Advertisement
ಮುಂಬೈನಂಥ ಮಹಾನಗರಿಯಲ್ಲಿ ಪತ್ತೆಯಿಲ್ಲದವರನ್ನು ಹುಡುಕುವುದು ಹೌದಾದ ಮಾತೆ? ಆದರೆ ಸುಹಾಸಿನಿಯ ವಿಶ್ವಾಸವು ಅವನ ಖಾಲಿಖಾಲಿಯಾಗಿದ್ದ ದಿನಚರಿಗೆ ಚೈತನ್ಯ ತುಂಬಿತು. ಮುಂಬಯಿಯ ಉಪನಗರವಾದ ಭಾಂಡುಪ್‌ನಲ್ಲಿದ್ದ ಕಂಪೆನಿಯು ಮುಚ್ಚಿದ್ದರಿಂದ ಕೆಲಸವನ್ನು ಕಳೆದುಕೊಂಡು ಕೇಶವ ನಿರ್ದಿಷ್ಟವಲ್ಲದ ಏನೇನೂ ಬಿಡಿಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಸಮಯ ಸಿಕ್ಕಾಗ ಕಥೆಗಳನ್ನು ಬರೆಯುವ ತನ್ನ ಹಳೆಯ ಹವ್ಯಾಸವನ್ನು ಮುಂದುವರಿಸಿದ್ದ. ಸುಹಾಸಿನಿ ಫೋನು ಮಾಡಿದ ನಂತರ ಖಾವು ಗಲ್ಲಿಗಳನ್ನೂ, ರೈಲು ಹಳಿಗಳ ಪಕ್ಕದ ಜೋಪಡಿಗಳನ್ನೂ, ರಾತ್ರಿ ಸೂರಿಲ್ಲದವರ ಹಾಸಿಗೆಯಾಗಿ ಬಿಡಿಸಿಕೊಳ್ಳುವ ಫುಟ್‌ಪಾತುಗಳನ್ನೂ ಅಡ್ಡಾಡಿದ.
Related Articles
.
.
ನಸುಕೊಡೆಯುವ ಮೊದಲೇ ವಾಕಿಂಗ್ ಮತ್ತು ಮಾರ್ನಿಂಗ್ ಟೀ ನೆಪದಲ್ಲಿ ಇಸ್ಮಾಯಿಲ್‌ನ ಚಹಾ ದೂಖಾನಿಗೆ ಭೇಟಿ ನೀಡುವುದು ಕೇಶವನಿಗೆ ಇತ್ತೀಚೆಗೆ ಮಾಮೂಲಾಗಿದೆ. ಮಸಾಲಾ ಚಹಾ ಕುಡಿಯುವಾಗ ಅಲ್ಲಿ ಕೆಲಸಕ್ಕಿದ್ದ ಮುನೀರನಂಥ ಹುಡುಗರ ಕತೆಗಳೂ ಗುಡ್ ಮಾರ್ನಿಂಗ್ ಹೇಳುತ್ತಿದ್ದವು. ಎರಡು ಬಿಲ್ಡಿಂಗುಗಳ ನಡುವಿನ ಕಿರಿದಾದ ಜಾಗದಲ್ಲಿ ಇಸ್ಮಾಯಿಲ್ ಗರಂಗರಂ ವಡಾ ಪಾವ್ ಮತ್ತು ಮಿಸಳ್ ಪಾವ್ ತಯಾರಿ ನಡೆಸುತ್ತಾನೆ. ಹುಡುಗರು ಸಬ್ಜಿ ಕತ್ತರಿಸುವುದು, ಬರ್ತನ್ ತೊಳೆಯುವುದು ಮುಂತಾದ ಕೆಲಸದಲ್ಲಿ ನೆರವಾಗುತ್ತಾರೆ. ಈ ಇಸ್ಮಾಯಿಲನದೂ ಒಂದು ಕತೆಯೇ! ವಿದರ್ಭದ ಕಡೆಯವನಾದ ಅವನು ಮುಂಬೈಗೆ ಬಾರದಿದ್ದರೆ ಕತೆಯಾಗುತ್ತಿರಲಿಲ್ಲವೋ ಏನೋ. ನಾಲ್ಕು ವರ್ಷದವನಿ¨ªಾಗ ಅಂಬೇಡ್ಕರರ ಮಹಾಪರಿನಿರ್ವಾಣ ಮೇಳಕ್ಕೆ ಹೊರಟಿದ್ದ ಅಪ್ಪ ಅಮ್ಮನೊಂದಿಗೆ ಮುಂಬೈಗೆ ಬಂದಿದ್ದ. ಶಿವಾಜಿ ಪಾರ್ಕಿನಲ್ಲಿ ಸೇರಿದ್ದ ಜನಸಾಗರದ ನಡುವೆ ಕಾಣೆಯಾಗಿಬಿಟ್ಟ. ದಾದರ್ ಸ್ಟೇಶನ್ನಿನ ಫ್ಲಾಟ್‌ಪಾರ್ಮಿನಲ್ಲಿ ಅಳುತ್ತ ನಿ¨ªೆ ಹೋಗಿದ್ದ ಅವನನ್ನು ಯಾವನೋ ಎತ್ತಿಕೊಂಡು ಹೋಗಿ ಭಾವುಕಾ ಧಕ್ಕಾದ ಅಡ್ಡೆಯಲ್ಲಿ ಆಶ್ರಯ ನೀಡಿದ್ದ. ಆ ಆಶ್ರಯದಾತನು ಅವನನ್ನು ವಾಪಸ್ ಕಳಿಸುವ ಪ್ರಯತ್ನ ಮಾಡಲಿಲ್ಲ. “ಗರೀಬಿಕೇ ಕಾರಣ್ ತೇರೆ ಪಿತಾಜಿ ತುಮೆØ ಮುಂಬೈಮೆ ಚೋಡೆRà ಗಯೇ ಹೈ’ ಎಂದು ಹಳೆಯದೆಲ್ಲ ಮರೆತು ಹೋಗುವಂತೆ ಕೈಗೆ ಬರೆ ಹಾಕಿದ್ದ. ಇಸ್ಮಾಯಿಲ್ ಎಂಬ ಮರುನಾಮಕರಣವನ್ನೂ ಮಾಡಿ ತನ್ನ ದಂಧೆಗೆ ಮದತ್ ಮಾಡಲು ತರಬೇತು ನೀಡಿದ್ದ. ಇಸ್ಮಾಯಿಲನಿಗೆ ಹನ್ನೆರಡು ವರ್ಷ ಆದಾಗ ಒಂದು ನಡುರಾತ್ರಿ ಆ ಆಶ್ರಯದಾತನನ್ನು ವಿರೋಧಿ ಗ್ಯಾಂಗ್‌ನವರು ಕೊಚ್ಚಿ ಹಾಕಿದರು. ಇಸ್ಮಾಯಿಲ್ ಅಲ್ಲಿಂದ ಓಡಿ ಹಾಜಿಅಲಿ, ಖಾವು ಗಲ್ಲಿ, ಧಾರಾವಿ ಸ್ಲಂ ಏರಿಯಾಗಳಲ್ಲಿ ತಿರುಗುತ್ತ ಮತ್ತೂಮ್ಮೆ ತಬ್ಬಲಿಯಾಗಿದ್ದ. ಆದರೆ, ಅಷ್ಟರಲ್ಲಿ ಮುಂಬೈ ಅವನಿಗೆ ಬದುಕುವುದನ್ನು ಕಲಿಸಿತ್ತು. ಶುರುವಿನಲ್ಲಿ ಏನೇನೋ ಮಾಡಿಕೊಂಡಿದ್ದವನು ಈಗ ಅವನ ಪ್ರೀತಿಯ ವಡಾಪಾವ್ ಮಾಡಿ ಮಾರುವುದಕ್ಕೆ ಸೆಟಲ್ ಆಗಿ¨ªಾನೆ. ಬಡತನದಿಂದ ಮುಂಬೈಗೆ ಬಂದ ಮುನೀರನಂಥ ಹುಡುಗರಿಗೂ ಆಸರೆಯಾಗಿ¨ªಾನೆ. ಸುಹಾಸಿನಿಗೆ ಇಸ್ಮಾಯಿಲನ ಈ ಕತೆ ಹೇಳಿದಾಗ ತುಂಬಾ ನೊಂದುಕೊಂಡಿದ್ದಳು. “ಅವನಿಗೆ ಅಪ್ಪ-ಅಮ್ಮ ಮತ್ತೆ ಸಿಗ್ತಾರಾ?’ ಎಂದು ಕೇಳುವಳು.
Advertisement
“ಸಿಕ್ಕೇ ಸಿಗ್ತಾರೆ’ ಎಂಬುದು ಮಾತ್ರ ಇಸ್ಮಾಯಿಲನ ವಿಶ್ವಾಸವಾಗಿತ್ತು. ಕೊಲೆಯಾದ ಆಶ್ರಯದಾತನನ್ನು ರಕ್ತದ ಮಡುವಿನಲ್ಲಿ ಕಂಡ ಆಘಾತದ ಕ್ಷಣದಲ್ಲಿ ಬಾಲಕ ಇಸ್ಮಾಯಿಲನಿಗೆ ತನ್ನ ಹಳೆಯ ಹೆಸರು ತುಕಾರಾಮ್ ತೋತ್ರೆ ಎಂಬುದು ನೆನಪಾಗಿತ್ತು. ಆದರೆ ಆಯಿಬಾಬಾ ಹೆಸರಾಗಲಿ, ಇಂಥದ್ದೇ ಊರು ಎನ್ನುವುದು ಮಾತ್ರ ನೆನಪಾಗಿರಲಿಲ್ಲ. ಹೀಗಾಗಿ ಮುಂಬಯಿಯÇÉೇ ಬದುಕುಳಿಯುವುದು ಅನಿವಾರ್ಯವಾಗಿತ್ತು. ಪ್ರತಿವರ್ಷವೂ ಮಹಾಪರಿನಿರ್ವಾಣ ದಿನದಂದು ಶಿವಾಜಿ ಪಾರ್ಕಿನಲ್ಲಿ ಸಾವಿರಾರು ಜನರಿಗೆ ವಡಾಪಾವ್ ಹಂಚುತ್ತಾನೆ. ಆ ದಿನ ಮರಾಠಿಯಲ್ಲಿ “ಮಿ. ತುಕಾರಾಮ್ ತೋತ್ರೆ’ ಎಂದು ಬರೆದುಕೊಂಡ ಟಿ. ಶರ್ಟ್ ಧರಿಸುತ್ತಾನೆ. ನೆರೆದ ಲಕ್ಷಾಂತರ ಜನರಲ್ಲಿ ತನ್ನ ಆಯಿಬಾಬಾ ಕೂಡ ಇರಬಹುದಾದ ಆಸೆ ಅವನಲ್ಲಿನ್ನೂ ಜೀವಂತವಾಗಿದೆ. “ಮಿಲೇಗಾ ಸಾಬ್, ಜರೂರೂ ಮಿಲೇಗಾ, ಕ್ಯೂಂ ನಹಿ ಮಿಲೇಗಾ?’ ಎನ್ನುವ ಮಾತನ್ನು ತನ್ನ ತಂದೆ-ತಾಯಿ ಬಗ್ಗೂ ಸುಹಾಸಿನಿಯ ಮಗನ ಬಗ್ಗೂ ಒಟ್ಟಾಗಿಯೇ ಹೇಳುತ್ತಾನೆ. ಇವೆಲ್ಲವನ್ನು ಸುಹಾಸಿನಿಗೆ ಕತೆ ಮಾಡಿ ಹೇಳುವಾಗ ಬರೆದರೆ ಒಳ್ಳೆಯ ಕತೆಯಾಗುತ್ತದೆ ಎಂದು ಕೇಶವನಿಗೆ ಅನಿಸಿದೆ.
ಇಸ್ಮಾಯಿಲನ ಕತೆಯನ್ನು ಕಳೆದುಹೋಗಲು ಬಿಟ್ಟುಬಿಡಬಾರದು! ಕೆಲಸದಿಂದ ಪೂರ್ತಿ ಬಿಡುಗಡೆಯಾದಾಗ ಅವನ ಅಂತರಂಗದ ಸೂಕ್ಷ್ಮ¾ಭಾವಗಳನ್ನು ಅಕ್ಷರಗಳಲ್ಲಿ ಹಿಡಿಯುವ ಪ್ರಯತ್ನ ಮಾಡಬೇಕು. “ಬಾದ್ ಮೇ ಮಿಲೆ¤à ಹೈ’ ಎಂದು ಸದ್ಯಕ್ಕೆ ಅಲ್ಲಿಂದ ವಿದಾಯ ಹೇಳಿ ಪಕ್ಕದ ಗಲ್ಲಿಗಳಲ್ಲಿ ನಡೆದು ಹೋದ..
.
ಕೇಶವನ ಅಲೆದಾಟದಲ್ಲಿ ದಿನದ ಧಾವಂತವು ತಣ್ಣಗಾಗಿತ್ತು. ಇಸ್ಮಾಯಿಲನಿಗೆ ಈಗ ಬಿಡುವಾಗಿರಬಹುದು ಎಂದು ಅತ್ತ ತಿರುಗಿದ. ಕೆಲಸದ ಮಕ್ಕಳೆಲ್ಲ ಉಂಡು ಮಲಗುವ ತಯಾರಿ ನಡೆಸಿದ್ದರು. ಹೊಸ ಸಿನೆಮಾ ಬಗ್ಗೆ, ಹೊಸ ಮೊಬೈಲ್ ಬಗ್ಗೆ ಮಾತನಾಡಿಕೊಳ್ಳಲು ಅವರಿಗೆ ಪುರಸೊತ್ತು ಸಿಕ್ಕಿತ್ತು. ಇಸ್ಮಾಯಿಲ್ ಕಾಟ್ ಮೇಲೆ ಮಲಗಿ ಯಾರಿಗೋ ಫೋನ್ ಮಾಡ್ತಿದ್ದ. ಕೇಶವನನ್ನು ಕಂಡೊಡನೆ ಮಾತು ನಿಲ್ಲಿಸಿ, “ಬೈಟೋ, ರೈಟರ್ ಸಾಬ್’ ಎಂದ. ಕೇಶವನು ಬಂದಿರುವುದನ್ನು ಕಂಡ ಮಲಗಿದ್ದ ಮುನೀರ್ ಎದ್ದು, “ನನ್ನ ಕತೆ ಕೂಡ ಬರಿ’ ಎನ್ನುವಂತೆ ಸುಮ್ಮನೇ ಮುಗುಳುನಗುತ್ತ ಮತ್ತೆ ಮಲಗಿದ. ಏಕಾಂತದಲ್ಲಿರುವ ಇಸ್ಮಾಯಿಲನನ್ನು ಮಾತಿಗೆಳೆಯುವ ಸುಸಮಯವಿದು ಅನಿಸಿ ಕೇಶವ ಅವನ ಪಕ್ಕದಲ್ಲಿ ಕೂತ. ಇಸ್ಮಾಯಿಲ್ ಸಾಬ್, “”ಅಬ್ ತಕ್ ಕಾ ಕಹಾನಿ ಆಪ್ ಸುನ್ ಲಿಯಾ… ಆಗೇ ಕಾ ಕಹಾನಿ ಆಪ್ ಖುದ್ ಲಿಖ್ ಸಕ್ತೇ ಹೈ” ಎಂದ. ಕೇಶವ ಪ್ರಶ್ನಾರ್ಥಕವಾಗಿ ಅವನತ್ತ ನೋಡಿದ. “”ಆಪ್ ತೋ ಅಕೇಲೆ ಹೈ… ಕೋಯಿ ದೋ-ಏಕ್ ಬಚ್ಚೋಂಕೋ ಗೋದ್ ಮೆ ಲೇಲೋ… ಆಪಾR ಘರಮೆ ರಖೋ, ಸ್ಕೂಲ್ ಭೇಜೋ… ಫಿರ್ ದೇಖೋ, ಯೇ ಸಬ್ ಕಹಾನಿ ಸೇ ನಿಕಲಕೇ ಹಕೀಕತ್ ಬನೇಗಾ ಸಾಬ್” ಎಂದ.
ಇಸ್ಮಾಯಿಲ್ ಇದುವರೆಗಿನ ಕಹಾನಿಯ ಸ್ವರೂಪವನ್ನು ಪಲ್ಲಟಗೊಳಿದ್ದ !
.
.
ವಿಟಿ ಸ್ಟೇಶನ್ನಿಗೆ ಬಂದಾಗ ಆ ರಾತ್ರಿಯಲ್ಲೂ ಪ್ಲ್ರಾಟ್‌ಫಾರ್ಮ್ನಲ್ಲಿ ಅಷ್ಟೊಂದು ಜನರನ್ನು ನೋಡಿ ಏನೋ ಗಡಬಡ್ ಆಗಿರುವುದು ಖಾತ್ರಿಯಾಯಿತು. ಹಾಬರರ್ ಲೈನಿನ ಮಾಂಖುರ್ಡ್ ಸ್ಟೇಶನ್ನಿನ ಬಳಿ ಕುಚ್ ಲಫಡಾ ಆಗಿದೆಯಂತೆ. ಠೀಕ್ ಆಗಲು ಸಮಯ ಬೇಕಂತೆ. ಕೇಶವನಿಗೆ ಆ ಭೀಡ್‌ನಲ್ಲಿ ನೂರಾರು ಕತೆಗಳು ನಿಟ್ಟುಸಿರು ಬಿಡುತ್ತಿರುವಂತೆ ಅನಿಸಿತು. ಯಾಕೋ ಕತೆಗಳಿಂದ ಹೈರಾಣಾದವನಂತೆ ಅಜಾದ್ ಮೈದಾನ ಕಡೆ ಹೋಗಿ ಫ್ಯಾಶನ್ ಸ್ಟ್ರೀಟಿನ ಪಕ್ಕ ನಡೆದ. ತಡರಾತ್ರಿವರೆಗೂ ಝಗಮಗಿಸುವ ಬೆಳಕಿನಲ್ಲಿ ಕನಸಿನ ಲೋಕವನ್ನೇ ಸೃಷ್ಟಿಸಿದ್ದ ಫ್ಯಾಶನ್ ಸ್ಟ್ರೀಟ್ ಕತ್ತಲಲ್ಲಿ ಕುರೂಪಿಯಾಗಿ ಮಲಗಿತ್ತು. ಈಗ ಕನಸು ಕಾಣುವುದು ಅಲ್ಲಿ ಕೆಲಸಕ್ಕಿದ್ದ ಕಿಶೋರರ ಸರದಿ. ಮುಖದವರೆಗೂ ಚಾದರ ಎಳೆದು ನಿದ್ರಿಸುತ್ತಿದ್ದ ಹುಡುಗರ ಸಾಲುಗಳ ತುದಿಗೆ ಬಂದಾಗ ತಿರುಗಿ, “”ಸುಹಾಸಿನಿ ಮಗನೇ… ಸುಪ್ರೀತ್” ಎಂದು ಕೂಗಿದ. ಅಲ್ಲಿಂದ ಓವಲ್ ಗ್ರೌಂಡಿನತ್ತ ನಡೆದ. ನಟ್ಟನಡುವೆ ಬಂದು ಕೂತ. ಹಗಲಿಗೆ ಕ್ರಿಕೆಟ್ಟು , ಫುಟ್‌ಬಾಲು ಆಡುವಾಗ ನೂರಾರು ಮಕ್ಕಳಿಂದ ತುಳಿಸಿಕೊಂಡ ಈ ಮೈದಾನವು ದಣಿವಾರಿಸಿಕೊಳ್ಳುತ್ತಿದೆ. ಮೈದಾನದ ಸುತ್ತಲಿನ ರಸ್ತೆಗಳೂ ಫುಟ್‌ಪಾತುಗಳೂ ವಿರಮಿಸಿಕೊಳ್ಳುವ ತಯಾರಿ ನಡೆಸಿವೆ. ಫುಟ್‌ಪಾತುಗಳ ಮೇಲೆ ನಿ¨ªೆಹೋದವರ ಹೃದಯ ಬಡಿತಗಳೂ, ಮನದ ಮಿಡಿತಗಳೂ ನೆಲದ ಕಂಪನದ ರೂಪದಲ್ಲಿ ಕೇಶವನಿಗೆ ಗ್ರಹೀತವಾಗುತ್ತಿದೆ. ತಲೆದಾಟಿ ಹೋಗುವ ಸಾವಿರಾರು ಬೂಟುಗಾಲುಗಳ ನಡುವೆ ಮುನೀರನ ಮುಗುಳುನಗು ಇನ್ನೂ ಜಾಗರಣೆಯಲ್ಲಿರಬಹುದು. ಇಸ್ಮಾಯಿಲ್ ಹಕೀಕತ್ತಿನ ಹಾಸಿಗೆ ಮೇಲೆ ಕಹಾನಿಗಳ ತಲೆದಿಂಬಿಟ್ಟು ಮಲಗಿರಬಹುದು. ಓ ಮುಂಬಯಿ! ನಿನ್ನ ಒಡಲು ಅದೆಷ್ಟು ದೊಡ್ಡದು! ಯಾರನ್ನೂ ನೀನು ದೂರ ತಳ್ಳುವುದಿಲ್ಲ. ಮಾನವಂತರೂ ಮವ್ವಾಲಿಗಳೂ ಕೇಡಿಗಳೂ ಒಡನಾಡಿಗಳೂ ಯಾರನ್ನೂ! ಅನಾಥರೂ ನಿನ್ನಲ್ಲಿ ತಬ್ಬಲಿಗಳಲ್ಲ. ಸೂರಿಲ್ಲದವರಿಗೆ ಫುಟ್‌ಪಾತುಗಳನ್ನೇ ಸೆರಗಂತೆ ಹಾಸಿ ಸಹಸ್ರಾರು ಜನರಿಗೆ ಆಸರೆ ನೀಡುವ ನೀನು ತಾಯಿ. ಸಕಲರನ್ನೂ ಕನಸಿನ ತೊಟ್ಟಿಲಲ್ಲಿ ತೂಗುವ ಮಹಾಮಾಯಿ. ಎದೆಭಾರ ಹೆಚ್ಚಾಗಿ ಎದ್ದು ಕೂತ. ನೋಟ್‌ಬುಕ್ ತೆಗೆದು ಕಟುವಾಸ್ತವ ಚಿತ್ರಗಳೆಲ್ಲವೂ ಆ ಕ್ಷಣದ ಭಾವದ್ರವ್ಯವಾಗಿ ಹನಿಸಿದಂತೆ, “ಸರ್ವಾಂಚಿ ಆಯಿ ಆಮಿc ಮುಂಬಯಿ’ ಎಂಬ ಸಾಲು ಗೀಚಿದ. ಉತ್ಕಟ ಭಾವದ ಅಭಿವ್ಯಕ್ತಿಯು ಕಹಾನಿ ಮತ್ತು ಹಕೀಕತ್ತುಗಳು ಭಾಷೆಯಾಗುವ ಭಾರಕ್ಕೆ ದಣಿವು ತರಿಸುತ್ತಿವೆ ಎನಿಸಿ ಕೇಶವ ಮತ್ತೆ ನೆಲಕ್ಕೆ ಒರಗಿದ. ಮೇಲೆ ಅನಂತ ಆಕಾಶ; ಚೆÇÉಾಪಿಲ್ಲಿಯಾಗಿರುವ ಚುಕ್ಕಿಗಳನ್ನು ನೆಲಕ್ಕುದುರದಂತೆ ತಬ್ಬಿ ಹಿಡಿದಿದೆ. ಆಕಾಶದಲ್ಲೂ ಫುಟ್‌ಪಾತುಗಳಿರಬಹುದು; ಅವ್ಯಕ್ತ ಸಂವೇದನೆಗಳೂ, ಅಪೂರ್ಣ ಕತೆಗಳೂ! ಕೇಶವನ ಆದ್ರì ಕಣ್ಣುಗಳಿಗೆ ತಾರೆಗಳು ಮಿಸುಕಾಡುತ್ತಿರುವಂತೆ ಕಂಡವು. ನಿ¨ªೆಯ ಭಾರಕ್ಕೆ ಇನ್ನೇನು ರೆಪ್ಪೆಗಳು ಮುಚ್ಚಬೇಕು, ಓವಲ್ ಗ್ರೌಂಡ್‌ನ ಪರಿಧಿಯಲ್ಲಿ ಕಾಣಿಸಿದ ಆಕೃತಿಯೊಂದು ಕೇಂದ್ರದತ್ತಲೇ ನಡೆದುಬರುವುದನ್ನು ಕಂಡು ಥಟ್ಟನೆ ಎದ್ದ. ಈ ನಡುರಾತ್ರಿ ಮೀರಿದ ಸಮಯದಲ್ಲಿ ದೂರದ ಹಿಂಬೆಳಕನ್ನು ಕುಲುಕಾಡಿಸುತ್ತ ಹತ್ತಿರವಾಗುತ್ತಿರುವವರು ಯಾರಿರಬಹುದು? “”ಮುನೀರನನ್ನು ದತ್ತು ತಗೊಂಡು ಹೊಸ ಕತೆ ಬರೀರಿ ಸಾರ್” ಎಂದಾಗ ಕಣ್ಣಲ್ಲಿ ಕನಸು ತುಂಬಿಕೊಂಡ ಮುನೀರನೆ? ಫುಟ್‌ಪಾತಿನಲ್ಲಿ ತಿರುಗುವಾಗ ಸುಹಾಸಿನಿಯ ಮಗನ ಹೆಸರು ಹಿಡಿದು ಕೂಗಿದ್ದನ್ನು ಕೇಳಿಸಿಕೊಂಡು ಅವನೇ ಹಿಂಬಾಲಿಸಿ ಬರುತ್ತಿರುವನೆ? ಹುಡುಕಾಟದಲ್ಲಿ ಅಂಡಲೆಯುತ್ತಿರುವ ತನ್ನನ್ನೇ ಯಾರಾದರೂ ಹುಡುಕುತ್ತಿರಬಹುದೆ… ಸುಹಾಸಿನಿಗೆ ಹೇಳಲು ಹೊಸ ಕತೆಯೊಂದು ತನ್ನೆದುರು ಬರುತ್ತಿದೆ ಎಂಬ ವಿಶ್ವಾಸದಲ್ಲಿ ಕೇಶವ ಆಕೃತಿ ಸ್ಪಷ್ಟವಾಗುವುದನ್ನೇ ಕಾದು ಕೂತ. – ರಾಜೀವ ನಾರಾಯಣ ನಾಯಕ