Advertisement

ನೀರಿನ ಮಿತ ಬಳಕೆ ಪ್ರತಿಯೊಬ್ಬರ ಕರ್ತವ್ಯ

09:35 PM Mar 23, 2019 | |

ಬೆಂಗಳೂರು: ಮತದಾನದ ಮಾಡುವುದು ಹಾಗೂ ನೀರನ್ನು ಮಿತವಾಗಿ ಬಳಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನಟಿ ರೂಪಿಕಾ ತಿಳಿಸಿದರು. ವೈಎಂಸಿಎಯ ಪರಿಸರ ವಿಭಾಗ ಮತ್ತು ಲಯನ್ಸ್‌ ಕ್ಲಬ್‌ ವತಿಯಿಂದ ಶುಕ್ರವಾರ ಪುರಭವನದ ಎದುರಿನಲ್ಲಿ ಹಮ್ಮಿಕೊಳ್ಳಲಾದ ವಿಶ್ವ ನೀರಿನ ದಿನ ಹಾಗೂ ರೈಟ್‌ ಟು ವೊಟ್‌ ಅಭಿಯಾನದಲ್ಲಿ ಮಾತನಾಡಿದರು.

Advertisement

ದೇಶಕ್ಕೆ ಸಮರ್ಥ ಆಡಳಿತ ದೊರೆಯಬೇಕೆಂದರೆ ಸಮರ್ಥ ನಾಯಕನಿಗೆ ಮತ ಚಲಾಯಿಸಬೇಕು. ಮತ ಚಲಾವಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮತ್ತು ಹಕ್ಕು. ವಿದ್ಯಾವಂತರಿರುವ ಕಡೆಗಳಲ್ಲಿಯೇ ಮತದಾನ ಕಡಿಮೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿಕೊಂಡರೆ ನಗರಗಳಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆ. ಹಳ್ಳಿಗಳಿಗಿಂತ ನಗರ ಪ್ರದೇಶಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿಲ್ಲ. ಅಂತರ್ಜಲ ಮರುಬಳಕೆಗೆ ಅಗತ್ಯವಿರುವ ಕ್ರಮಗಳನ್ನು ಜನರು ತೆಗೆದುಕೊಳ್ಳಬೇಕು. ನೀರನ್ನು ಮಿತವಾಗಿ ಬಳಸುವುದರೊಂದಿಗೆ ಅದರ ಸಂಕ್ಷರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಬೆಳೆಯುತ್ತಿರುವ ನಗರೀಕರಣದಿಂದಾಗಿ ನಗರದಲ್ಲಿರುವ ಕೆರೆಗಳನ್ನು ನಿವೇಶನಗಳನ್ನಾಗಿ ಮಾರ್ಪಡಿಸಲಾಗುತ್ತಿದೆ.

ಕೆರೆಗಳಲ್ಲಿ ನೀರು ಶೇಖರಣೆಗೊಂಡರೆ ಮಾತ್ರವೇ ಅಂತರ್ಜಲದ ಮಟ್ಟ ಅಭಿವೃದ್ಧಿಯಾಗುವುದು ಎಂದು ತಿಳಿಸಿದರು. ಅವಶ್ಯಕತೆಗೆ ಅನುಗುಣವಾಗಿ ನೀರನ್ನು ಬಳಕೆ ಮಾಡಿ. ನೀರನ್ನು ಬಳಸುವಷ್ಟೇ ಅವಶ್ಯಕವಾಗಿ ನೀರಿನ ಸಂರಕ್ಷಣೆ ಮಾಡಬೇಕು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ನೀರಿನ ಬಗ್ಗೆ ಸಣ್ಣ ವಯಸ್ಸಿನಲ್ಲಿಯೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಿ.ಸಿ.ಬೊಮ್ಮಯ್ಯ ಮಾತನಾಡಿ, ನೀರನ್ನು ಸಂರಕ್ಷಣೆ ಮಾಡುವುದರೊಂದಿಗೆ ಶುದ್ಧ ನೀರನ್ನು ಬಳಸಿ ಎಂಬ ಜಾಗೃತಿಯೂ ಜನರಲ್ಲಿ ಮೂಡಿಸಬೇಕು. ಈ ಬೇಸಿಗೆಯಲ್ಲಿ ಹಲವು ಕಾಯಿಲೆಗಳು ನೀರಿನ ಮೂಲಕವೇ ಬರುತ್ತವೆ. ಹೀಗಾಗಿ ಶುದ್ಧ ನೀರಿನ ಬಳಕೆ ಅತಿ ಅವಶ್ಯಕ ಎಂದರು.

Advertisement

ಕಾರ್ಯಕ್ರಮದಲ್ಲಿ ಯುನಿಟೆಡ್‌ ಮಿಷನ್‌ ಡಿಗ್ರಿ ಕಾಲೇಜಿನ ಪ್ರಾಂಶುಪಾಲೆ ಡಾ.ರಬ್ಬಿ ಪುಲೆರನ್‌, ವೈಎಂಸಿಎ ಸಹಾಯಕ ಮುಖ್ಯ ಕಾರ್ಯದರ್ಶಿ ಅರುಣ್‌ ಆರ್‌. ಕುಮಾರ್‌ ಕರೋಡಿ ಮತ್ತು ಲಯನ್ಸ್‌ ಕ್ಲಬ್‌ನ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next