ಧಾರವಾಡ: ಕನ್ನಡ ವಿಮಶಾ ಲೋಕದಲ್ಲಿ ಯುವ ವಿಮರ್ಶಕರೇ ಹುಟ್ಟಿಕೊಳ್ಳುತ್ತಿಲ್ಲ ಎಂದು ಸಾಹಿತಿ ಟಿ.ಪಿ.ಅಶೋಕ ವಿಷಾದ ವ್ಯಕ್ತಪಡಿಸಿದರು. ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಡಾ|ಗಿರಡ್ಡಿ ಗೋವಿಂದರಾಜ ಗೆಳೆಯರ ಮತ್ತು ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಡಾ|ಗಿರಡ್ಡಿ ಗೋವಿಂದರಾಜ ಅವರ ಸಾಹಿತ್ಯ ಸಮೀಕ್ಷೆ,
ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಡಾ|ಗಿರಡ್ಡಿ ಬರೆದ ವಿಲಂಬಿತ ವಿಮಶಾ ಕೃತಿ ಮತ್ತು ಡಾ|ಮಲ್ಲಿಕಾರ್ಜುನ ಹಿರೇಮಠ ಅವರು ಬರೆದ ಗಿರಡ್ಡಿ ಗೋವಿಂದರಾಜ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ನವೋದಯ ಮತ್ತು ನವ್ಯ ಕಾಲದಲ್ಲಿ ಸಾಹಿತಿಗಳ ಜೊತೆಗೆ ವಿಮರ್ಶಕ ಪಡೆಯೇ ಹುಟ್ಟಿಕೊಂಡಿತ್ತು.
ಸಾಹಿತ್ಯ ಮತ್ತು ಕಾವ್ಯಕ್ಕೆ ನೀಡಿದಷ್ಟೇ ಮಹತ್ವವನ್ನು ಕೆಲವಷ್ಟು ಜನರು ವಿಮಶಾì ಸಾಹಿತ್ಯಕ್ಕೂ ನೀಡಿ ಅದರಲ್ಲಿಯೇ ಸಾಹಿತ್ಯ ಕೃಷಿ ಮಾಡಿದರು. ಆದರೆ ಇಂದಿನ ಪೀಳಿಗೆಯಲ್ಲಿ ವಿಮರ್ಶಕರ ಕೊರತೆ ಅತಿಯಾಗಿ ಎದ್ದು ಕಾಣುತ್ತಿದೆ. 30ರ ಹರೆಯದ ಸಾಹಿತಿಗಳ ಪೈಕಿ ಇಡೀ ರಾಜ್ಯದಲ್ಲಿ ಒಬ್ಬನೇ ಒಬ್ಬ ವಿಮರ್ಶಕ ಕಾಣುತ್ತಿಲ್ಲ ಎಂದು ವಿಷಾದಿಸಿದರು.
ಇನ್ನು ಕೃತಿಗಳು ಪ್ರಕಟಗೊಳ್ಳುವ ಮುಂಚೆಯೇ ಇಂದಿನ ಯುವ ಸಾಹಿತಿಗಳಿಗೆ ಪ್ರಶಸ್ತಿಗಳು ಬಂದು ಬಿಡುತ್ತಿವೆ. ಹಸ್ತಪ್ರತಿ ಇರುವಾಗಲೇ ಪ್ರಶಸ್ತಿ ಬರುತ್ತಿವೆ. ಹೀಗಿರುವಾಗ ಅವರಿಂದ ಉತ್ತಮ ಮತ್ತು ಶ್ರೇಷ್ಠ ಕೃತಿಯನ್ನು ನಿರೀಕ್ಷಿಸುವುದು ಕಷ್ಟವಾಗುತ್ತಿದೆ. ಕೃತಿಯ ಮುಖಪುಟ ನೋಡಿ ಸಾಮಾಜಿಕ ಜಾಲತಾಣದಲ್ಲಿಯೇ ಲೈಕ್ಸ್ ಕೊಡುವ ಪದ್ಧತಿ ಆರಂಭಗೊಂಡಿದೆ ಎಂದರು.
ಕೃತಿ ರಚಿಸಿದ ಡಾ|ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಡಾ|ಗಿರಡ್ಡಿ ಅವರ ಕುರಿತು ಪುಸ್ತಕ ಬರೆಯಲು ನನಗೆ ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಷಯ. ಈ ಕೃತಿಯಲ್ಲಿ ನನಗೆ ಎಲ್ಲಾ ವಿಚಾರವನ್ನು ಕಟ್ಟಿಕೊಡಲು ಆಗಿಲ್ಲ. ಆದರೂ ಉತ್ತಮ ಕೃತಿ ಬರೆದಿದ್ದೇನೆ ಎನ್ನುವ ತೃಪ್ತಿ ಇದೆ ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ|ಗುರುಲಿಂಗ ಕಾಪಸೆ, ಡಾ|ಗಿರಡ್ಡಿ ಅವರು ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರು. ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.
ಸಾಕ್ಷ ಚಿತ್ರ ಪ್ರದರ್ಶನ: ಡಾ|ಗಿರಡ್ಡಿ ಗೋವಿಂದರಾಜ ಅವರ ಸಮಗ್ರ ಜೀವನ ಮತ್ತು ಸಾಹಿತ್ಯ ಕುರಿತ 30 ನಿಮಿಷಗಳ ಸಾಕ್ಷéಚಿತ್ರ ಪ್ರದರ್ಶನ ಕೂಡ ನಡೆಯಿತು.