Advertisement
ತಾವೂ ಸಿಎಂ ಆಕಾಂಕ್ಷಿ ಎಂದು ಹೇಳಿರುವ ಸಚಿವ ಸತೀಶ ಜಾರಕಿಹೊಳಿ ಅವರನ್ನು ಗುರುವಾರ ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಸಿಎಂ ಆದರೂ ಸ್ವಾಗತ. ಮಂತ್ರಿಯಾದವರಿಗೆ ಸಿಎಂ ಆಗುವ ಆಸೆ ಇರುತ್ತದೆ. ಅದನ್ನು ವ್ಯಕ್ತ ಪಡಿಸುವುದರಲ್ಲಿ ತಪ್ಪಿಲ್ಲ. ಆಗುವುದನ್ನು ತಪ್ಪಿಸಲಿಕ್ಕೂ ಸಾಧ್ಯವಿಲ್ಲ ಎಂದರು.ಏನೂ ಆಗದಿದ್ದವನಿಗೆ ಶಾಸಕನಾಗ ಬೇಕು ಎಂಬ ಆಸೆ. ಶಾಸಕನಾದ ಬಳಿಕ ಸಚಿವನಾಗಬೇಕು, ಅನಂತರ ಮುಖ್ಯಮಂತ್ರಿ ಆಗಬೇಕು ಎಂಬ ಆಕಾಂಕ್ಷೆ ಇರುತ್ತದೆ. ಒಟ್ಟಾರೆ ಕಾಂಗ್ರೆಸ್ ಅಧಿಕಾರದಲ್ಲಿ ಇರಬೇಕು ಅಂತ ಬಯಸುವವರು ನಾವು ಅಷ್ಟೇ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಹಲವು ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಸಂಸದರು, ಸಚಿವರು, ಶಾಸಕರು, ಬೇರೆ ಪಕ್ಷಗಳ ನಾಯಕರು ಬಂದು ಭೇಟಿಯಾಗುತ್ತಾರೆ. ಅದೇ ರೀತಿ, ಡಿ.ಕೆ. ಸುರೇಶ್ ಕೂಡ ಭೇಟಿಯಾಗಿದ್ದಾರೆ. ರಸ್ತೆ, ಸೇತುವೆ ಸಹಿತ ವಿವಿಧ ಅಭಿವೃದ್ಧಿ ಯೋಜನೆಗಳ ಹಿನ್ನೆಲೆಯಲ್ಲಿ ನಡೆದಿರುವ ಭೇಟಿಯಿದು. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.