Advertisement
ಜಿಎಂ ಹಾಲಮ್ಮ ಪಿಯು ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಭದ¤ರಾ ಕಲಂ, ಗಡಿಪಾರು ಪ್ರಕ್ರಿಯೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತ ಯಂತ್ರದ ಪ್ರಮುಖ ಇಲಾಖೆಗಳಾದ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಾನೂನಿನಲ್ಲಿ ಕೆಲ ಉತ್ತಮ ಅವಕಾಶ ಇವೆ.
Related Articles
Advertisement
ಕಂದಾಯ, ಪೊಲೀಸ್ ಎರಡೂ ಇಲಾಖೆಗಳಿಗೂ ಸಮನ್ವಯತೆ, ಸೌಹಾರ್ದತೆ ಅತ್ಯಗತ್ಯವಾಗಿದೆ. ಉಭಯ ಇಲಾಖೆ ಅಧಿಧಿಕಾರಿಗಳಿಗೆ ಇಂತಹ ಕಾನೂನು ಬಗ್ಗೆ ಅರಿವು, ಜಾಗೃತಿ ಮೂಡಿಸಲು ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಈ ಕಾರ್ಯಾಗಾರದಿಂದ ಕಾನೂನು, ಸೌಹಾರ್ದತೆ ಕಾಪಾಡುವ ಹಾದಿಯೂ ಸುಗಮವಾಗುತ್ತದೆ.
ಕಾನೂನಿನಲ್ಲಿರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಹ ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮಾತನಾಡಿ, ಇಂದು ಸಮಾಜ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಅದರೊಟ್ಟಿಗೆ ಸಮಸ್ಯೆಗಳೂ ಸಹ ಜಟಿಲಗೊಳ್ಳುತ್ತಿವೆ.
ಅಧಿಕಾರಿ, ಸಿಬ್ಬಂದಿ ಇದರಿಂದ ಸಹಜವಾಗಿಯೇ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಚಿಕ್ಕಪುಟ್ಟ ವಿಷಯಗಳೂ ಸಹಿತ ದೊಡ್ಡ ಸಮಸ್ಯೆಯಾಗಿ ಗೋಚರಿಸುವಂತಹ ಸ್ಥಿತಿ ಬಂದಿದೆ. ಇದು ಸಿಬ್ಬಂದಿ ಮೇಲೆ ಇನ್ನಷ್ಟು ಒತ್ತಡ ಸೃಷ್ಟಿಸುತ್ತಿದೆ ಎಂದರು. ಹಿರಿಯ ಅಧಿಕಾರಿಗಳು ತಮ್ಮ ಅಧಿಕಾರದ ಸಂಪೂರ್ಣ ಮಾಹಿತಿ, ಅರಿವು ಹೊಂದಿರಬೇಕು. ಸಿಬ್ಬಂದಿಗೆ ಸಮಸ್ಯೆಯಾಗದಂತೆ ಕಾನೂನು ಅನುಷ್ಠಾನಗೊಳಿಸುವ ಮಾರ್ಗದರ್ಶನ ನೀಡಬೇಕು.
ಆದರೆ, ಬಹುತೇಕ ಅಧಿಕಾರಿಗಳು ಕೆಲ ಸಂದರ್ಭದಲ್ಲಿ ತಮಗೆ ಇರುವ ಅಧಿಧಿಕಾರದ ಪರಿಮಿತಿ ತಿಳಿಯದೆ ಪ್ರಕರಣ ಬಿದ್ದು ಹೋಗಿವೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಹೆಚ್ಚುವರಿ ಪೊಲೀಸ್ ಅಧಿಧೀಕ್ಷಕಿ ಯಶೋಧ ವಂಟಿಗೋಡಿ, ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗಿಯಾದರು.