಯ ಕ್ರಮಗಳೇನು?
-ಎಲಿವೇಡೆಟ್‌ ಕಾರಿಡಾರ್‌ ಅಥವಾ ಮೇಲು ಸೇತುವೆ.
-ಮೆಟ್ರೋ ರೈಲು ಯೋಜನೆ ವಿಸ್ತರಣೆ.
-ಅಂಡರ್‌ ಪಾಸ್‌ ನಿರ್ಮಾಣ.
-ಸೂಕ್ತ ಮಾರ್ಗೋಪಾಯ ಹಾಗೂ ತಾಂತ್ರಿಕ ಕ್ರಮಗಳ ಬಗ್ಗೆ ಸಂಚಾರ ತಜ್ಞರ ಜತೆ ಚರ್ಚೆ.

ಸಂಪರ್ಕಿಸುವ ಪ್ರಮುಖ ರಸ್ತೆಗಳು: ಬಸವೇಶ್ವರ ವೃತ್ತದಿಂದ ಉತ್ತರ ಭಾಗಕ್ಕೆ ಬಳ್ಳಾರಿ, ತುಮಕೂರು ರಸ್ತೆಗೆ, ಹೈದ್ರಾಬಾದ್‌, ಯಲಹಂಕ, ದೊಡ್ಡಬಳ್ಳಾಪುರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆ. ಹಾಗೆಯೇ ದಕ್ಷಿಣ ಭಾಗಕ್ಕೆ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ರೇಸ್‌ಕೋರ್ಸ್‌ ರಸ್ತೆ, ಕೆ.ಆರ್‌. ಮಾರುಕಟ್ಟೆ, ಎಂ.ಜಿ.ರಸ್ತೆ, ಮೆಜೆಸ್ಟಿಕ್‌ ಕಡೆ ಹೋಗಬಹುದು.

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next