ಮನವಿಗೆ ಈಗ ಸ್ಪಂದನೆ ಸಿಕ್ಕಿದ್ದು ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾರ್ಯವು ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದೆ.
Advertisement
ಚರಂಡಿ ವ್ಯವಸ್ಥೆಯಿಲ್ಲದೆ ಎಣ್ಣೆಹೊಳೆ ಪೇಟೆಯಲ್ಲಿ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿಯೇ ಶೇಖರಣೆಗೊಂಡು ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಸ್ಥಳೀಯರು ಮನವಿ ಮಾಡಿ ವ್ಯವಸ್ಥಿತವಾಗಿ ಚರಂಡಿ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದ್ದರು.ಹೆಬ್ರಿ, ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಮಳೆಗಾಲದಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ಥಗೊಳ್ಳುತ್ತಿತ್ತು. ಅಲ್ಲದೇ ರಸ್ತೆಯು ಅತ್ಯಂತ ಕಿರಿದಾಗಿ ಹಲವಾರು ಬಾರಿ ವಿದ್ಯುತ್ ಕಂಬಗಳಿಗೆ ವಾಹನಗಳು ಢಿಕ್ಕಿ ಹೊಡೆದು ಅಪಘಾತಗಳು ಸಂಭವಿಸಿದ್ದವು.
ಮುಖ್ಯಮಂತ್ರಿಗಳಿಗೂ ಮನವಿ
ಸ್ಥಳೀಯ ಇಲಾಖಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜವಿಲ್ಲದ ಬಗ್ಗೆ ಬೇಸತ್ತ ಸ್ಥಳೀಯರು 2013ರ ಮೇ 29ರಂದು ಮುಖ್ಯಮಂತ್ರಿಗಳಿಗೂ ಮನವಿ ಮಾಡಿ ಚರಂಡಿ ವ್ಯವಸ್ಥೆಗೆ ಆಗ್ರಹಿಸಿದ್ದರು. ಈ ಚರಂಡಿ ಇಲ್ಲದೇ ಜನಸಾಮಾನ್ಯರಿಗೆ ಆಗುವ ತೊಂದರೆ ಬಗ್ಗೆ ಹಲವು ಬಾರಿ ವರದಿ ಮಾಡಿತ್ತು.ಇದೀಗ ಚರಂಡಿ ನಿರ್ಮಾಣವಾಗಿದ್ದು ಈ ಮಳೆಗಾಲದಲ್ಲಿ ಸಂಚಾರದ ಸಂಕಷ್ಟಕ್ಕೆ ಮುಕ್ತಿ ದೊರೆಯಲಿದೆ.
ಕಳೆದ ಏಳೆಂಟು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗೆ ಹಾಗೂ ಸರಕಾರಕ್ಕೆ ಸ್ಥಳೀಯ ಸಮಸ್ಯೆ ಬಗ್ಗೆ ಗ್ರಾಮಸ್ಥರ ಪರವಾಗಿ ಮನವಿ ನೀಡಿದ್ದು ಈಗ ಲೋಕೋಪಯೋಗಿ ಇಲಾಖೆಗೂ ಚರಂಡಿ ನಿರ್ಮಾಣ ಮಾಡಿ ಈ ಬಾರಿ ಸಮಸ್ಯೆಗೆ ಮುಕ್ತಿ ನೀಡಿದೆ. ಆದರೂ ಸಹ ಎಣ್ಣೆಹೊಳೆ ಬಸ್‌ನಿಲ್ದಾಣದ ಎದುರು ಇನ್ನಷ್ಟು ಭಾಗಕ್ಕೆ ಚರಂಡಿ ನಿರ್ಮಿಸಿದಲ್ಲಿ ಸಮಸ್ಯೆ ಸಂಪೂರ್ಣ ಪರಿಹಾರವಾಗುತ್ತದೆ. ಈ ಬಗ್ಗೆ ಇಲಾಖೆ ಗಮನಹರಿಸಬೇಕಾಗಿದೆ.
– ಮೊಹಮ್ಮದ್ ಮೀರಾ ವೈ,
ಭಾರತ್ ನಿರ್ಮಾಣ್ ಸೇವಕ, ಎಣ್ಣೆಹೊಳೆ