Advertisement

ತಲಪಾಡಿ ಟೋಲ್‌ ಪ್ಲಾಝಾ ಫೆಬ್ರವರಿ 25ರ ತನಕ ಸ್ಥಳೀಯರಿಗೆ ವಿನಾಯಿತಿ

03:45 AM Feb 12, 2017 | Harsha Rao |

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ಟೋಲ್‌ ವಸೂಲಾತಿಗೆ ಸಂಬಂಧಿಸಿದಂತೆ ಪ್ರತಿಭಟನಕಾರರಿಗೆ ತಾತ್ಕಾಲಿಕ ಜಯ ಸಿಕ್ಕಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯರಿಗೆ ಫೆ. 25ರ ವರೆಗೆ ಟೋಲ್‌ನಿಂದ ವಿನಾಯಿತಿ ದೊರಕಿದೆ.

Advertisement

ತಲಪಾಡಿ ಟೋಲ್‌ ಫ್ಲಾಝಾದಲ್ಲಿ ಟೋಲ್‌ ಸಂಗ್ರಹ ಕಳೆದ ನಾಲ್ಕು ದಿನಗಳ ಹಿಂದೆ ಪ್ರಾರಂಭವಾಗಿದ್ದು, ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಸೇರಿದಂತೆ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬೇಡಿಕೆ ಈಡೇರಿಸುವಂತೆ ಶನಿವಾರ ತಲಪಾಡಿ ಬಂದ್‌ಗೂ ಕರೆ ಕೊಡಲಾಗಿತ್ತು. ಅಧಿಕಾರಿಗಳು ಬಂದ್‌ ನಡೆಸದಂತೆ ಮತ್ತು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಂದ್‌ ಬದಲು ಟೋಲ್‌ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಟೋಲ್‌ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಯು.ಟಿ. ಖಾದರ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಸಭೆಯ ನಿರ್ಣಯದಂತೆ ಫೆ. 25ರ ವರೆಗೆ ತಾತ್ಕಾಲಿಕವಾಗಿ ಟೋಲ್‌ನಿಂದ ವಿನಾಯಿತಿ ನೀಡಲಾಗಿದೆ. ಫೆ. 25ರ ಬಳಿಕ ಸ್ಥಳೀಯರಿಗೆ ಶಾಶ್ವತವಾಗಿ ಟೋಲ್‌ ವಿನಾಯಿತಿಯ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next