Advertisement

ಶಾಸಕತ್ವದ ಅವಧಿ ಸಂಪೂರ್ಣ ಕ್ಷೇತ್ರದ ಅಭಿವೃದ್ಧಿಗೆ ಮೀಸಲು

06:35 AM Jun 26, 2018 | |

ಕಾಪು: ಮೊಗವೀರರ ಪ್ರತಿನಿಧಿಯ ನೆಲೆಯಲ್ಲಿ ಬಿಜೆಪಿ ನನಗೆ ಸ್ಪರ್ಧೆಗೆ ಅವಕಾಶ ನೀಡಿದ್ದು, ಪರಿವರ್ತನೆ ಬಯಸಿದ ಕಾಪು ಕ್ಷೇತ್ರದ ಜನತೆ ಮತ್ತು ಮತದಾರರು ಬೆಂಬಲ ನೀಡಿದ ಪರಿಣಾಮ ಶಾಸಕನಾಗಿ ಆಯ್ಕೆಯಾಗುವಂತಾಗಿದೆ. ಈ ಅವಧಿ ಯನ್ನು ಸಂಪೂರ್ಣ ಕ್ಷೇತ್ರದ ಅಭಿವೃದ್ಧಿಗಾಗಿ ಮೀಸಲಿಡಲು ಚಿಂತಿಸಿದ್ದೇನೆ ಎಂದು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

Advertisement

ಮೂಳೂರು ಮೊಗವೀರ ಮಹಾ ಸಭಾ ಮತ್ತು ಮಹಿಳಾ ಮಂಡಳಿಯ ವತಿಯಿಂದ ರವಿವಾರ ಆಯೋಜಿ ಸಲಾಗಿದ್ದ ಸಮ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಮೀನುಗಾರರ ಸಮಸ್ಯೆ 
ಪರಿಹಾರಕ್ಕೆ ಯತ್ನ 

ಸುವರ್ಣ ಗ್ರಾಮ ಯೋಜನೆಯಡಿ ಹೆಚ್ಚಿನ ಎಲ್ಲ ಪಂಚಾಯತ್‌ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಹಿಂದೆ ಶಾಸಕನಾಗಿದ್ದ ಸಂದರ್ಭ ಕೈಗೊಳ್ಳಲಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿಯೂ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು, ಹೆಜಮಾಡಿ ಬಂದರು ನಿರ್ಮಾಣ ಸಹಿತ ಕರಾವಳಿ ಮೀನುಗಾರರ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಫಲಿತಾಂಶವನ್ನು ಲೋಕಸಭಾ ಚುನಾವಣೆವರೆಗೂ ಮುಂದುವರಿಸಿ ಹಿಂದೆ ಶಾಸಕನಾಗಿದ್ದ ಸಂದರ್ಭ ಕರಾವಳಿಯ ಭಾಗದಲ್ಲಿ ನಡೆಸಿದ ಅಭಿವೃದ್ಧಿ ಕೆಲಸ ಕಾರ್ಯಗಳು, ಪ್ರಧಾನಿ ನರೇಂದ್ರ ಮೋದಿ ಅವರ ದೇಶ ಭಕ್ತಿ ಚಿಂತನೆಯ ತತ್ತಾ$Ìದರ್ಶಗಳು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಜನಪರ ಯೋಜನೆಗಳ ಸಹಕಾರದಿಂದಾಗಿ ಗೆಲುವು ಸಾಧ್ಯ ವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಇದೇ ಫಲಿತಾಂಶ ಮರುಕಳಿಸಲು ಸಹಕರಿಸುವಂತೆ ಅವರು ವಿನಂತಿಸಿದರು.

ಮೂಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ವಾಸು ಎಸ್‌. ಕಾಂಚನ್‌ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಮಾಜಿ ಅಧ್ಯಕ್ಷ ಎಸ್‌.ಕೆ. ಬಂಗೇರ, ಉಪಾಧ್ಯಕ್ಷರಾದ ಗೋಕುಲ್‌ದಾಸ್‌ ಕೆ. ಮೆಂಡನ್‌, ರಮೇಶ್‌ ಸುವರ್ಣ, ಕಾರ್ಯದರ್ಶಿ ಲೀಲಾಧರ್‌ ಮೆಂಡನ್‌, ರಘುವೀರ್‌ ಕೋಟ್ಯಾನ್‌ ಮುಂಬಯಿ, ಕೋಶಾಧಿಕಾರಿ ಪುರುಷೋತ್ತಮ ಸುವರ್ಣ, ಎನ್‌.ಆರ್‌. ಪುತ್ರನ್‌, ವಿನೋದ್‌ ಬಿ. ಸುವರ್ಣ, ಮಹಿಳಾ ಮಂಡಳಿ ಅಧ್ಯಕ್ಷೆ ವಸಂತಿ ಎಸ್‌. ಸಾಲಿಯಾನ್‌, ಉಪಾಧ್ಯಕ್ಷೆ ಚಂದ್ರಾವತಿ ಶ್ರೀಯಾನ್‌, ಕಾರ್ಯದರ್ಶಿ ಹರಿಣಾಕ್ಷಿ ಮೆಂಡನ್‌, ಕೋಶಾಧಿಕಾರಿ ಸಂಧ್ಯಾ ಕೆ. ಬಂಗೇರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next