ಉಳ್ಳಾಲ: ಪ್ರವಾದಿಯವರ ಜನ್ಮದಿನಾಚರಣೆ ಮತ್ತು ರ‍್ಯಾಲಿ ಮಾಡಿದರೆ ಸಾಲದು. ಪ್ರವಾದಿಯವರ ಜೀವನ ನಡೆಯನ್ನು ನಾವು ಜೀವನದಲ್ಲಿ ಅನುಕರಣೆ ಮಾಡಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.
ಅವರು ಉಳ್ಳಾಲ ದರ್ಗಾ ಸಮಿತಿ ಆಶ್ರಯದಲ್ಲಿ ಉಳ್ಳಾಲ ಕೋಟೆಪುರದಿಂದ ಮುಕ್ಕಚ್ಚೇರಿ ಮಾರ್ಗವಾಗಿ ಉಳ್ಳಾಲ ದರ್ಗಾದವರೆಗೆ ಮದ್ರಸ ವಿದ್ಯಾರ್ಥಿಗಳಿಂದ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿ ದರ್ಗಾ ವಠಾರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಪ್ರವಾದಿಯವರ ಹೆಸರಿನಲ್ಲಿ ಮೌಲೂದು ಓದುವುದು ಉತ್ತಮ ಕಾರ್ಯ. ಆದರೆ ಓದುವ ಮೊದಲು ಅವರು ಯಾವ ಸಂದೇಶ ನಮಗೆ ನೀಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಪ್ರವಾದಿಯವರು ಕಲಿಸಿದ ಸಿದ್ಧಾಂತಗಳನ್ನು ಅನುಕರಣೆ ಮಾಡದೇ ವಿರುದ್ಧ ಹಾದಿಯಲ್ಲಿ ಸಾಗಿ ಶಾಂತಿ ಹದಗೆಡಿಸುವ ಕೆಲಸ ಮಾಡಿದರೆ ನಾವು ಮಾಡಿದ ಕಾರ್ಯ ಯಶಸ್ವಿ ಕಾಣಲು ಸಾಧ್ಯವಿಲ್ಲ ಎಂದರು.
ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹಾ ಉಪಾಧ್ಯಕ್ಷರಾದ ಯು.ಕೆ. ಮೊಹಮ್ಮದ್ ಇಸ್ಮಾಯಿಲ್, ಬಾವಾ ಮೊಹಮ್ಮದ್, ಕೋಶಾಧಿಕಾರಿ ಯು. ಕೆ.ಇಲ್ಯಾಸ್, ಲೆಕ್ಕಪರಿಶೋಧಕ ಯು.ಟಿ. ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ನೌಶಾದ್ ಅಲಿ, ಅಝಾದ್ ಇಸ್ಮಾಯಿಲ್, ಅರಬಿಕ್ ಟ್ರಸ್ಟ್‌ನ ಉಪಾಧ್ಯಕ್ಷ ಯು.ಎಚ್. ಮೊಹಮ್ಮದ್, ಕಾರ್ಯದರ್ಶಿ ಅಮೀರ್, ಕೋಶಾಧಿಕಾರಿ ಅಬ್ಟಾಸ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಎಸ್‌ಎಂಎಸ್‌ಎಫ್ ಕನ್ವಿನರ್‌ಗಳಾದ ಅಯ್ಯೂಬ್ ಮಂಚಿಲ, ಪೊಡಿಮೋನು ಉಳ್ಳಾಲ್, ಖಾಲಿದ್ ಉಳ್ಳಾಲಬೈಲ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಕತುಲ್ಲಾ ಯು.ಕೆ., ಉಳ್ಳಾಲ ದರ್ಗಾ ಚಾರಿಟೆಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಯು.ಕೆ. ಇಬ್ರಾಹಿಂ, ಪ್ರ. ಕಾರ್ಯದರ್ಶಿ ಯು.ಕೆ. ಮೊಯ್ದಿನ್, ಉಳ್ಳಾಲ ಪುರಸಭೆಯ ಮಾಜಿ ಅಧ್ಯಕ್ಷ ಬಾಜಿಲ್ ಡಿ’ಸೋಜಾ ಉಪಸ್ಥಿತರಿದ್ದರು. ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅವರ ನೇತೃತ್ವದಲ್ಲಿ ಮಿಲಾದುನ್ನಬಿ ರ‍್ಯಾಲಿ ನಡೆಯಿತು.