Advertisement
ಆ್ಯಂಕರ್ ಇನ್ವೆಸ್ಟರ್‌ಗಳಿಗೆ ಲಭ್ಯಸಾರ್ವಜನಿಕರಿಗೆ ಮೇ 4ರಿಂದ 9ರವರೆಗೆ ಎಲ್‌ಐಸಿ ಷೇರು ಖರೀದಿಗೆ ಅವಕಾಶವಿದೆ. ಆದರೆ, ಆ್ಯಂಕರ್ ಇನ್ವೆಸ್ಟರ್(ಸಾರ್ವಜನಿಕರಿಗೆ ದೊರೆಯುವ ಮುನ್ನವೇ ಹೂಡಿಕೆ ಮಾಡುವಂಥ ಸಾಂಸ್ಥಿಕ ಹೂಡಿಕೆದಾರರು)ಗಳಿಗೆ ಸೋಮವಾರದಿಂದಲೇ ಷೇರುಗಳು ಖರೀದಿಗೆ ಲಭ್ಯವಾಗಿವೆ. ಇಂಥ ಹೂಡಿಕೆದಾರರಿಂದಲೇ 5,630 ಕೋಟಿ ರೂ.ಗಳನ್ನು ಸಂಗ್ರಹಿಸುವ ಉದ್ದೇಶ ಸರ್ಕಾರದ್ದು. ಇವರಿಗೆಂದೇ ಸಂಸ್ಥೆ 59.29 ದಶಲಕ್ಷ ಷೇರುಗಳನ್ನು ಕಾಯ್ದಿರಿಸಿದೆ.
ಎಸ್‌ಬಿಐ, ಆದಿತ್ಯ ಬಿರ್ಲಾ, ಐಸಿಐಸಿಐ ಪ್ರುಡೆನ್ಶಿಯಲ್, ಎಚ್‌ಡಿಎಫ್ ಸಿ ಮತ್ತು ಕೋಟಕ್ ಮ್ಯೂಚುವಲ್ ಫಂಡ್ ಕಂಪನಿಗಳು 150 ರೂ.ಗಳಿಂದ 1,000 ಕೋಟಿ ರೂ.ಗಳವರೆಗೆ ಷೇರು ಖರೀದಿಗೆ ಸಿದ್ಧತೆ ನಡೆಸಿವೆ. ಇಂಥ ಕಂಪನಿಗಳಿಂದ ಕಳೆದ ಹಣಕಾಸು ವರ್ಷದಲ್ಲಿ ಎಲ್‌ಐಸಿಗೆ 70 ಲಕ್ಷ ಅರ್ಜಿಗಳು ಬಂದಿವೆ. ಪಾಲಿಸಿದಾರರಿಗೆ
ದೇಶದಲ್ಲೇ ಮೊದಲ ಬಾರಿಗೆ ಕಂಪನಿಯೊಂದು ತನ್ನ ಶೇ.10ರಷ್ಟು ಐಪಿಒ ಷೇರುಗಳನ್ನು ಅರ್ಹ ಪಾಲಿಸಿದಾರರಿಗಾಗಿ ಮೀಸಲಿಟ್ಟಿದೆ.
Related Articles
ಸೋಮವಾರವೇ ಗ್ರೇ ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರುಗಳು ತಲಾ 75 ರೂ.ಗಳಿಗೆ ಸಿಗಲಾರಂಭಿಸಿವೆ. ಗ್ರೇ ಮಾರ್ಕೆಟ್ ಎಂದರೆ, ಐಪಿಒ ಷೋಷಣೆ ಮಾಡಿರುವ ಕಂಪನಿಗಳ ಷೇರುಗಳನ್ನು ಮಾರಾಟ ಮಾಡುವ ಅನಧಿಕೃತ ಪ್ಲಾಟ್‌ಫಾರಂ. ಇದು ಕಾನೂನಾತ್ಮಕ ಮಾರಾಟವಾಗದ ಕಾರಣ, ಹೂಡಿಕೆದಾರರು ತಮ್ಮದೇ ರಿಸ್ಕ್ ನಲ್ಲಿ ಇಲ್ಲಿ ವಹಿವಾಟು ನಡೆಸಬೇಕಾಗುತ್ತದೆ.
Advertisement
ಸಾಂಸ್ಥಿಕ ಹೂಡಿಕೆದಾರರಿಗೆ ಸಿಗುವ ಷೇರುಗಳು- ಶೇ.50ಚಿಲ್ಲರೆ ಹೂಡಿಕೆದಾರರಿಗೆ ಸಿಗುವುದು – ಶೇ.35
ಅರ್ಹ ಪಾಲಿಸಿದಾರರಿಗೆ ಮೀಸಲಿಟ್ಟಿದ್ದು – ಶೇ.10
ಸಾಂಸ್ಥಿಕೇತರ ಖರೀದಿದಾರರಿಗೆ-ಉಳಿದ ಷೇರುಗಳು ದರವೆಷ್ಟು?
ಎಲ್‌ಐಸಿ ಷೇರು ದರ – 902-949 ರೂ.
ಪಾಲಿಸಿದಾರರಿಗೆ ರಿಯಾಯ್ತಿ(ಪ್ರತಿ ಷೇರಿಗೆ) – 60 ರೂ.
ಉದ್ಯೋಗಿಗಳು, ಚಿಲ್ಲರೆ ಹೂಡಿಕೆದಾರರಿಗೆ ರಿಯಾಯ್ತಿ- 45 ರೂ.
ಗ್ರೇ ಮಾರುಕಟ್ಟೆ(ಅನಧಿಕೃತ ಮಾರ್ಕೆಟ್)ಯಲ್ಲಿ ಬಿಕರಿಯಾಗುತ್ತಿರುವುದು – 75 ರೂ.