Advertisement
ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡುವ ಸಾಹಿತಿಗಳು ಹೊಟ್ಟೆ ತುಂಬಿದವರು. ಅವರಿಗೆ ಹಣ ಹೆಚ್ಚಾಗಿದ್ದು, ಕೀರ್ತಿ ಪಡೆಯುವುದಕ್ಕೆ ಸಾಹಿತ್ಯ ಲೋಕಕ್ಕೆ ಬರುತ್ತಿದ್ದಾರೆ. ಅವರಿಂದ ಕನ್ನಡದ ಪಾವಿತ್ರ ಹಾಳಾಗುತ್ತದೆ ಎಂಬ ಆರೋಪಗಳಿವೆ. ಆದರೆ ಅವು ಏಕಪಕ್ಷೀಯವಾಗಿವೆ ಎಂದರು. ಕಾರ್ಪೋರೇಟ್ ಜಗತ್ತಿನಲ್ಲಿರುವವರೇನು ಹುಟ್ಟಾ ಶ್ರೀಮಂತರಲ್ಲ. ಅವರು ಕೂಡ ರೈತರು, ಬಡವರ ಮತ್ತು ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು.
Related Articles
Advertisement
ಸಾಕಷ್ಟು ಜನರು ಸಂಭ್ರಮದ ಬೆಂಬಲಕ್ಕೆ ನಿಂತಿರುವುದೇ ಇದರ ಯಶಸ್ಸಿಗೆ ಕಾರಣ ಎಂದರು. ಆಶಯ ಭಾಷಣ ಮಾಡಿದ ಕವಿ ಡಾ|ಎಚ್.ಎಸ್. ವೆಂಕಟೇಶಮೂರ್ತಿ, ಸಾಹಿತ್ಯ ಸಂಭ್ರಮದ ವೇದಿಕೆ ಯಾವುದೇ ಜಾತಿ, ಧರ್ಮ, ಪ್ರಾದೇಶಿಕತೆ, ಸಿದ್ಧಾಂತ ಎಲ್ಲವನ್ನೂ ಮೀರಿ ಬೆಳೆದು ನಿಂತಿದೆ. ಸಿದ್ಧಾಂತಗಳ ಪ್ರತಿಪಾದಕರು ಮುಖಾಮುಖೀಯಾದಾಗ ಮಾತ್ರ ಸಾಹಿತ್ಯ ಮಂಥನ ಸಾಧ್ಯ ಎಂದರು.
ಕವನ ವಾಚನ: ಸಾಹಿತ್ಯ ಸಂಭ್ರಮ ಉದ್ಘಾಟಿಸಿದ ನಾಡೋಜ ಕವಿ ಡಾ|ಕೆ.ಎಸ್.ನಿಸಾರ್ ಅಹಮದ್ ಸಾಹಿತ್ಯಾಸಕ್ತರ ಒತ್ತಾಸೆಗೆ ಮಣಿದು ತಾವು ಬರೆದ, ರಾಮನ್ ಸತ್ತ ಸುದ್ದಿ ಮತ್ತು ನಿಮ್ಮೊಡನಿದ್ದು ನಿಮ್ಮಂತಾಗದೇ ಎನ್ನುವ ಕವನ ವಾಚನ ಮಾಡಿ ಗಮನ ಸೆಳೆದರು.
ಅಷ್ಟೇಯಲ್ಲ, ಧಾರವಾಡದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ವಿಶ್ವದ ಅನೇಕ ಕಡೆಗಳಲ್ಲಿ ಇಂದು ಸಾಹಿತ್ಯ ಕುರಿತು ಸಮ್ಮೇಳನಗಳು ನಡೆಯುತ್ತಿವೆ. ಅದೇ ಮಾದರಿಯಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ನಡೆಯುತ್ತಿರುವುದು ಅಭಿನಂದನಾರ್ಹ ಕೆಲಸವಾಗಿದೆ ಎಂದರು.
ನಾಡೋಜ ಚೆನ್ನವೀರ ಕಣವಿ, ಲೇಖಕಿ ಡಾ| ವೀಣಾ ಶಾಂತೇಶ್ವರ, ಡಾ|ಲೋಹಿತ್ ನಾಯ್ಕರ್, ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ ಉಪಸ್ಥಿತರಿದ್ದರು. ಪಂ|ಮಲ್ಲಿಕಾರ್ಜುನ ಮನ್ಸೂರ್ ಸಂಗೀತಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಹಾ.ವೆಂ. ಕಾಖಂಡಿಕಿ ನಿರೂಪಿಸಿದರು.
ಸಂತಾಪ: ಸಾಹಿತ್ಯ ಸಂಭ್ರಮ ಉದ್ಘಾಟನೆಗೂ ಮುನ್ನ, ಕಳೆದ ಒಂದು ವರ್ಷದಲ್ಲಿ ನಿಧನರಾದ ನಾಡಿನ ಹಿರಿಯ ಸಾಹಿತಿಗಳು, ನಾಟಕಕಾರರು ಮತ್ತು ಸಾಂಸ್ಕೃತಿಕ ಲೋಕಕ್ಕೆ ಶ್ರಮಿಸಿದ ಗಣ್ಯರಿಗೆ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪುಸ್ತಕ ಮಳಿಗೆ ಉದ್ಘಾಟನೆ: ಸಾಹಿತ್ಯ ಸಂಭ್ರಮದ ಅಂಗವಾಗಿ ಸುವರ್ಣ ಮಹೋತ್ಸವ ಭವನದ ಎದುರು ಸ್ಥಾಪಿಸಿರುವ ಪುಸ್ತಕ ಮಳಿಗೆಗಳನ್ನು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಉದ್ಘಾಟಿಸಿದರು. ಕವಿ ಎಚ್.ಎಸ್. ವೆಂಕಟೇಶಮೂರ್ತಿ ಪತ್ರಗಳ ಪ್ರದರ್ಶನ ಉದ್ಘಾಟಿಸಿದರು.