Advertisement

ಎಪಿಎಂಸಿ ನಷ್ಟ ಸರ್ಕಾರವೇ ಭರಿಸಲಿದೆ: ಸಚಿವ ಸೋಮಶೇಖರ್

12:00 PM Dec 23, 2020 | Mithun PG |

ಬೆಂಗಳೂರು: ಎಪಿಎಂಸಿಗಳಲ್ಲಿ ಸೆಸ್ ಸಂಗ್ರಹ ಕಡಿಮೆಯಾಗುವುದರಿಂದ ಆಗಬಹುದಾದ ನಷ್ಟವನ್ನು ಸರ್ಕಾರ ಭರಿಸಲಿದೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

Advertisement

ನಗರದ ಎಫ್ ಕೆಸಿಸಿಐ ಸಭಾಂಗಣದಲ್ಲಿ ವರ್ತಕರೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಪಿಎಂಸಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಸೆಸ್ 35ಪೈಸೆ ಸಂಗ್ರಹ ಮಾಡುವುದರಿಂದ ಸುಮಾರು 500ಕೋಟಿ ರೂ ಸರ್ಕಾರಕ್ಕೆ ನಷ್ಟವಾಗಲಿದೆ. ಈ ಕಾರಣಕ್ಕಾಗಿಯೇ ಸೆಸ್ ಹೆಚ್ಚಳ ಮಾಡಲು ನಿರ್ಧಾರಕ್ಕೆ ಮುಖ್ಯಮಂತ್ರಿಯವರು ಸೂಚನೆ ನೀಡಿರಬಹುದು. ಈ ವಿಷಯ ನನ್ನ ಗಮನಕ್ಕೂ ಬಂದಿಲ್ಲ. ಮುಂದಿನ ಕ್ಯಾಬಿನೆಟ್ ನಲ್ಲಿ ಈ ವಿಷಯ ಚರ್ಚೆ ಮಾಡಲಿದ್ದೇವೆ ಎಂದರು.

ರಾಜ್ಯದ ಎಪಿಎಂಸಿಯಲ್ಲಿರುವ ಸಿಬ್ಬಂದಿ ವೇತನ ಹಾಗೂ ನಿರ್ವಹಣೆಗೆ ವಾರ್ಷಿಕ 120 ಕೋಟಿ ರೂ.ಗಳಷ್ಟು ಬೇಕಾಗುತ್ತದೆ.  35 ಪೈಸೆ ಸೆಸ್ ಸಂಗ್ರಹದಿಂದ 60 ರಿಂದ 90ಕೋಟಿಯಷ್ಟು ಆದಾಯ ಮಾತ್ರ ಬರುತ್ತದೆ. ಇದರಿಂದ 500 ಕೋಟಿ ರೂ. ನಷ್ಟ ಸರ್ಕಾರಕ್ಕೆ  ಆಗಲಿದೆ. ಇದನ್ನು ಭರಿಸಲು ಸರ್ಕಾರ ಸಿದ್ಧವಿದೆ. ಹೀಗಾಗಿ ಎಪಿಎಂಸಿ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  ಪೊಂಗಲ್ ಸಂಭ್ರಮ: ಕೋವಿಡ್ ಮಾರ್ಗಸೂಚಿಯಂತೆ ಜಲ್ಲಿಕಟ್ಟು ಆಚರಣೆಗೆ ಅನುಮತಿ: ತಮಿಳುನಾಡು

Advertisement

Udayavani is now on Telegram. Click here to join our channel and stay updated with the latest news.

Next