Advertisement

ಸಮಾನತೆ ಮೂಡಿಸಲು ಮಾಚಿದೇವರ ಶ್ರಮ

12:27 PM Feb 19, 2018 | Team Udayavani |

ಕೆ.ಆರ್‌.ಪುರ: ಸಾಮಾಜಿಕ ಅಸಮಾನತೆ ನಡುವೆ ತುಳಿತಕ್ಕೊಳಗಾದವರನ್ನು ಸಬಲರನ್ನಾಗಿಸಲು ಶ್ರಮಿಸಿದ ಶ್ರೇಷ್ಠ ಶರಣ ಮಡಿವಾಳ ಮಾಚಿದೇವರು ಎಂದು ಶಾಸಕ ಬಿ.ಎ.ಬಸವರಾಜ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಸ್ವತಂತ್ರನಗರದಲ್ಲಿ ಶ್ರೀ ಮಾಚಿ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಮಡಿವಾಳರ ಹಬ್ಬ ಮತ್ತು ದೋಭಿಘಾಟ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಒಂದು ವರ್ಗ ಎದುರಿಸುತ್ತಿದ್ದ ಕೀಳರಿಮೆ, ಸಂಕಷ್ಟಗಳನ್ನು ತೊಲಗಿಸುವ ಧ್ಯೇಯ ಹೊಂದಿದ್ದ ಮಾಚಿದೇವರು, ಸಾಮಾಜಿಕ ಕ್ರಾಂತಿ ಕೈಗೊಂಡು ಸಮಾಜವನ್ನು ಅಸಮಾನತೆಯಿಂದ ಮುಕ್ತಗೊಳಿಸಲು ಶ್ರಮಿಸಿದ್ದರು, ಅನುಭವಮಂಟಪ ಕಟ್ಟುವಲ್ಲೂ ಅವರ ಪಾತ್ರ ಪ್ರಮುಖವಾಗಿತ್ತು ಎಂದರು.

ಬಸವನಪುರ ಗ್ರಾಮದ ಒಂದು ಎಕರೆ 20 ಗುಂಟೆ ಪ್ರದೇದಲ್ಲಿ 3 ಕೋಟಿ ವೆಚ್ಚದಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ದೋಭಿಘಾಟ್‌ ಉದ್ಘಾಟಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ 3 ಕೋಟಿ ಅನುದಾನ ಪಡೆದು, ಮಡಿವಾಳ ಸಮಾಜದವರು ಮದುವೆ ಮತ್ತಿತರ ಶುಭ ಕಾರ್ಯ ನಡೆಸಲು ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮಡಿವಾಳ ಮಾಚಿ ದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಹಾಗೇ ಮಡಿವಾಳ ಸಾಮುದಾಯದವರಿಗೆ ವಿದ್ಯುತ್‌ ಚಾಲಿತ ಇಸಿŒಪೆಟ್ಟಿಗೆಗಳನ್ನು ವಿತರಿಸಲಾಯಿತು. ಮಾಚಿ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್‌.ಕೃಷ್ಣಪ್ಪ, ಪಾಲಿಕೆ ಸದಸ್ಯ ಜಯಪ್ರಕಾಶ್‌, ಆಂತೋಣಿಸ್ವಾಮಿ, ಕಲ್ಕೆರೆ ಕೃಷ್ಣಮೂರ್ತಿ, ಬಿ.ವಿ.ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next