Advertisement

ಪ್ರತಿ ಎಲ್‌ಐಸಿ ಷೇರಿನ ಬೆಲೆ 949 ರೂ.ಗಳಿಗೆ ನಿಗದಿ

10:08 PM May 13, 2022 | |

ನವದೆಹಲಿ: ಇತ್ತೀಚೆಗಷ್ಟೇ ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಪ್ರಕ್ರಿಯೆಯನ್ನು ಮುಗಿಸಿರುವ ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಪ್ರತಿ ಷೇರಿನ ಬೆಲೆಯನ್ನು 949 ರೂ.ಗಳಿಗೆ ನಿಗದಿಗೊಳಿಸಲಾಗಿದೆ.

Advertisement

ಮೇ 17ರಂದು ಎಲ್‌ಐಸಿಯ ಎನ್‌ಎಸ್‌ಸಿಯಲ್ಲಿ ಲಿಸ್ಟಿಂಗ್‌ ಆಗಲಿದ್ದು, ಅದಕ್ಕೂ ಮುನ್ನವೇ ಪ್ರತಿ ಷೇರಿನ ದರವನ್ನು ಅಧಿಕೃತವಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.

ಐಪಿಒ ಹೂಡಿಕೆ ವೇಳೆ, ಎಲ್‌ಐಸಿ ಪಾಲಿಸಿದಾರರು ಹಾಗೂ ಇತರೆ ಸಾರ್ವಜನಿಕರು ಪ್ರತಿ ಷೇರನ್ನು ಸರ್ಕಾರ ಕೊಟ್ಟಿದ್ದ ರಿಯಾಯಿತಿ ದರದಲ್ಲಿ 889 ರೂ. ಹಾಗೂ 904 ರೂ.ಗಳಿಗೆ ಕೊಂಡಿದ್ದರು.

ಪಾಲಿಸಿದಾರರಿಗೆ ಹಾಗೂ ಖಾಸಗಿ ಖರೀದಿದಾರರಿಗೆ ಷೇರು ಬೆಲೆಯಲ್ಲಿ ವಿನಾಯ್ತಿ ನೀಡಲಾಗಿತ್ತು.

ಇದೀಗ ಕೇಂದ್ರದ ಪ್ರಕಟಣೆ ಹಿನ್ನೆಲೆಯಲ್ಲಿ, ಲಿಸ್ಟಿಂಗ್‌ನ ನಂತರ ಪ್ರತಿ ಷೇರಿನ ಬೆಲೆ 949 ರೂ.ಗಳಿಗೆ ನಿಗದಿಯಾಗಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next