Advertisement
ಅವರು ಮಂಗಳವಾರ ಪ್ರವಾಸೋದ್ಯಮ ದಿನಾಚರಣೆಯ ಪೂರ್ವಭಾವಿಯಾಗಿ ಬಾರಕೂರಿನ ಕತ್ತಲೆ ಬಸದಿಯಲ್ಲಿ ಜರಗಿದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪರಂಪರೆಯ ಬಗ್ಗೆ ಗೌರವ ಇರಬೇಕು. ಇತಿಹಾಸದ ಕುರಿತು ಅಭಿಮಾನವಿರಬೇಕು. ಇವೆರಡೂ ಬೇಕಾದಲ್ಲಿ ಅಧ್ಯಯನ ಸಮರ್ಪಕವಾಗಿರಬೇಕು ಎಂದರು.
ಭವ್ಯ ಭಾರತ ಪರಂಪರೆಯಲ್ಲಿ ಅನೇಕ ಪಾರಂಪರಿಕ ಕಟ್ಟಡಗಳಿವೆ. ಪ್ರತಿ ಊರು ಅಪೂರ್ವ ಇತಿಹಾಸ ಹೊಂದಿದೆ. ಅನೇಕ ಕೋಟೆ, ದೇವಸ್ಥಾನಗಳನ್ನು ಹೊಂದಿದ್ದರೂ ಊರಿನವರಿಗೆ ಮಾತ್ರ ಅದರ ಇತಿಹಾಸ ಗೊತ್ತೇ ಇರುವುದಿಲ್ಲ. ಏನು ಕೇಳಿದರೂ ಗೊತ್ತಿಲ್ಲವೆಂದು ಉತ್ತರ ನೀಡಿದರೆ ಮುಂದೆ ಒಂದು ‘ಗೊತ್ತಿಲ್ಲ’ ನಿಧನರಾದರು ಎಂದು ಹೇಳಬೇಕಾಗುತ್ತದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕರಾದ ಮೂತೇಶ್ವರಿ ಅವರು ಹೇಳಿದರು. ನೈಜ ದರ್ಶನ
ಬಾರಕೂರಿನ ಕತ್ತಲೆ ಬಸದಿಯ ನೈಜ ದರ್ಶನವಾಗಿದೆ. ಅತಿ ಶೀಘ್ರದಲ್ಲಿಯೇ ಇದಕ್ಕೆ ಕಾಯಕಲ್ಪ ಒದಗಿಸಲು ಇಲಾಖೆ ಕ್ರಮ ತೆಗೆದುಕೊಳ್ಳಲಿದೆ. ಬಾರಕೂರು ಮಾತ್ರವಲ್ಲ ಉಡುಪಿ ಜಿಲ್ಲೆಯ ಇತರ ಪಾರಂಪರಿಕ ತಾಣಗಳನ್ನು ಪ್ರವಾಸಿ ಕೇಂದ್ರ ಗಳನ್ನಾಗಿ ಮಾರ್ಪಡಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.
Related Articles
ಉಡುಪಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಅನಿತಾ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಆ್ಯಪ್ ಒಂದನ್ನು ರಚಿಸಲಾಗಿದ್ದು ಅದು ಸೆ. 27ರಂದು ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
Advertisement
ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಡಿಸೆಂಬರ್‌ನಲ್ಲಿ ಮೂರು ದಿನಗಳ ವಿಶೇಷ ಕಾರ್ಯಕ್ರಮ ಯೋಜಿಸಲಾಗಿದೆ ಎಂದರು.
ಜೆಟ್‌ಏರ್‌ವೇಸ್‌ನ ಮಾರಾಟ ವಿಭಾಗದ ಏರಿಯಾ ಸೇಲ್ಸ್ ಮ್ಯಾನೇಜರ್ ಕೆ. ಗಂಗಾಧರ ಹೆಗ್ಡೆ ಮಾತನಾಡಿ, ಪ್ರವಾಸಿತಾಣಗಳ ವೀಕ್ಷಣೆಗೆ ಜೆಟ್ ಏರ್‌ವೇಸ್ ಪ್ರಯಾಣ ಮಾಡುವವರಿಗೆ ಶೇ. 10ರಷ್ಟು ರಿಯಾಯಿತಿ ಇದೆ. ಈ ಬಗ್ಗೆ ಜೆಟ್‌ಏರ್‌ವೇಸ್ ವೆಬ್‌ಸೈಟ್‌ನಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಬಾರಕೂರು ಪಂಚಾಯತ್ ಉಪಾಧ್ಯಕ್ಷ ಶಾಂತಾರಾಮ್ ಶೆಟ್ಟಿ, ಮಣಿಪಾಲದ ಮಣಿಪಾಲ ಗ್ರಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಮ್ಯಾನೇಜ್‌ಮೆಂಟಿನ ಪ್ರಾಂಶುಪಾಲರಾದ ಡಾ| ಪರ್ವತವರ್ಧಿನಿ ಮತ್ತಿತರರು ಉಪಸ್ಥಿತರಿದ್ದರು.ಅಪ್ನಾ ಹಾಲಿಡೇಸ್‌ನ ಸಿಇಒ ನಾಗರಾಜ್ ಹೆಬ್ಟಾರ್ ಸ್ವಾಗತಿಸಿ ವಂದಿಸಿದರು.